ETV Bharat / international

'ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕಾಶ್ಮೀರ ವಿವಾದ ಇತ್ಯರ್ಥವಾಗ್ಬೇಕು': ಪಾಕ್​ ನಿಯೋಜಿತ ಪ್ರಧಾನಿ - ಕಾಶ್ಮೀರ ವಿವಾದದ ಬಗ್ಗೆ ಪಾಕ್ ಪ್ರಧಾನಿ ಮಾತು

ನೂತನ ಪ್ರಧಾನಿ ಆಗಿ ಆಯ್ಕೆಯಾಗಿರುವ ಶೆಹಬಾಜ್ ಪರೀಫ್​ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರ ವಿಚಾರವಾಗಿ ಮಾತನಾಡಿದ್ದು, ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕಾಶ್ಮೀರ ವಿಚಾರ ಇತ್ಯರ್ಥವಾಗಬೇಕು ಎಂದಿದ್ದಾರೆ.

Shehbaz Sharif talk on Kashmir issue
Shehbaz Sharif talk on Kashmir issue
author img

By

Published : Apr 11, 2022, 8:20 PM IST

ಇಸ್ಲಾಮಾಬಾದ್​(ಪಾಕಿಸ್ತಾನ): ಇಮ್ರಾನ್ ಖಾನ್​ ಬಹುಮತ ಕಳೆದುಕೊಳ್ಳುತ್ತಿದ್ದಂತೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ವಿಪಕ್ಷ ಮೈತ್ರಿಕೂಟದ ಪ್ರಮುಖ ಹಾಗೂ ಪಿಎಂಎಲ್‌-ಎನ್‌ ನಾಯಕ ಶೆಹಬಾಜ್‌ ಷರೀಫ್‌ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರುವ ಅವರು, ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಬೇಕಾದರೆ ಕಾಶ್ಮೀರ ವಿವಾದ ಇತ್ಯರ್ಥವಾಗಬೇಕು ಎಂದಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಪಾಕ್ ನಿಯೋಜಿತ ಪ್ರಧಾನಿ

ಸಂಸತ್​​ನಲ್ಲಿ ಮಾತನಾಡಿರುವ ಅವರು, ಭಾರತದೊಂದಿಗೆ ನಾವು ಉತ್ತಮ ಸಂಬಂಧ ಬೆಳೆಸಲು ಬಯಸುತ್ತೇವೆ. ಆದರೆ, ಜಮ್ಮು-ಕಾಶ್ಮೀರದ ವಿವಾದ ಇತ್ಯರ್ಥವಾಗುವುದಕ್ಕೂ ಮುಂಚೆ ಅದು ಸಾಧ್ಯವಿಲ್ಲ ಎಂದಿದ್ದು, ಈ ವಿಚಾರವನ್ನ ನಾವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲು ಮುಂದಾಗುತ್ತೇವೆ ಎಂದಿದ್ದಾರೆ. ಈ ಮೂಲಕ ಪ್ರಧಾನಿ ಪಟ್ಟ ಅಲಂಕಾರ ಮಾಡುವುದಕ್ಕೂ ಮುಂಚಿತವಾಗಿ ಭಾರತದ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಸಾರ್ವಜನಿಕ ಭಾಷಣಗಳಲ್ಲಿ ವೇಳೆ ಅನೇಕ ಸಲ ಸಂಯಮ ಕಳೆದುಕೊಳ್ಳುವ ಇವರು, ಈ ಹಿಂದೆ ಕೂಡ ಅನೇಕ ಸಲ ಜಮ್ಮು-ಕಾಶ್ಮೀರದ ವಿಚಾರವಾಗಿ ಶೆಹಬಾಜ್ ಷರೀಫ್ ಮಾತನಾಡಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಪಾಕ್​ ನೂತನ ಪ್ರಧಾನಿಯಾಗಿ ಶೆಹಬಾಜ್‌ ಷರೀಫ್‌ ಅವಿರೋಧ ಆಯ್ಕೆ: ಇಂದೇ ಪ್ರಮಾಣ ವಚನ

ಪಾಕಿಸ್ತಾನದ ಪ್ರಧಾನಿಗಳು ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುಂಚಿತವಾಗಿ ಕಾಶ್ಮೀರದ ವಿಚಾರವಾಗಿ ಮಾತನಾಡಿರುವ ಯಾವುದೇ ಉದಾಹರಣೆಗಳು ಇಲ್ಲ. ಆದರೆ, ಶೆಹಬಾಜ್​ ಇದೀಗ ಕಾಶ್ಮೀರದ ಬಗ್ಗೆ ಮಾತನಾಡಿದ್ದಾರೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರನಾಗಿರುವ ಶೆಹಬಾಜ್​ ಇಂದು ರಾತ್ರಿ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದು, ಹೊಸ ಸಚಿವ ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.