ನ್ಯೂಯಾರ್ಕ್ ( ಅಮೆರಿಕ): ಸರ್ಕಾರಿ ಸ್ವಾಮ್ಯದ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಿ ನ್ಯೂಯಾರ್ಕ್ ಆಡಳಿತ ಆದೇಶಿಸಿದೆ. ಭದ್ರತಾ ಕಾಳಜಿಯ ಕಾರಣದಿಂದಾಗಿ ಅಲ್ಲಿನ ಸ್ಥಳೀಯ ಆಡಳಿತ ಟಿಕ್‌ಟಾಕ್ ನಿಷೇಧಿಸಿದೆ. ಈ ಕಿರು ವಿಡಿಯೋ ಅಪ್ಲಿಕೇಶನ್ ಪ್ರವೇಶ ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ಈಗ ನ್ಯೂಯಾರ್ಕ್ ರಾಜ್ಯ ಸಹ ಸೇರಿಕೊಂಡಿದೆ ಎಂದು ಅಮೆರಿಕ ಪ್ರಮುಖ ಪತ್ರಿಕೆ ವರದಿ ಮಾಡಿದೆ.
ಚೀನಾದ ಕಂಪನಿ ಬೈಟ್‌ಡ್ಯಾನ್ಸ್ ಒಡೆತನದ ಈ ಟಿಕ್‌ಟಾಕ್ ಅಪ್ಲಿಕೇಶನ್, ಬಳಕೆದಾರರ ಡೇಟಾಗೆ ಬೀಜಿಂಗ್ ಪ್ರವೇಶ ಮಾಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ರಾಜ್ಯಾಡಳಿತ ಈ ಕ್ರಮ ಕೈಗೊಂಡಿದೆ. ನ್ಯೂಯಾರ್ಕ್ನ ಮೇಯರ್ ಎರಿಕ್ ಆಡಮ್ಸ್ ಅವರ ವಕ್ತಾರ ಜೋನಾ ಅಲನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರದ ಸೈಬರ್ ಕಮಾಂಡ್ ಶಿಫಾರಿಸಿನ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿರುವ ಅವರು, ನಗರದ ತಾಂತ್ರಿಕ ನೆಟ್‌ವರ್ಕ್‌ಗಳಿಗೆ ಭದ್ರತಾ ಬೆದರಿಕೆ ಇದೆ. ಹೀಗಾಗಿ ಈ ಅಪ್ಲಿಕೇಶನ್ ಬಳಕೆ ತಡೆ ಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಎಲ್ಲ ಏಜೆನ್ಸಿಗಳು 30 ದಿನಗಳ ಒಳಗೆ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಅನ್ ಇನ್ಸ್ಟಾಲ್ ಮಾಡಬೇಕು ಎಂದು ಸೂಚಿಸಿದೆ. ಉದ್ಯೋಗಿಗಳು ಸರ್ಕಾರ ಒದಗಿಸಿರುವ ಮೊಬೈಲ್ ಸಾಧನಗಳು ಮತ್ತು ನೆಟ್‌ವರ್ಕ್‌ಗಳಿಂದ TikTok ಮತ್ತು ಅದರ ವೆಬ್‌ಸೈಟ್‌ಗೆ ಪ್ರವೇಶವನ್ನು ನೀಡಲು ಇನ್ಮುಂದೆ ಸಾಧ್ಯವಾಗುವುದಿಲ್ಲ ಎಂದು ನ್ಯೂ ಯಾರ್ಕ್ ಆಡಳಿತ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯೂಯಾರ್ಕ್ ರಾಜ್ಯಾಡಳಿತ ಕೆಲವು ವಿನಾಯಿತಿಗಳೊಂದಿಗೆ ಮೂರು ವರ್ಷಗಳಿಗೂ ಹೆಚ್ಚು ಕಾಲ TikTok ನಿಷೇಧಿಸಿ ಆದೇಶಿಸಿದೆ.
ಎಲ್ಲೆಲ್ಲಿ ನಿಷೇಧ: ನಗರದ ನೈರ್ಮಲ್ಯ ಇಲಾಖೆ, ಉದ್ಯಾನ ಮತ್ತು ಮನರಂಜನಾ ಇಲಾಖೆ, ರಾಜ್ಯಾಡಳಿತದ ಆದೇಶದೊಂದಿಗೆ ತಮ್ಮ ಬಯೋವನ್ನು ನವೀಕರಿಸಿದೆ. ಟಿಕ್ ಟಾಕ್ ಖಾತೆಯನ್ನು ಆಗಸ್ಟ್ 2023 ರವರೆಗೆ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಆ ಬಳಿಕ ಈ ಅಪ್ಲಿಕೇಷನ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂದು ಅಲ್ಲಿನ ಪ್ರಮುಖ ಪತ್ರಿಕೆ ವರದಿ ಮಾಡಿದೆ.
ಸರ್ಕಾರದ ಅಧಿಕೃತ ಸಾಧನಗಳಿಗೆ ಮಾತ್ರ ಈ ಅಪ್ಲಿಕೇಶನ್ ನಿರ್ಬಂಧಿಸಲಾಗಿದೆ. ಮೊಂಟಾನಾ ಆಡಳಿತ ಇತ್ತೀಚೆಗೆ ರಾಜ್ಯಾದ್ಯಂತ ಟಿಕ್‌ಟಾಕ್ ಅನ್ನು ನಿರ್ಬಂಧಿಸುವ ಮಸೂದೆ ಅಂಗೀಕರಿಸಿದೆ. ಜನವರಿ 1 ರಂದು ಜಾರಿಗೆ ಬರಲಿರುವ ಹೊಸ ಕಾನೂನು, ಟಿಕ್ಟಾಕ್ನ ಎಲ್ಲ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ.
ಈ ನಡುವೆ ನ್ಯೂಯಾರ್ಕ್ ಆಡಳಿತ ಟಿಕ್‌ಟಾಕ್ ನಿಷೇಧಿಸಿರುವ ಬಗ್ಗೆ ಪ್ರತಿಕ್ರಿಯಿಸಲು TikTok ನಿರಾಕರಿಸಿದೆ. ನಗರದ ನೈರ್ಮಲ್ಯ ವಿಭಾಗವು ಟಿಕ್ ಟಾಕ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸುಮಾರು 50,000 ಫಾಲೋವರ್ಸ್ಗಳು ತನ್ನ ಕೆಲಸಗಾರರನ್ನು ಹುರಿದುಂಬಿಸಲು, ಕೆಲಸಗಾರರ ಬಗ್ಗೆ ಮಾಹಿತಿ ನೀಡಲು ಈ ಟಿಕ್ ಟಾಕ್ ಬಳಸುತ್ತಿವೆ. ಆದರೆ ಈಗ ಸರ್ಕಾರ ಈ ಆ್ಯಪ್ ನಿಷೇಧ ಮಾಡಿರುವುದು ಇಲಾಖೆಗೆ ತುಸು ಸಂಕಷ್ಟವನ್ನು ತಂದೊಡ್ಡಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ವಾಟ್ಸ್ಆ್ಯಪ್ ಚಾಟ್ಸ್ಗಳನ್ನು ಸುರಕ್ಷಿತವಾಗಿರಿಸಲು ಬರ್ತಿದೆ ಹೊಸ ವೈಶಿಷ್ಟ್ಯ..! ಅದರ ಉಪಯೋಗ ಮತ್ತು ಮಹತ್ವ ತಿಳಿಯಿರಿ