ಒಂಟಾರಿಯೊ (ಕೆನಡಾ): ಈ ತಿಂಗಳ ಆರಂಭದಲ್ಲಿ ಭೂಮಿಯ ತಾಪಮಾನ ಹಿಂದೆಂದಿಗಿಂತಲೂ ಬಹಳ ಅಧಿಕವಾಗಿದ್ದಾಗಿದೆ ಎಂದು ವರದಿಯಾಗಿತ್ತು. ಅಲ್ಲದೇ ಇದಕ್ಕೆ ಸಾಕ್ಷಿಯೆಂಬಂತೆ ಈ ಹಿಂದೆ ಹವಾಮಾನ ಮಾದರಿಯು, ಭೂಮಿಯ ಮೇಲಿನ ಶಾಖದ ಅಲೆಗಳ ತೀವ್ರತೆ ಹೆಚ್ಚಳವಾಗಲಿದೆ ಮತ್ತು ಗಾಳಿಯ ಗುಣಮಟ್ಟವೂ ಹದಗೆಡುತ್ತದೆ ಎಂದು ಹೇಳಿತ್ತು. ಇದೆಲ್ಲದರ ಪರಿಣಾಮ ಎಂಬಂತೆ ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಊಹಿಸಿತ್ತು. ಇದೀಗ ಇದರ ಬಗ್ಗೆ ಎಚ್ಚೆತ್ತಿರುವ ವಾಟರ್‌ಲೂ ವಿಶ್ವವಿದ್ಯಾನಿಲಯ ಮತ್ತು ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಸಂಶೋಧಕರು ಆರೋಗ್ಯದ ಮೇಲಿನ ಪರಿಣಾಮವನ್ನು ವಿಶ್ಲೇಷಿಸಲು ಡೇಟಾ ಸಂಗ್ರಹಣಾ ತಂತ್ರವನ್ನು ವರ್ಧಿಸಿದ್ದಾರೆ.
ಉದಾಹರಣೆಗೆ, ರಾತ್ರಿಯ ವೇಳೆ ತಾಪಮಾನವು 18.4 ಡಿಗ್ರಿ ಸೆಲ್ಸಿಯಸ್‌ನಿಂದ ಪ್ರಾರಂಭವಾಗುತ್ತದೆ. ಇದರಿಂದಾಗಿ 35 - 60 ವರ್ಷದವರಲ್ಲಿ ಮತ್ತು ಹೃದಯರಕ್ತನಾಳದ ತೊಂದರೆ ಅನುಭವಿಸುತ್ತಿರುವವರು ಹೆಚ್ಚು ಬಾರಿ ತಪಾಸಣೆಗೆ ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಅಲ್ಲದೇ, ಇದರಿಂದ ಸಾಕಷ್ಟು ಸಾವುಗಳು ಸಂಭವಿಸಬಹುದು ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಹವಾಮಾನ ಬದಲಾವಣೆಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಹಾಗೂ ಗಾಳಿಯಲ್ಲಿನ ಕಳಪೆ ಗುಣಮಟ್ಟವನ್ನು ತಗ್ಗಿಸುವಿಕೆಗೆ ಅನುಸರಿಸುವ ಕ್ರಮಗಳನ್ನು ಅಧ್ಯಯನ ಮಾಡಲು ಹೊಸ ವಿಧಾನವು ಸಹಾಯ ಮಾಡುತ್ತದೆ ಎಂಬುದು ಈ ಅಧ್ಯಯನದಿಂದ ತಿಳಿದು ಬಂದಿದೆ.
ಹವಾಮಾನ ವೈಪರೀತ್ಯಗಳಿಗಿಂತ ಹೆಚ್ಚಿನ ಸಾವು ಸಂಭವ: ಹೀಗಾಗಿ, ವಾತಾವರಣದಲ್ಲಿ ತಾಪಮಾನವನ್ನು ತಗ್ಗಿಸುವ ಉದ್ದೇಶಕ್ಕಾಗಿ ಹಾಗೂ ನೆರಳಿಗಾಗಿ ಹೆಚ್ಚು ಮರಗಳನ್ನು ನೆಡುವುದು, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳನ್ನು ಚಲಾಯಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದು, ಆಸ್ಪತ್ರೆಗಳು ಮತ್ತು ದೀರ್ಘಾವಧಿಯ ಆರೈಕೆ ಮನೆಗಳನ್ನು ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. "ಕೆನಡಾದಲ್ಲಿ ಶಾಖದ ಅಲೆಗಳು ಯಾವುದೇ ಇತರ ಹವಾಮಾನ ಅಪಾಯಗಳಿಗಿಂತ ಹೆಚ್ಚಿನ ಸಾವುಗಳನ್ನು ಉಂಟುಮಾಡುತ್ತವೆ" ಎಂದು ವಾಟರ್ಲೂನಲ್ಲಿರುವ ಸ್ಕೂಲ್ ಆಫ್ ಎನ್ವಿರಾನ್ಮೆಂಟ್, ಎಂಟರ್ಪ್ರೈಸಸ್ ಮತ್ತು ಡೆವಲಪ್ಮೆಂಟ್ನಲ್ಲಿ ಪೋಸ್ಟ್ಡಾಕ್ಟರಲ್ ಸಂಶೋಧಕರಾದ ಡಾ. ಮೊಹಮದ್ ದರ್ದಿರ್ ಹೇಳಿದ್ದಾರೆ.
"ಹವಾಮಾನ ತುರ್ತು ಪರಿಸ್ಥಿತಿಗಳಿಗೆ ಪೂರ್ವಭಾವಿಯಾಗಿ ಮತ್ತು ಯೋಜನೆಯಲ್ಲಿ ನಾವು ಉತ್ತಮವಾಗುತ್ತಿದ್ದೇವೆ. ಆದರೆ, ಪ್ರವಾಹಗಳು ಮತ್ತು ಬೆಂಕಿಯಂತಹ ದೊಡ್ಡ ವಿಪತ್ತುಗಳಿಗೆ ನಾವು ಪ್ರತಿಕ್ರಿಯಿಸುವಲ್ಲಿ ಶಕ್ತರಾಗಿಲ್ಲ." ಎಂದು ಅವರು ತಿಳಿಸಿದ್ದಾರೆ. ನಾವು ಕೈಗೊಂಡಿರುವ ಅಧ್ಯಯನವು ಮಿಸಿಸೌಗಾ ಮತ್ತು ಬ್ರಾಂಪ್ಟನ್, ಒಂಟಾರಿಯೊದಲ್ಲಿ ವಸಂತ ಮತ್ತು ಬೇಸಿಗೆಯ ತಾಪಮಾನವನ್ನು ವಿಶ್ಲೇಷಿಸಲಿದೆ. ಗಾಳಿಯ ಗುಣಮಟ್ಟ ಮತ್ತು ಶಾಖದ ಮೇಲೆ ಡೇಟಾವನ್ನು ಸಂಯೋಜಿಸುವ ಮೂಲಕ, ಪುರಸಭೆಯ ಮಟ್ಟದಲ್ಲಿ ದುರ್ಬಲ ಜನರ ಮೇಲೆ ಪರಿಣಾಮ ಬೀರುವ ಹಾಗೂ ಅಲ್ಪಾವಧಿಯ ಆರೋಗ್ಯದ ಅಪಾಯಗಳ ಬಗ್ಗೆ ಅಧ್ಯಯನ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ಬಿರುಗಾಳಿ-ಪ್ರವಾಹದಂತಹ ಅಪಾಯ: ತಾಪಮಾನದಲ್ಲಿನ ಏರಿಕೆಯಿಂದ ಈ ಪ್ರದೇಶಗಳಲ್ಲಿ ಸಾವು- ನೋವುಗಳು ಹೆಚ್ಚಾಗಿವೆ ಮತ್ತು ಅಲ್ಲದೇ ಜನರು ಆಸ್ಪತ್ರೆಗೆ ಭೇಟಿ ನೀಡುವ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಸಂಶೋಧನೆಗಳು ದೃಢಪಡಿಸುತ್ತಿವೆ. ಶಾಖದ ದಿನದಂದು ಕಳಪೆ ಗಾಳಿಯ ಗುಣಮಟ್ಟ ಕಂಡುಬರುವುದರಿಂದ, ಹೆಚ್ಚಿನ ಜನರ ಸಾವುಗಳು ಸಂಭವಿಸುತ್ತಿವೆ. ಭವಿಷ್ಯದಲ್ಲಿ ಬಿರುಗಾಳಿಗಳು ಮತ್ತು ಪ್ರವಾಹಗಳಂತಹ ಹೆಚ್ಚಿನ ಪರಿಸರ ಅಪಾಯಗಳು ಎದುರಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಒಂಟಾರಿಯೊ ಮತ್ತು ಇತರ ಪ್ರಾಂತ್ಯಗಳಲ್ಲಿನ ಪುರಸಭೆಗಳಾದ್ಯಂತ ಆಂಬ್ಯುಲೇಟರಿ ಕರೆಯನ್ನು ಸೇರಿದಂತೆ ಇತರೆ ಸಹಾಯಕ ಅಂಶಗಳನ್ನು ಸೇರಿಸಲು ತಂಡವು ಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಕೆಲಸವು ನಾಗರಿಕ ಸಮಾಜ ಮತ್ತು ನೀತಿ ನಿರೂಪಕರು ಈ ಹವಾಮಾನ ಘಟನೆಗಳ ಪ್ರಮಾಣವನ್ನು ಗ್ರಹಿಸಲು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದಲ್ಲಿ ಹೂಡಿಕೆಗಳನ್ನು ಸಮರ್ಥಿಸಲು, ತುರ್ತುಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವವರನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಆರೋಗ್ಯಕ್ಕಾಗಿ ಜನರು ಹೆಚ್ಚಿನ ಹಣ ವ್ಯಯಗೊಳಿಸಬೇಕಿಲ್ಲ: 'ತಾಪಮಾನದ ಬಿಸಿಯ ಪರಿಣಾಮಗಳನ್ನು ತಗ್ಗಿಸಲು ಪುರಸಭೆಗಳು ಹೆಚ್ಚಿನ ಆರ್ಥಿಕ ಹೊರೆಯನ್ನು ನಿರ್ವಹಿಸಬಹುದು. ಆದರೆ, ಇದರಿಂದಾಗಿ ಅಲ್ಲಿನ ಪ್ರ್ಯಾಂತದ ಜನರು ಆರೋಗ್ಯಕ್ಕಾಗಿ ಹೆಚ್ಚಿನ ಹಣ ವಿನಿಯೋಗಿಸುವುದನ್ನು ತಪ್ಪಿಸುತ್ತದೆ' ಎಂದು ವಾಟರ್ಲೂನ ಪರಿಸರ ವಿಭಾಗದ ಪರಿಸರ, ಉದ್ಯಮ ಮತ್ತು ಅಭಿವೃದ್ಧಿ ಶಾಲೆಯ ಪ್ರಾಧ್ಯಾಪಕ ಡಾ. ಜೆಫ್ರಿ ವಿಲ್ಸನ್ ಹೇಳಿದ್ದಾರೆ.
ಇದನ್ನೂ ಓದಿ: ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳ ಬಗ್ಗೆ ಅಮೆರಿಕ ಮರೆ ಮಾಚುತ್ತಿದೆ: ಮಾಜಿ ಗುಪ್ತಚರ ಅಧಿಕಾರಿ!