ETV Bharat / international

28ನೇ ಬಾರಿ ಮೌಂಟ್ ಎವರೆಸ್ಟ್​ ಏರಿ ದಾಖಲೆ ಬರೆದ ಕಾಮಿ ರೀಟಾ ಶೆರ್ಪಾ - ಮಾರ್ಗದರ್ಶಕ ಪಸಾಂಗ್ ದಾವಾ ಶೆರ್ಪಾ

ನೇಪಾಳದ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ 28ನೇ ಬಾರಿಗೆ ಯಶಸ್ವಿಯಾಗಿ ಮೌಂಟ್ ಎವರೆಸ್ಟ್​ ಏರಿ ದಾಖಲೆ ಬರೆದಿದ್ದಾರೆ.

Nepal's Kami Rita Sherpa climbs Mt. Everest for record 28th time

author img

By

Published : May 23, 2023, 6:29 PM IST

ಕಠ್ಮಂಡು : ನೇಪಾಳದ ಪ್ರಖ್ಯಾತ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 28ನೇ ಬಾರಿಗೆ ಮೌಂಟ್ ಎವರೆಸ್ಟ್​ ಏರಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್​ ಎವರೆಸ್ಟ್​ ಅನ್ನು 27 ನೇ ಬಾರಿಗೆ ಏರಿದೆ ಕೇವಲ ಒಂದು ವಾರದ ನಂತರ ಮಂಗಳವಾರ ಮತ್ತೆ ಏರಿ ದಾಖಲೆ ಬರೆದಿದ್ದಾರೆ. 53 ವರ್ಷದ ಅವರು 848.86 ಮೀಟರ್ ಎತ್ತರದ ಶಿಖರವನ್ನು 9.23 ಗಂಟೆಗೆ ತಲುಪಿದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

"ಕಾಮಿ ರೀಟಾ ಶೆರ್ಪಾ ಮಂಗಳವಾರ 28 ನೇ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ" ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪರ್ವತಾರೋಹಣ ವಿಭಾಗದ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಖಚಿತ ಪಡಿಸಿದ್ದಾರೆ. "ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಪ್ರಸ್ತುತ ಕೆಳಗಿನ ಶಿಬಿರಗಳಿಗೆ ಇಳಿಯುತ್ತಿದ್ದಾರೆ" ಎಂದು ಕಾಮಿಯೊಂದಿಗೆ ಸಂಪರ್ಕ ಹೊಂದಿರುವ ಏಜೆನ್ಸಿಯಾದ ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಗ್ಮಾ ಶೆರ್ಪಾ ತಿಳಿಸಿದ್ದಾರೆ.

ಮೇ 17 ರಂದು ಕಾಮಿ 27 ನೇ ಬಾರಿಗೆ ಪರ್ವತವನ್ನು ಏರಿದ್ದರು. ಇನ್ನೊಬ್ಬ ನೇಪಾಳಿ ಮಾರ್ಗದರ್ಶಕ ಪಸಾಂಗ್ ದಾವಾ ಶೆರ್ಪಾ ಕೂಡ ಸೋಮವಾರ 27 ನೇ ಬಾರಿಗೆ ಶಿಖರವನ್ನು ತಲುಪಿದರು. ಕಾಮಿ ರೀಟಾ ಅವರು ಮೇ 13, 1994 ರಂದು ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರಿದ್ದರು. ಎವರೆಸ್ಟ್ ಜೊತೆಗೆ ಅವರು K2 ಮತ್ತು ಲೋಹಟ್ಸೆ (Lhotse) (ತಲಾ ಒಂದು ಬಾರಿ), ಮನಸ್ಲು (ಮೂರು ಬಾರಿ) ಮತ್ತು ಚೋ ಓಯು (ಎಂಟು) ಶಿಖರಗಳನ್ನು ಕೂಡ ಏರಿದ್ದಾರೆ. ಅವರು 8,000 ಮೀ ಗಿಂತ ಹೆಚ್ಚು ಏರಿದ ದಾಖಲೆಯನ್ನು ಹೊಂದಿದ್ದಾರೆ.

ಅವರ ಪರ್ವತಾರೋಹಣ ಪ್ರಯಾಣವು 1992 ರಲ್ಲಿ ಆರಂಭವಾಗಿತ್ತು. ಆಗ ಅವರು ಸಹಾಯಕ ಸಿಬ್ಬಂದಿ ಸದಸ್ಯನಾಗಿ ಎವರೆಸ್ಟ್‌ ಏರಲು ಆರಂಭಿಸಿದ್ದರು. ಅದೇ ರೀತಿ, ಬ್ರಿಟಿಷ್ ಪರ್ವತ ಮಾರ್ಗದರ್ಶಕ ಕೆಂಟನ್ ಕೂಲ್ ಅವರು 17 ಬಾರಿ ಎವರೆಸ್ಟ್ ಶಿಖರದಲ್ಲಿ ನಿಂತು ತಮ್ಮ ದಾಖಲೆಯನ್ನು ಮುರಿದರು. ವಿದೇಶಿ ಪರ್ವತಾರೋಹಿಗಳ ಪೈಕಿ ಇವರು ಎವರೆಸ್ಟ್ ನ ಅತಿ ಹೆಚ್ಚು ಶಿಖರಗಳನ್ನು​ ಏರಿರುವ ಹೆಗ್ಗಳಿಕೆ ಹೊಂದಿದ್ದಾರೆ. 65 ದೇಶಗಳು ಮತ್ತು ಪ್ರದೇಶಗಳಿಂದ ದಾಖಲೆಯ 478 ಆರೋಹಿಗಳಿಗೆ ವಸಂತ ಆರೋಹಣ ಕಾಲದಲ್ಲಿ ಮೌಂಟ್ ಎವರೆಸ್ಟ್ ಅನ್ನು ಏರಲು ಅನುಮತಿ ನೀಡಲಾಗಿದೆ. ಇಲಾಖೆಯ ಪ್ರಕಾರ ಈ ವರ್ಷ ಶಿಖರದ ಮೊದಲ ಯಶಸ್ವಿ ಆರೋಹಣದ 70 ನೇ ವಾರ್ಷಿಕೋತ್ಸವ ವರ್ಷವಾಗಿದೆ.

ಸಮುದ್ರ ಮಟ್ಟದಿಂದ 29,032 ಅಡಿಗಳಷ್ಟು (8,849 ಮೀಟರ್) ಎತ್ತರವಿರುವ ಮೌಂಟ್ ಎವರೆಸ್ಟ್ ಭೂಮಿಯ ಮೇಲಿನ ಅತಿ ಎತ್ತರದ ಪರ್ವತವಾಗಿದೆ. ಹಿಮಾಲಯದ ಮಹಾಲಂಗೂರ್ ಹಿಮಲ್ ವಿಭಾಗದಲ್ಲಿ ನೆಲೆಗೊಂಡಿರುವ ಪರ್ವತದ ಶಿಖರವು ಟಿಬೆಟ್ ಮತ್ತು ನೇಪಾಳವನ್ನು ಬೇರ್ಪಡಿಸುವ ಗಡಿಯನ್ನು ವ್ಯಾಪಿಸಿದೆ. ಮೌಂಟ್ ಎವರೆಸ್ಟ್ ಎರಡು ಪ್ರಮುಖ ಕ್ಲೈಂಬಿಂಗ್ ಮಾರ್ಗಗಳನ್ನು ಹೊಂದಿದೆ. ನೇಪಾಳದಿಂದ ಆಗ್ನೇಯ ಪರ್ವತ ಮತ್ತು ಟಿಬೆಟ್‌ನಿಂದ ಉತ್ತರ ಪರ್ವತದ ಮೂಲಕ ಇದನ್ನು ಹತ್ತಲಾರಂಭಿಸಬಹುದು.

ಇದನ್ನೂ ಓದಿ : ಮುಸ್ಲಿಂ ರಾಷ್ಟ್ರಗಳು ರಷ್ಯಾ ಮೇಲಿನ ನಿರ್ಬಂಧಗಳನ್ನು ಬೆಂಬಲಿಸಿಲ್ಲ: ರಷ್ಯಾ ಉಪಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.