ETV Bharat / international

ಭಾರತದಿಂದ 20 ಸಾವಿರ ಮೆಟ್ರಿಕ್ ಟನ್ ಸಕ್ಕರೆ ತರಿಸಿಕೊಳ್ಳಲಿದೆ ನೇಪಾಳ

author img

By PTI

Published : Sep 14, 2023, 5:34 PM IST

ಹಬ್ಬದ ಋತುವಿಗೆ ಮುನ್ನ ನೇಪಾಳ ಸರ್ಕಾರವು ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳಲಿರುವ ನೇಪಾಳ

ಕಠ್ಮಂಡು (ನೇಪಾಳ) : ವಿಜಯ ದಶಮಿ ಮತ್ತು ದೀಪಾವಳಿ ಸೇರಿದಂತೆ ಹಬ್ಬಗಳ ಸೀಸನ್ ಆರಂಭವಾಗುವ ಮುನ್ನ ನೇಪಾಳ ಸರ್ಕಾರವು ಭಾರತದಿಂದ 20,000 ಮೆಟ್ರಿಕ್ ಟನ್ (ಎಂಟಿ) ಸಕ್ಕರೆ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ದೇಶದಲ್ಲಿನ ಸ್ಥಳೀಯ ಬೇಡಿಕೆ ಪೂರೈಸಲು 60,000 ಮೆಟ್ರಿಕ್ ಟನ್ ಸಕ್ಕರೆ ಆಮದಿಗೆ ಕಸ್ಟಮ್ಸ್ ವಿನಾಯಿತಿ ನೀಡುವಂತೆ ನೇಪಾಳದ ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಕೇಳಿತ್ತು. ಆದರೆ ,ಸದ್ಯಕ್ಕೆ ಹಣಕಾಸು ಸಚಿವಾಲಯವು 20,000 ಮೆಟ್ರಿಕ್ ಟನ್ ಸಕ್ಕರೆ ಆಮದಿಗೆ ಮಾತ್ರ ಅನುಮತಿ ನೀಡಿದೆ.

ಹಣಕಾಸು ಸಚಿವಾಲಯದ ವಕ್ತಾರ ಧನಿರಾಮ್ ಶರ್ಮಾ ಅವರ ಪ್ರಕಾರ, ಸಚಿವಾಲಯವು ಕಸ್ಟಮ್ಸ್ ಸುಂಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿದೆ, ಅಂದರೆ ಈ ಹಿಂದೆ ವಿಧಿಸಲಾದ ಶೇಕಡಾ 30 ರಷ್ಟು ಕಸ್ಟಮ್ಸ್ ಸುಂಕಕ್ಕಿಂತ ಶೇಕಡಾ 15 ರಷ್ಟು ಕಡಿಮೆಯಾಗಿದೆ. ಸಾಲ್ಟ್ ಟ್ರೇಡಿಂಗ್ ಕಾರ್ಪೊರೇಷನ್ (ಎಸ್​ಟಿಸಿ) ಮತ್ತು ಫುಡ್ ಮ್ಯಾನೇಜಮೆಂಟ್​ ಅಂಡ್ ಟ್ರೇಡಿಂಗ್ ಕಂಪನಿ ಎಂಬ ಎರಡು ಕಂಪನಿಗಳು ಮುಂಬರುವ ಹಬ್ಬದ ಋತುವಿನಲ್ಲಿ ತಲಾ 10,000 ಮೆಟ್ರಿಕ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಿವೆ ಎಂದು ಶರ್ಮಾ ಹೇಳಿದ್ದಾರೆ.

50,000 ಮೆಟ್ರಿಕ್ ಟನ್ ಸಕ್ಕರೆ ಆಮದಿಗೆ ಸರ್ಕಾರದ ಅನುಮತಿ ಕೇಳಲಾಗಿತ್ತು ಎಂದು ಎಸ್​ಟಿಸಿಯ ವಿಭಾಗೀಯ ವ್ಯವಸ್ಥಾಪಕ ಬ್ರಜೇಶ್ ಝಾ ಅವರು ಹೇಳಿದರು. ಝಾ ಅವರ ಪ್ರಕಾರ, ನೇಪಾಳದ ದೇಶೀಯ ಸಕ್ಕರೆ ಬೇಡಿಕೆ 3,00,000 ಮೆಟ್ರಿಕ್ ಟನ್ ಆಗಿದ್ದು, ಈ ಬೇಡಿಕೆಯನ್ನು ಪೂರೈಸಲು ಮುಖ್ಯವಾಗಿ ಭಾರತದಿಂದ ದೊಡ್ಡ ಪ್ರಮಾಣದ ಸಕ್ಕರೆ ಆಮದು ಮಾಡಿಕೊಳ್ಳಬೇಕಿದೆ.

ನೇಪಾಳದಲ್ಲಿ ಸುಮಾರು 1,00,000 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸುವ 12 ಸಕ್ಕರೆ ಕಾರ್ಖಾನೆಗಳಿವೆ. ಒಂದು ಅಂದಾಜಿನ ಪ್ರಕಾರ, ನೇಪಾಳವು ಭಾರತದಿಂದ ಕನಿಷ್ಠ 70 ಪ್ರತಿಶತದಷ್ಟು ಸಕ್ಕರೆ ಆಮದು ಮಾಡಿಕೊಳ್ಳುತ್ತದೆ. ಇದಲ್ಲದೇ, ಕಸ್ಟಮ್ಸ್ ಸುಂಕವನ್ನು ಪಾವತಿಸದೇ ಸಾವಿರಾರು ಟನ್ ಸಕ್ಕರೆಯನ್ನು ಅಕ್ರಮ ಮಾರ್ಗದ ಮೂಲಕ ನೇಪಾಳಕ್ಕೆ ತರಲಾಗುತ್ತದೆ. ಕಠ್ಮಂಡುವಿನ ಕಾಳಸಂತೆಯಲ್ಲಿ ಪ್ರತಿ ಕೆ.ಜಿ.ಗೆ ನೇಪಾಳಿ ರೂ.100 ರಿಂದ 125 ರವರೆಗೆ ಸಕ್ಕರೆ ಸಿಗುತ್ತಿದೆ. ಆದರೆ ಭಾರತದಲ್ಲಿ ಇದರ ಬೆಲೆ ಸುಮಾರು 40 ರಿಂದ 50 ರೂ. ಆಗಿದೆ.

ಭಾರತದಲ್ಲಿ ಮುಂಜಾಗ್ರತಾ ಕ್ರಮ: ಜಾಗತಿಕವಾಗಿ ಸಕ್ಕರೆ ಬೆಲೆಗಳು ಹೆಚ್ಚಾಗುತ್ತಿರುವ ಮಧ್ಯೆ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ರಫ್ತುದಾರ ದೇಶವಾದ ಭಾರತವು ತನ್ನ ಸಕ್ಕರೆ ಸ್ಟಾಕ್​ ಅನ್ನು ಪರಿಶೀಲಿಸಲು ಮುಂದಾಗಿದೆ. ಹಬ್ಬದ ಋತುವಿನಲ್ಲಿ ಸೂಕ್ತ ಬೆಲೆಯಲ್ಲಿ ಸಾಕಷ್ಟು ಸಕ್ಕರೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು, 2023 ರ ಮೇ ಮತ್ತು ಆಗಸ್ಟ್ ನಡುವಿನ ಎಲ್ಲ ಮಾರಾಟಗಳ ವಿವರಗಳನ್ನು ಸೆಪ್ಟೆಂಬರ್ 12 ರ ಮಂಗಳವಾರದೊಳಗೆ ಒದಗಿಸುವಂತೆ ಸಕ್ಕರೆ ವ್ಯಾಪಾರಿಗಳು ಮತ್ತು ಕಾರ್ಖಾನೆಗಳಿಗೆ ಸಂಬಂಧಿಸಿದ ಮಾನ್ಯತೆ ಪಡೆದ ವಿತರಕರಿಗೆ ಸೂಚಿಸಿದೆ.

ಇದನ್ನೂ ಓದಿ : ಎಲ್ಲ ದಾಖಲೆಗಳು, ನೋಂದಣಿಗಳಿಗೆ ಜನನ ಪ್ರಮಾಣ ಪತ್ರವೇ ಮೂಲಾಧಾರ: ಅ.1 ರಿಂದ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.