ETV Bharat / international

ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳದ ವಿಮಾನ ನಾಪತ್ತೆ - ತಾರಾ ಏರ್‌ 9 NAET ಅವಳಿ ಎಂಜಿನ್ ವಿಮಾನ ನಾಪತ್ತೆ

ಸಿಬ್ಬಂದಿ ಸೇರಿದಂತೆ 22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೇಪಾಳ ವಿಮಾನ ಸಂಪರ್ಕ ಕಳೆದುಕೊಂಡಿದೆ. ಈ ಬಗ್ಗೆ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

Nepal Aircraft Loses Contact
ನೇಪಾಳದ ವಿಮಾನ ನಾಪತ್ತೆ
author img

By

Published : May 29, 2022, 12:17 PM IST

ಕಠ್ಮಂಡು: ನಾಲ್ವರು ಭಾರತೀಯರು, ಸಿಬ್ಬಂದಿ ಸೇರಿದಂತೆ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೇಪಾಳದ ವಿಮಾನ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ತಾರಾ ಏರ್‌ 9 NAET ಅವಳಿ-ಎಂಜಿನ್ ವಿಮಾನ ಸಂಪರ್ಕ ಕಳೆದುಕೊಂಡಿದೆ. ಬೆಳಿಗ್ಗೆ 9:55 ರ ಸುಮಾರಿಗೆ ಪೋಖರಾದಿಂದ ಜೋಮ್‌ಸಮ್‌ಗೆ ವಿಮಾನ ಟೇಕ್ ಆಫ್ ಆಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಎಲ್ಲಾ ಸಂಪರ್ಕ ಕಳೆದುಕೊಂಡಿದೆ. "ವಿಮಾನವು ಮುಸ್ತಾಂಗ್ ಜಿಲ್ಲೆಯ ಜೋಮ್ಸಮ್‌ನ ಆಕಾಶದ ಮೇಲೆ ಕಾಣಿಸಿಕೊಂಡಿತು. ನಂತರ ಧೌಲಗಿರಿ ಪರ್ವತಕ್ಕೆ ತಿರುಗಿತು. ಬಳಿಕ ಅದು ಸಂಪರ್ಕಕ್ಕೆ ಬರಲಿಲ್ಲ" ಎಂದು ಮುಖ್ಯ ಜಿಲ್ಲಾ ಅಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.

  • Nepal | Tara Air's 9 NAET twin-engine aircraft carrying 19 passengers, flying from Pokhara to Jomsom at 9:55am, has lost contact: Airport authorities

    — ANI (@ANI) May 29, 2022 " class="align-text-top noRightClick twitterSection" data=" ">

ನಾಪತ್ತೆಯಾದ ವಿಮಾನದಲ್ಲಿ ನಾಲ್ವರು ಭಾರತೀಯರು ಮತ್ತು ಮೂವರು ಜಪಾನ್ ಪ್ರಜೆಗಳಿದ್ದರು. ಉಳಿದವರು ನೇಪಾಳಿ ಪ್ರಜೆಗಳಾಗಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಾಪತ್ತೆಯಾಗಿರುವ ವಿಮಾನದ ಹುಡುಕಾಟಕ್ಕಾಗಿ ನೇಪಾಳ ಗೃಹ ಸಚಿವಾಲಯ ಮುಸ್ತಾಂಗ್ ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ನೇಪಾಳ ಸೇನೆಯ ಹೆಲಿಕಾಪ್ಟರ್ ಅನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫದೀಂದ್ರ ಮಣಿ ಪೋಖರೆಲ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಕೋವಿಡ್​​ ಲಸಿಕಾ ಅಭಿಯಾನವನ್ನು ಶ್ಲಾಘಿಸಿದ ಬಿಲ್ ಗೇಟ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.