ETV Bharat / international

ಅಪಾಯಕಾರಿ ಹಾರಾಟ: ಏರ್‌ ಇಂಡಿಯಾ ಪೈಲಟ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನೇಪಾಳ - ನೇಪಾಳ ಏರ್‌ಲೈನ್ಸ್

ಏರ್ ಇಂಡಿಯಾ ಪೈಲಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೇಪಾಳ ಸರ್ಕಾರ ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದೆ.

Air India-Nepal Airlines
ಏರ್ ಇಂಡಿಯಾ- ನೇಪಾಳ ಏರ್‌ಲೈನ್ಸ್
author img

By

Published : Mar 27, 2023, 7:27 AM IST

ಕಠ್ಮಂಡು (ನೇಪಾಳ): ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್‌ಗೇ ಸೇರಿದ ವಿಮಾನಗಳ ನಡುವಿನ ಸಂಭಾವ್ಯ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ವರದಿಯಾಗಿದೆ. ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸುವ ಸಾಧ್ಯತೆ ಇತ್ತು. ವಿಮಾನದ ಎಚ್ಚರಿಕೆ ವ್ಯವಸ್ಥೆಯು ಪೈಲಟ್‌ಗಳಿಗೆ ಅಪಾಯದ ಸೂಚನೆಯನ್ನು ನೀಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆ ಸಂಬಂಧ ಏರ್ ಇಂಡಿಯಾ ಪೈಲಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೇಪಾಳ ಸರ್ಕಾರ ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದೆ.

ಆಗಿದ್ದೇನು?: ವರದಿಗಳ ಪ್ರಕಾರ, ಮಲೇಷ್ಯಾದ ಕೌಲಲಾಂಪುರದಿಂದ ಕಠ್ಮಂಡುಗೆ ತೆರಳುತ್ತಿದ್ದ ನೇಪಾಳ ಏರ್‌ಲೈನ್ಸ್ ವಿಮಾನ ಹಾಗೂ ದೆಹಲಿಯಿಂದ ಕಠ್ಮಂಡುಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಶುಕ್ರವಾರ ಪರಸ್ಪರ ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲೇ ಹಾರಾಟ ನಡೆಸಿವೆ ಎಂದು ತಿಳಿದು ಬಂದಿದೆ. ಏರ್ ಇಂಡಿಯಾ ವಿಮಾನ ಭೂಮಿಯಿಂದ 19 ಸಾವಿರ ಅಡಿ ಎತ್ತರದಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನ ಅದೇ ಸ್ಥಳದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. 2 ವಿಮಾನಗಳು ಅತ್ಯಂತ ಸಮೀಪದಲ್ಲಿದೆ ಎಂದು ರಾಡಾರ್‌ನಲ್ಲಿ ತೋರಿಸಿದ್ದರಿಂದ ನೇಪಾಳ ಏರ್‌ಲೈನ್ಸ್ ವಿಮಾನ 7 ಸಾವಿರ ಅಡಿಗಳಿಗೆ ಕೆಳಗಿಳಿಸಿ ಅಪಘಾತ ತಪ್ಪಿಸಿದ್ದರು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ವಕ್ತಾರರು ತಿಳಿಸಿದ್ದಾರೆ.

  • Air Traffic Controllers (ATCs) of Tribhuvan International Airport involved in traffic conflict incident (between Air India and Nepal Airlines on 24th March 2023) have been removed from active control position until further notice. pic.twitter.com/enxd0WrteZ

    — Civil Aviation Authority of Nepal (@hello_CAANepal) March 26, 2023 " class="align-text-top noRightClick twitterSection" data=" ">

ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಅನುಮತಿ ಇಲ್ಲದೆ ಶುಕ್ರವಾರ ತಮ್ಮ ವಿಮಾನವನ್ನು 15 ಸಾವಿರ ಅಡಿಗಳಿಗೆ ಇಳಿಸಿದ ನಂತರ ನೇಪಾಳದ ವಾಯುಯಾನ ಪ್ರಾಧಿಕಾರ ಏರ್ ಇಂಡಿಯಾ ವಿಮಾನ‌ಗಳನ್ನು ನೇಪಾಳ ವಾಯುಪ್ರದೇಶದಲ್ಲಿ ಹಾರಿಸುವುದನ್ನು ನಿಷೇಧಿಸಿದೆ.

ಇದನ್ನೂ ಓದಿ: ನೇಪಾಳ ವಿಮಾನ ಪತನ: ಐವರು ಭಾರತೀಯರು ಸೇರಿ 72 ಪ್ರಯಾಣಿಕರ ಸಾವು

ಮೂವರು ಏರ್‌ ಕಂಟ್ರೋಲರ್‌ಗಳ ಅಮಾನತು: ಘಟನೆಯ ನಂತರ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂವರು ಏರ್ ಟ್ರಾಫಿಕ್ ಕಂಟ್ರೋಲರ್‌ಗಳನ್ನು (ಎಟಿಸಿ) ಸಿಎಎಎನ್ ಮುಂದಿನ ಸೂಚನೆ ಬರುವವರೆಗೆ ಸಕ್ರಿಯ ನಿಯಂತ್ರಣ ಸ್ಥಾನಗಳಿಂದ ಅಮಾನತುಗೊಳಿಸಲಾಗಿದೆ. ಶುಕ್ರವಾರ ನಡೆದ ಘಟನೆಯಲ್ಲಿ ಭಾಗಿಯಾಗಿರುವ ಏರ್ ಇಂಡಿಯಾ ಪೈಲಟ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅದು ತನ್ನ ಭಾರತೀಯ ಅಧಿಕಾರಿಗಳಿಗೆ ಪತ್ರ ಬರೆದಿದೆ.

"ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಭಾರತದ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಸಂದೇಶದೊಂದಿಗೆ ಏರ್ ಇಂಡಿಯಾಗೆ ಪತ್ರ ಕಳುಹಿಸಲಾಗಿದೆ" ಎಂದು ಪ್ರಾಧಿಕಾರದ ವಕ್ತಾರ ಜಗನ್ನಾಥ ನಿರೋಲಾ ತಿಳಿಸಿದ್ದಾರೆ. "ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ನಡುವಿನ ಘಟನೆಯನ್ನು ತನಿಖೆ ಮಾಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಪ್ರಾಧಿಕಾರಕ್ಕೆ ತಿಳಿಸಲು ನಾವು ಪತ್ರ ಬರೆದಿದ್ದೇವೆ" ಎಂದು ಅವರು ಹೇಳಿದರು.

"ಅದೇ ದಿನ ಕಠ್ಮಂಡುವಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿದ ಏರ್ ಇಂಡಿಯಾ ಪೈಲಟ್‌ಗಳಿಂದ ವಿವರಣೆ ಕೇಳಿದ್ದರು. ಘಟನೆಗೆ ಸಂಬಂಧಿಸಿದಂತೆ ಸಿಎಎಎನ್ ತನಿಖಾ ಸಮಿತಿ ಸಹ ರಚಿಸಿದೆ" ಎಂದು ನಿರೋಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಆಗಸದಲ್ಲಿ ಪ್ರಯಾಣಿಕನ ಆಟಾಟೋಪ: ಗಗನಸಖಿಗೆ ಇರಿತ, ಎಮೆರ್ಜೆನ್ಸಿ ಡೋರ್​ ತೆಗೆಯಲು ಯತ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.