ETV Bharat / international

Hindu Temple demolish: ಪಾಕಿಸ್ತಾನದಲ್ಲಿ 150 ವರ್ಷಗಳ ಹಳೆಯ ದೇವಸ್ಥಾನ ಧ್ವಂಸ; ಮಾರಿ ಮಾತಾ ದೇವಾಲಯ ನೆಲಸಮ - ದೇಗುಲ ಜಾಗ ಮಾರಾಟ ಆರೋಪ

ಪಾಕಿಸ್ತಾನದಲ್ಲಿ ಮತ್ತೊಂದು ಹಿಂದು ದೇವಾಲಯವನ್ನು ನೆಲಸಮ ಮಾಡಲಾಗಿದೆ. 150 ವರ್ಷಗಳ ಹಳೆಯ ದೇವಸ್ಥಾನ ಇದಾಗಿತ್ತು.

ಪಾಕಿಸ್ತಾನದಲ್ಲಿ ಹಿಂದು ದೇವಾಲಯ ನಾಶ
ಪಾಕಿಸ್ತಾನದಲ್ಲಿ ಹಿಂದು ದೇವಾಲಯ ನಾಶ
author img

By

Published : Jul 16, 2023, 6:16 PM IST

ಕರಾಚಿ: ಪಾಕಿಸ್ತಾನದಲ್ಲಿ ಹಿಂದು ಸಮುದಾಯ ಮತ್ತು ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ. ಸಿಂಧ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ಕರಾಚಿಯಲ್ಲಿ ಸುಮಾರು 150 ವರ್ಷಗಳ ಹಳೆಯದಾದ ಹಿಂದೂ ದೇವಾಲಯವನ್ನು ಹಳೆಯ ಮತ್ತು ಅಪಾಯಕಾರಿ ಕಟ್ಟಡವೆಂದು ಘೋಷಿಸಿ ನೆಲಸಮಗೊಳಿಸಲಾಗಿದೆ. ಇದು ಹಿಂದೂ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ.

ಕರಾಚಿಯ ಸೋಲ್ಜರ್ ಬಜಾರ್‌ನಲ್ಲಿರುವ ಮಾರಿ ಮಾತಾ ದೇವಾಲಯವನ್ನು 2 ದಿನಗಳ ಹಿಂದೆ ರಾತ್ರೋರಾತ್ರಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್​ ನಡುವೆ ಬುಲ್ಡೋಜರ್‌ಗಳಿಂದ ಒಡೆದು ಹಾಕಲಾಗಿದೆ. ದೇಗುಲ ಕೆಡವುವ ಬಗ್ಗೆ ಪೂರ್ವ ಮಾಹಿತಿಯನ್ನೂ ನೀಡದೇ ಕ್ರಮ ಕೈಗೊಂಡಿರುವುದು ಹಿಂದುಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾತ್ರೋರಾತ್ರಿ ಬುಲ್ಡೋಜರ್​ಗಳ ಸಮೇತ ಬಂದ ಅಧಿಕಾರಿಗಳು ದೇಗುಲದ ಒಳಭಾಗವನ್ನು ಮೊದಲು ಕೆಡವಿದರು. ಹೊರ ಗೋಡೆ ಮತ್ತು ಮುಖ್ಯ ದ್ವಾರವನ್ನು ಹಾಗೆಯೇ ಬಿಡಲಾಗಿದೆ. ಗರ್ಭಗುಡಿಯನ್ನೇ ಮೊದಲು ನಾಶ ಮಾಡಿದರು. ಈ ಕುರಿತು ಯಾವ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಪಂಚಮುಖಿ ಹನುಮಾನ್ ಮಂದಿರದ ಅರ್ಚಕರಾದ ರಾಮ್​ನಾಥ್ ಮಿಶ್ರಾ ಎಂಬುವರು ಆಕ್ಷೇಪ ವ್ಯಕ್ತಪಡಿಸಿದರು. ಈ ದೇವಾಲಯವನ್ನು ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇದರಡಿ ಕೆಳಗೆ ನಿಧಿ ಇದೆ ಎಂಬ ಕಟ್ಟುಕಥೆಗಳಿಂದಾಗಿ ದೇಗುಲವನ್ನು ನೆಲಸಮ ಮಾಡಲಾಗಿದೆ ಎಂದು ದೂರಿದರು.

400 ರಿಂದ 500 ಚದರ್​ ಗಜಗಳಷ್ಟು ವಿಸ್ತೀರ್ಣ ಹೊಂದಿರುವ ದೇವಾಲಯ ಇತ್ತೀಚೆಗೆ ಭೂಗಳ್ಳರ ಹಪಾಹಪಿಗೆ ತುತ್ತಾಗಿದೆ. ದೇವಾಲಯ ಅಪಾಯಕಾರಿ ರಚನೆಯಿಂದ ಕೂಡಿದೆ. ಇದನ್ನು ಕೆಡವಬೇಕು ಎಂದು ಅಧಿಕಾರಿಗಳು ಬೇಕಂತಲೇ ಘೋಷಣೆ ಮಾಡಿದ್ದರು ಎಂಬ ಆಪಾದನೆ ಕೇಳಿಬಂದಿದೆ.

ಇತ್ತ ಅಧಿಕಾರಿಗಳು, ಹಿಂದೂ ದೇವಾಲಯವು ಅತ್ಯಂತ ಹಳೆಯ ಮತ್ತು ಅಪಾಯಕಾರಿಯಾಗಿತ್ತು. ಹೀಗಾಗಿ ಅದರ ತೆರವಿಗೆ ಸೂಚಿಸಲಾಗಿತ್ತು. ದೇವರನ್ನು ಸಣ್ಣ ಕೋಣೆಗೆ ವರ್ಗ ಮಾಡಲಾಗಿದೆ. ಅಲ್ಲಿ ಹಿಂದುಗಳು ಚಿಕ್ಕ ದೇಗುಲವನ್ನು ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ದೇಗುಲ ಜಾಗ ಮಾರಾಟ ಆರೋಪ: ದೇಗುಲ ಇರುವ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಡೆವಲಪರ್‌ಗಳಿಗೆ ಜಮೀನು ಮಾರಾಟ ಮಾಡಲಾಗಿದೆ. ಹೀಗಾಗಿ ಕೆಲ ದಿನಗಳಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಜಾಗ ತೆರವು ಮಾಡುವಂತೆ ಒತ್ತಡ ಹೇರಲಾಗಿತ್ತು ಎಂದು ಹಿಂದು ಸಮಾಜದ ಮುಖಂಡ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಹಿಂದು ಸಮುದಾಯ ಸಿಂಧ್ ಪ್ರಾಂತ್ಯದ ಅಧಿಕಾರಿ ಸೈಯದ್ ಮುರಾದ್ ಅಲಿ ಶಾ ಮತ್ತು ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರ ಗಮನಕ್ಕೆ ತರಲಾಗಿತ್ತು. ಈ ವಿಷಯವನ್ನು ತುರ್ತು ಪರಿಶೀಲಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಈಗ ದೇವಾಲಯವನ್ನು ನೆಲಸಮ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಗಳು ಪಾಕಿಸ್ತಾನದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಪಾಕಿಸ್ತಾನದ ಬಹುಪಾಲು ಹಿಂದೂ ಸಮುದಾಯ ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ.

ಇದನ್ನೂ ಓದಿ: ಅಮರನಾಥ ಯಾತ್ರೆ: ಮಾರ್ಗ ಮಧ್ಯೆ ಕಲ್ಲು ಬಂಡೆ ಉರುಳಿ ಮಹಿಳೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.