ETV Bharat / international

ನಾಸಾದ ಚಂದ್ರನ ರಾಕೆಟ್​ಗೆ ಮತ್ತೊಂದು ವಿಘ್ನ: ನವೆಂಬರ್​ವರೆಗೆ ಉಡಾವಣೆ ಅಸಂಭವ - ರಾಕೆಟ್ ಉಡಾವಣೆ

ನಾಸಾದ ಚಂದ್ರನ ರಾಕೆಟ್ ಉಡಾವಣೆ ಈಗ ನವೆಂಬರ್ ತಿಂಗಳ ಮಧ್ಯದವರೆಗೆ ಅಸಂಭವವಾಗಿದೆ.

nasa-moon-rocket-back-in-hangar-launch-unlikely-until-nov
ನಾಸಾದ ಚಂದ್ರನ ರಾಕೆಟ್​ಗೆ ಮತ್ತೊಂದು ವಿಘ್ನ: ನವೆಂಬರ್​ವರೆಗೆ ಉಡಾವಣೆ ಅಸಂಭವ
author img

By

Published : Sep 28, 2022, 9:31 PM IST

ಫ್ಲೋರಿಡಾ (ಅಮೆರಿಕ): ಇಯಾನ್​ ಚಂಡಮಾರುತವು ನಾಸಾದ ಚಂದ್ರನ ರಾಕೆಟ್ ಉಡಾವಣೆಗೆ ಅಡ್ಡಿಯಾಗಿದೆ. ಚಂಡಮಾರುತವು ಅಮೆರಿಕದ ಫ್ಲೋರಿಡಾ ಸಮೀಪಿಸುತ್ತಿದ್ದಂತೆ ಚಂದ್ರನ ರಾಕೆಟ್ ಮಂಗಳವಾರ ತನ್ನ ಹ್ಯಾಂಗರ್‌ಗೆ ಸುರಕ್ಷಿತವಾಗಿ ಮರಳಿದೆ. ಇದರಿಂದ ನವೆಂಬರ್​​ ತಿಂಗಳವರೆಗೂ ಇದರ ಉಡಾವಣೆ ಸಾಧ್ಯವಾಗುವುದಿಲ್ಲವಂತೆ.

ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ 322 ಅಡಿ (98 ಮೀಟರ್) ರಾಕೆಟ್​ನ್ನು ಉಡಾವಣಾ ತಂಡವು ಉಡಾವಣೆ ಮಾಡಿತ್ತು. ನಾಲ್ಕು ಮೈಲಿ (6.4 ಕಿಲೋಮೀಟರ್) ಪ್ರಯಾಣಕ್ಕೆ ಇಡೀ ರಾತ್ರಿ ತೆಗೆದುಕೊಂಡಿದೆ. ರಾಕೆಟ್ ಅನ್ನು ಮತ್ತೆ ನವೀಕರಿಸುವುದು ಮತ್ತು ಅಕ್ಟೋಬರ್​ನಲ್ಲಿ ಉಡಾವಣೆ ಪ್ರಯತ್ನಕ್ಕಾಗಿ ಅದನ್ನು ಮತ್ತೆ ಪ್ಯಾಡ್‌ಗೆ ತರುವುದು ಕಷ್ಟ ಎಂದು ನಾಸಾ ಅಧಿಕಾರಿ ಜಿಮ್ ಫ್ರೀ ಹೇಳಿದ್ದಾರೆ.

ವಿಶೇಷವಾಗಿ ರಾಕೆಟ್​ಗೆ ಹೊಸ ಬ್ಯಾಟರಿಗಳನ್ನು ಹಾಕುವುದು ಸವಾಲಿನ ಕೆಲಸವಾಗಿದೆ. ಇದರಿಂದ ಅಕ್ಟೋಬರ್​ನಲ್ಲಿ​ ಉಡಾವಣೆಗೆ ಪ್ರಯತ್ನಿಸುವುದು ಅನುಮಾನವಾಗಿದೆ. ಅಕ್ಟೋಬರ್ ತಿಂಗಳ ಮಧ್ಯದ ವೇಳೆಗೆ ರಾಕೆಟ್ ಉಡಾವಣೆಗೆ ನಾಸಾ ಗುರಿ ಹಾಕಿಕೊಂಡಿತ್ತು.

ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್ ಒಂದು ತಿಂಗಳ ಹಿಂದೆ ಉಡಾವಣೆಯಾಗಿತ್ತು. ಆದರೆ, ಇಂಧನ ಸೋರಿಕೆ ಮತ್ತು ಇಂಜಿನ್​​ ಸಮಸ್ಯೆಗಳಿಂದ ಎರಡು ಬಾರಿ ವಿಳಂಬವಾಗಿತ್ತು. ಈಗ ಇಯಾನ್ ಚಂಡಮಾರುತವು ರಾಕೆಟ್ ಉಡಾವಣೆಗೆ ಅಡ್ಡಿ ಉಂಟು ಮಾಡಿದೆ.

ಇದನ್ನೂ ಓದಿ: ಕ್ಷುದ್ರಗ್ರಹಕ್ಕೆ ನಾಸಾ ನೌಕೆ ಅಪ್ಪಳಿಸಿದ್ದು ಏಕೆ? ಏನಿದು ಮಿಷನ್ DART?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.