ETV Bharat / international

ಮ್ಯೂಸಿಕ್​ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ.. ಒಬ್ಬನ ಸಾವು, ಪೊಲೀಸ್ ಅಧಿಕಾರಿ ಸೇರಿ ಅನೇಕರಿಗೆ ಗುಂಡೇಟು!

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಮ್ಯೂಸಿಕ್​ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದ್ದು, ಪೊಲೀಸ್ ಅಧಿಕಾರಿ ಸೇರಿದಂತೆ ಅನೇಕ ಜನರಿಗೆ ಗುಂಡೇಟು ತಗುಲಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Multiple people shot at including police officer in Washington DC, Washington shootout news, Multiple people shot in America, America crime news, ವಾಷಿಂಗ್ಟನ್ ಡಿಸಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಅನೇಕರ ಮೇಲೆ ಗುಂಡಿನ ದಾಳಿ, ವಾಷಿಂಗ್ಟನ್​ನಲ್ಲಿ ಗುಂಡಿನ ದಾಳಿ ಸುದ್ದಿ, ಅಮೆರಿಕದಲ್ಲಿ ಜನರ ಮೇಲೆ ಗುಂಡಿನ ದಾಳಿ, ಅಮೇರಿಕಾ ಅಪರಾಧ ಸುದ್ದಿ,
ಅಮೆರಿಕಾ ದಾಳಿ
author img

By

Published : Jun 20, 2022, 10:38 AM IST

ವಾಷಿಂಗ್ಟನ್: ಶ್ವೇತಭವನದಿಂದ ಕೇವಲ 2 ಮೈಲಿಗಿಂತ ಕಡಿಮೆ ದೂರದಲ್ಲಿರುವ ವಾಷಿಂಗ್ಟನ್​ನ ಯು ಸ್ಟ್ರೀಟ್ ನಾರ್ತ್‌ವೆಸ್ಟ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಅನೇಕರಿಗೆ ಗುಂಡು ಹಾರಿಸಲಾಗಿದೆ. ಈ ವೇಳೆ ಒಬ್ಬ ಯುವಕ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಎಂಪಿಡಿ ಅಧಿಕಾರಿ ಸೇರಿದಂತೆ ಅನೇಕ ಜನರು ಮೇಲೆ ಗುಂಡು ಹಾರಿಸಿರುವ ಘಟನೆಗೆ ಸಂಬಂಧಿಸಿದಂತೆ ಎಂಪಿಡಿ (ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ) ಪ್ರತಿಕ್ರಿಯಿಸಿದೆ ಎಂದು ಡಿಸಿ ಪೊಲೀಸ್ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.

ಯು ಸ್ಟ್ರೀಟ್‌ನಲ್ಲಿ ‘ಮೋಚೆಲ್ಲಾ’ ಎಂಬ ಜುನೇಟೀನ್ ಸಂಗೀತ ಕಚೇರಿ ನಡೆದಿತ್ತು. ದುಷ್ಕರ್ಮಿಗಳು ಎಂಪಿಡಿ ಅಧಿಕಾರಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲ ಈ ಗುಂಡಿನ ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಯಾವುದೇ ಸಾವಿನ ವರದಿಗಳಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಓದಿ: ಕುಟುಂಬದೊಂದಿಗೆ ಗುರುದ್ವಾರಕ್ಕೆ ತೆರಳುತ್ತಿದ್ದ ಎನ್​ಆರ್​ಐಗೆ ಗುಂಡಿಕ್ಕಿ ಕೊಲೆ

ನಾವು ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಬೇಕಾಗಿದೆ. ನಮಗೆ ಸಾಧ್ಯವಾಗದಿದ್ದರೆ, ಅವುಗಳನ್ನು ಖರೀದಿಸಲು ನಾವು ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸಬೇಕು. ಸುರಕ್ಷಿತ ಶೇಖರಣಾ ಕಾನೂನುಗಳು ಮತ್ತು ಕೆಂಪು ಧ್ವಜ ಕಾನೂನುಗಳನ್ನು ಜಾರಿಗೊಳಿಸಬೇಕಾಗಿದೆ. ಬಂದೂಕು ತಯಾರಕರ ಹೊಣೆಗಾರಿಕೆಯಿಂದ ವಿನಾಯಿತಿಯನ್ನು ರದ್ದುಗೊಳಿಸಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

ಈ ಕಾನೂನುಗಳು ಮಕ್ಕಳನ್ನು ರಕ್ಷಿಸುವ ಬಗ್ಗೆ. ಇದು ಕುಟುಂಬಗಳನ್ನು ರಕ್ಷಿಸುವ ಬಗ್ಗೆ. ಇದು ಸಮುದಾಯಗಳನ್ನು ರಕ್ಷಿಸುವ ಬಗ್ಗೆ. ಇದು ಶಾಲೆಗೆ ಹೋಗಲು, ಕಿರಾಣಿ ಅಂಗಡಿಗೆ ಹೋಗಲು, ಗುಂಡು ಹಾರಿಸದೇ ಚರ್ಚ್‌ಗೆ ಹೋಗಲು ನಮ್ಮ ಸ್ವಾತಂತ್ರ್ಯ ರಕ್ಷಿಸುವ ಬಗ್ಗೆ ಎಂದು ಬೈಡನ್​ ಹೇಳಿದರು.

ಈ ಹಿಂದಿನ ಘಟನೆಗಳು: ಮೇ 24 ರಂದು ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ 19 ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದರು. ಮೇ 31 ರಂದು ನ್ಯೂ ಓರ್ಲಿಯನ್ಸ್‌ನಲ್ಲಿ ಪ್ರೌಢಶಾಲಾ ಪದವಿ ಸಮಾರಂಭದಲ್ಲಿ ಗುಂಡೇಟಿನಿಂದ ವೃದ್ಧ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದರು. ಜೂನ್ 1 ರಂದು ಒಕ್ಲಹೋಮಾದ ತುಲ್ಸಾ ನಗರದ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ಘಟನೆಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದರು. ಕಳೆದ ಎರಡ್ಮೂರು ತಿಂಗಳಲ್ಲಿ ಅಮೇರಿಕಾದಲ್ಲಿ ಶೂಟೌಟ್ ಘಟನೆಗಳು ಹೆಚ್ಚಾಗಿ ಕಂಡು ಬರತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.