ETV Bharat / international

5 ಬಾರಿಯ ಗ್ರ್ಯಾಮಿ ವಿಜೇತ ಶ್ರೇಷ್ಠ ಗಾಯಕಿ ನವೋಮಿ ಜುಡ್ ವಿಧಿವಶ

author img

By

Published : May 1, 2022, 8:42 AM IST

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಾಯಕಿ ನವೋಮಿ ಜುಡ್ ತಮ್ಮ 76 ನೇ ವಯಸ್ಸಿನಲ್ಲಿ ಮೃತಪಟ್ಟರು.

Naomi Judd
ನವೋಮಿ ಜುಡ್

ವಾಷಿಂಗ್ಟನ್(ಅಮೆರಿಕ): ಐದು ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಜನಪ್ರಿಯ ಗಾಯಕಿ ನವೋಮಿ ಜುಡ್ ಶನಿವಾರ ನಿಧನರಾದರು. ಈ ವಿಚಾರವನ್ನು ಪುತ್ರಿ ಆಶ್ಲೇ ಜುಡ್ ಖಚಿತಪಡಿಸಿದ್ದಾರೆ. 'ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿ ನಿಧನರಾಗಿದ್ದಾರೆ. ಅವರ ಸಾವು ನಮಗೆ ತೀವ್ರ ನೋವುಂಟು ಮಾಡಿದೆ' ಎಂದು ಟ್ವೀಟ್​​ ಮಾಡಿದ್ದಾರೆ.

ನವೋಮಿ ಮತ್ತು ಮಗಳು 1980ರ ದಶಕದ ಆರಂಭದಲ್ಲಿ ವೃತ್ತಿಪರರಾಗಿ ಒಟ್ಟಿಗೆ ಹಾಡಲು ಪ್ರಾರಂಭಿಸಿದ್ದರು. ಅಂತಿಮವಾಗಿ "ಮಾಮಾ ಹಿಸ್ ಕ್ರೇಜಿ" ಮತ್ತು "ಲವ್ ಕ್ಯಾನ್ ಬಿಲ್ಡ್ ಎ ಬ್ರಿಡ್ಜ್" ಸೇರಿದಂತೆ ಪ್ರಮುಖ ಹಿಟ್‌ ಸರಣಿಯನ್ನು ನಿರ್ಮಿಸಿ 20 ಮಿಲಿಯನ್‌ಗಿಂತಲೂ ಹೆಚ್ಚು ರೆಕಾರ್ಡ್‌ಗಳನ್ನು ಮಾರಾಟ ಮಾಡಿದರು. 1984ರಲ್ಲಿ ನವೋಮಿ ಮೊದಲ ಗ್ರ್ಯಾಮಿ ಪ್ರಶಸ್ತಿ ಗೆದ್ದುಕೊಂಡರು. ಬಳಿಕ ಏಳು ವರ್ಷಗಳ ಅವಧಿಯಲ್ಲಿ, ಕಂಟ್ರಿ ಮ್ಯೂಸಿಕ್ ಹಾಲ್ ಆಫ್ ಫೇಮ್ ಪ್ರಕಾರ, ಅವರು ಐದು ಬಾರಿ ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದರು.

ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್​- 2021: 'ನೋ ಟೈಮ್ ಟು ಡೈ' ಸಾಂಗ್​ಗಾಗಿ ಗಾಯಕಿ ಬಿಲ್ಲಿ ಎಲಿಶ್​​ಗೆ ಗ್ರ್ಯಾಮಿ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.