ETV Bharat / international

'ಮಂಕಿ ಪಾಕ್ಸ್' ಇನ್ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ - ಡಾ ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್

ಮಂಕಿ ಪಾಕ್ಸ್ ರೋಗ ಜಾಗತಿಕ ತುರ್ತು ಪರಿಸ್ಥಿತಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.

who
ವಿಶ್ವ ಆರೋಗ್ಯ ಸಂಸ್ಥೆ ಸಭೆ
author img

By

Published : May 12, 2023, 1:02 PM IST

ಜಿನೀವಾ (ಸ್ವಿಟ್ಜರ್ಲೆಂಡ್): ಮಂಕಿ ಪಾಕ್ಸ್ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿತು. WHO ಮಹಾನಿರ್ದೇಶಕ ಡಾ.ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್ ಅವರು ಜಾಗತಿಕ ಸಮಸ್ಯೆಗಳ ಕುರಿತು ಮಾಧ್ಯಮಗೋಷ್ಠಿ ನಡೆಸಿ ಈ ಘೋಷಣೆ ಮಾಡಿದ್ದಾರೆ. ಮಂಕಿ ಪಾಕ್ಸ್​ಗಾಗಿ ಸಂಸ್ಥೆಯ ತುರ್ತು ಸಮಿತಿಯ ಗುರುವಾರ ಸಭೆ ನಡೆಸಿದ್ದು, ಬಹು-ದೇಶದ ಆರೋಗ್ಯ ಸಮಸ್ಯೆಯಾಗಿರುವ ಮಂಕಿ ಪಾಕ್ಸ್​ ಇನ್ನು ಮುಂದೆ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಶಿಫಾರಸು ಮಾಡಿದೆ ಎಂದು ಟೆಡ್ರೊಸ್ ಹೇಳಿದ್ದಾರೆ.

  • The Emergency Committee on #mpox met for the fifth time yesterday, advising @DrTedros that the multi-country outbreak is no longer a Public Health Emergency of International Concern (PHEIC).

    ⏩The WHO Director-General accepted the Committee’s advice. Full Statement:… pic.twitter.com/kGzbQf2r3v

    — World Health Organization (WHO) (@WHO) May 11, 2023 " class="align-text-top noRightClick twitterSection" data=" ">

ನಾನು ಆ ಸಲಹೆಯನ್ನು ಸ್ವೀಕರಿಸಿದ್ದೇನೆ. ಮಂಕಿ ಪಾಕ್ಸ್​ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಘೋಷಿಸಲು ಸಂತೋಷವಾಗುತ್ತಿದೆ ಎಂದಿದ್ದಾರೆ. ಆದಗ್ಯೂ, ಮಂಕಿ ಪಾಕ್ಸ್​ ತುರ್ತುಸ್ಥಿತಿಯಲ್ಲ ಎಂದು ಘೋಷಿಸಿರುವುದು ಕೋವಿಡ್‌ನಂತೆ ಕೆಲಸ ಮುಗಿದಿದೆ ಎಂದು ಅರ್ಥವಲ್ಲ. ಮಂಕಿ ಪಾಕ್ಸ್​ ಇನ್ನೂ ಅಪಾಯವೇ. ಮಂಕಿಪಾಕ್ಸ್​ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ನಮಗೆ ಒಡ್ಡುತ್ತಿದೆ ಎಂಬ ಎಚ್ಚರಿಕೆಯನ್ನು ಟೆಡ್ರೊಸ್ ತಿಳಿಸಿದರು.

ಇದನ್ನೂ ಓದಿ: ಅಮೆರಿಕ ಪೌರತ್ವ ಮಸೂದೆ 2023 ಮಂಡನೆ: ಗ್ರೀನ್‌ ಕಾರ್ಡ್‌ ಮಿತಿ ರದ್ದಾಗುವ ಸಾಧ್ಯತೆ?

ಕಳೆದ ವರ್ಷ ಜುಲೈನಲ್ಲಿ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಮಂಕಿ ಪಾಕ್ಸ್​ ಅನ್ನು ಘೋಷಿಸಲಾಯಿತು. ಇಲ್ಲಿಯವರೆಗೆ, WHO ಒಟ್ಟು 87,000 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 140 ಸಾವುಗಳನ್ನು ವರದಿ ಮಾಡಿದೆ. ಮುಂದುವರೆದು ಮಾತನಾಡಿದ ಟೆಡ್ರೊಸ್, ವಿಶ್ವ ಆರೋಗ್ಯ ಸಂಸ್ಥೆಯನ್ನು ಜಾಗತಿಕವಾಗಿ ದೇಶಗಳು ಪ್ರೋತ್ಸಾಹಿಸುತ್ತಿವೆ. ಈಗ ನಾವು ಹೆಚ್​ಐವಿಯಿಂದ ಕಲಿತ ಪಾಠದಿಂದ ಉಳಿದ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ, ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಲ್ಲಿ ಸ್ಥಿರವಾದ ಪ್ರಗತಿ ಕಾಣುತ್ತಿದ್ದೇವೆ.

ಜೊತೆಗೆ, ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಕಳೆದ ಮೂರು ತಿಂಗಳಲ್ಲಿ ಸುಮಾರು 90 ಪ್ರತಿಶತದಷ್ಟು ಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಜೊತೆಗೆ ಸಮುದಾಯ ಸಂಸ್ಥೆಗಳು, ಜನರಿಗೆ ಮಂಕಿಪಾಕ್ಸ್​ನ ಕುರಿತಾದ ಅಪಾಯಗಳು, ಅದರಿಂದಾಗುವ ಬದಲಾವಣೆಗಳು, ಆರೋಗ್ಯ ಪರೀಕ್ಷೆಗಳು, ಲಸಿಕೆಗಳು ಮತ್ತು ಚಿಕಿತ್ಸೆಗಳ ಕುರಿತು ಮಾಹಿತಿ ನೀಡುವುದು ಅತ್ಯಂತ ಪ್ರಮುಖ ನಿರ್ಣಯವಾಗಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಯುವುದು ನಮ್ಮ ಕಾಳಜಿಯಾಗಿದೆ. ಆದರೆ ಹೆಚ್ಚು ಪೀಡಿತವಾಗಿರುವ ಸಮುದಾಯಗಳು ಭಯವನ್ನು ಹೊಂದಿರುವುದರಿಂದ ನಮ್ಮ ನಿರ್ವಹಣೆ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್ ಹೇಳಿದ್ಧಾರೆ.

ಇದನ್ನೂ ಓದಿ: 6 ವಾರಗಳಲ್ಲಿ ಟ್ವಿಟರ್​ಗೆ ಹೊಸ ಮಹಿಳಾ ಸಿಇಒ: ಎಲಾನ್​ ಮಸ್ಕ್​ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.