ETV Bharat / international

ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್​ ತಾಯಿ-ಮಗಳಿಂದ ಹೀಗೊಂದು ಇತಿಹಾಸ ಸೃಷ್ಟಿ!

author img

By

Published : Aug 4, 2022, 4:42 PM IST

ಅಮೆರಿಕದ ಹಾಲಿ ಪೆಟಿಟ್ ಹಾಗೂ ಮಗಳು ಕೆಲ್ಲಿ ಪೆಟಿಟ್ ಎಂಬ ತಾಯಿ-ಮಗಳು ಒಂದೇ ವಿಮಾನಕ್ಕೆ ಪೈಲಟ್​ಗಳಾಗಿ ಕಾರ್ಯನಿರ್ವಹಿಸಿ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ.

US Mother-daughter Pilot Duo Creates History By Flying Together
ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್​ ತಾಯಿ-ಮಗಳಿಂದ ಇತಿಹಾಸ ಸೃಷ್ಟಿ

ವಾಷಿಂಗ್ಟನ್(​ಅಮೆರಿಕ): ವಿಮಾನಯಾನ ಕ್ಷೇತ್ರದಲ್ಲಿ ಅಮೆರಿಕದ ತಾಯಿ ಮತ್ತು ಮಗಳು ಒಟ್ಟಿಗೆ ವಿಮಾನ ಹಾರಾಟ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಕ್ಯಾಪ್ಟನ್ ಹಾಲಿ ಪೆಟಿಟ್ ಮತ್ತು ಫಸ್ಟ್ ಆಫೀಸರ್ ಕೆಲ್ಲಿ ಪೆಟಿಟ್ ಅವರು ಏರ್‌ಲೈನ್ಸ್ ಇತಿಹಾಸದಲ್ಲಿಯೇ 'ಪೈಲಟ್‌ ಸೀಟಿನಲ್ಲಿ ಕುಳಿತ ಮೊದಲ ತಾಯಿ-ಮಗಳು ಜೋಡಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • On July 23, Southwest Airlines had a mother and daughter duo pilot a flight for the first time in the airline's 55 year history. Captain Holly Petitt and First Officer Keely Petitt operated flight 3658 from Denver (DEN) to St. Louis (STL). #SWAPA #Pilots pic.twitter.com/LVpOTbH1Zu

    — Southwest Airlines Pilots Association (@swapapilots) August 3, 2022 " class="align-text-top noRightClick twitterSection" data=" ">

ಕಳೆದ ಜುಲೈ 23ರಂದು ತಾಯಿ ಹಾಲಿ ಪೆಟಿಟ್ ಹಾಗೂ ಮಗಳು ಕೆಲ್ಲಿ ಪೆಟಿಟ್ ಪೈಲಟ್​ ಆಗಿ ಅಮೆರಿಕದ ಡೆನ್ವರ್‌ನಿಂದ ಸೇಂಟ್ ಲೂಯಿಸ್‌ಗೆ ಸೌತ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನ ಹಾರಾಟ ಮಾಡಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಈ ವಿಡಿಯೋದಲ್ಲಿ ತಾಯಿ ಹಾಲಿ ಪೆಟಿಟ್ ಮಾತನಾಡಿದ್ದು, "ಇಂದು ನಮಗೆ ಮತ್ತು ಸೌತ್‌ವೆಸ್ಟ್ ಏರ್‌ಲೈನ್ಸ್‌ಗೆ ರೋಮಾಂಚಕಾರಿ ಹಾಗೂ ಬಹಳ ವಿಶೇಷವಾದ ದಿನ. ಸೌತ್‌ವೆಸ್ಟ್ ಏರ್‌ಲೈನ್ಸ್‌ನ ಫ್ಲೈಟ್ ಡೆಕ್‌ನಲ್ಲಿ ನಾವು ಮೊದಲ ತಾಯಿ-ಮಗಳು ಪೈಲಟ್​​ ಜೋಡಿಯಾಗಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದರು.

ಕಾಲೇಜು ಮುಗಿಸಿದ ನಂತರ ತಾಯಿ ಹಾಲಿ ಆರಂಭದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಆರಂಭಿಸಿದ್ದರು. ನಂತರ ಪೈಲಟ್ ಆಗಿ ಬಡ್ತಿ ಪಡೆದಿದ್ದರು. ಇದಕ್ಕಾಗಿ ಸಾಕಷ್ಟು ವಿಮಾನ ಹಾರಾಟ ತರಬೇತಿ ಪಡೆದುಕೊಂಡಿದ್ದರು. ಇತ್ತ, ತನ್ನ ತಾಯಿಯಂತೆ ಮಗಳು ಕೆಲ್ಲಿ ಕೂಡ ವಿಮಾನ ಹಾರಾಟ ಮಾಡುವ ಕನಸನ್ನು ತಮ್ಮ 14ನೇ ವಯಸ್ಸಿನಲ್ಲಿಯೇ ಕಂಡಿದ್ದರು. ಪೈಲಟ್ ಪರವಾನಗಿ ಪಡೆದ ನಂತರ 2017ರಲ್ಲಿ ಇಂಟರ್ನ್ ಆಗಿ ಇವರು ಏರ್‌ಲೈನ್‌ಗೆ ಸೇರ್ಪಡೆಯಾಗಿದ್ದರು. ಇದೀಗ ಕೊನೆಗೂ ತನ್ನ ಕನಸಿನಂತೆ ಪೈಲಟ್ ಆಗಿ ತಾಯಿಯೊಂದಿಗೂ ವಿಮಾನ ಹಾರಾಟ ನಡೆಸಿದ್ದಾರೆ.

ಭಾರತದ ತಾಯಿ-ಮಗ ಪೈಲಟ್‌ ಜೋಡಿ: ಭಾರತದಲ್ಲೂ ಇದೇ ರೀತಿಯ ವಿಶೇಷ ಸಂದರ್ಭ ಈ ಹಿಂದೆಯೇ ನಡೆದಿತ್ತು. ಅಮೆರಿಕದಲ್ಲಿ ತಾಯಿ ಮತ್ತು ಮಗಳು ವಿಮಾನ ಹಾರಾಟ ಮಾಡಿದಂತೆ 'ತಾಯಂದಿರ ದಿನ'ದಂದು ಭಾರತದ ತಾಯಿ ಮತ್ತು ಮಗ ವಿಮಾನ ಹಾರಾಟ ಮಾಡಿ ಗಮನ ಸೆಳೆದಿದ್ದರು.

ಇದನ್ನೂ ಓದಿ: ತೈವಾನ್ ಸುತ್ತ ತೀವ್ರಗೊಂಡ ಚೀನಾ ಮಿಲಿಟರಿ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.