ETV Bharat / international

ನಾಯಕ ಯೆವ್​ಗನಿ ಪ್ರಿಗೊಜಿನ್ ಸಾವು ಖಚಿತ ಪಡಿಸಿದ ರಷ್ಯಾ ತನಿಖಾ ಸಮಿತಿ - ನಾಯಕ ಯೆವ್​ಗನಿ ಪ್ರಿಗೊಜಿನ್

ಆಗಸ್ಟ್​ 23 ರಂದು ರಷ್ಯಾದಲ್ಲಿ ನಡೆದ ವಿಮಾನ ಪತನದಲ್ಲಿ ವ್ಯಾಗ್ನರ್​​​​ ಯೆವ್​ಗನಿ ಪ್ರಿಗೊಜಿನ್​​ ಸಾವಿನ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಚನೆಯಾಗಿದ್ದ ತನಿಖಾ ಸಮಿತಿ ಯೆವ್​ಗನಿ ಪ್ರಿಗೊಜಿನ್ ಇದೇ ದುರಂತದಲ್ಲಿ ಸಾವನ್ನಪ್ಪಿದ್ದಾರೆಂದು ಖಚಿತ ಪಡಿಸಿದೆ.

ನಾಯಕ ಯೆವ್​ಗನಿ ಪ್ರಿಗೊಜಿನ್ ಸಾವು
ನಾಯಕ ಯೆವ್​ಗನಿ ಪ್ರಿಗೊಜಿನ್ ಸಾವು
author img

By ETV Bharat Karnataka Team

Published : Aug 28, 2023, 7:21 AM IST

ಮಾಸ್ಕೋ(ರಷ್ಯಾ): ಖಾಸಗಿ ಪಡೆ 'ವ್ಯಾಗ್ನರ್​' ನಾಯಕ ಯೆವ್​ಗನಿ ಪ್ರಿಗೊಜಿನ್ ಆಗಸ್ಟ್​ 23 ರಂದು ನಡೆದ ವಿಮಾನ ಪತನದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತನಿಖಾ ಸಮಿತಿ ದೃಢಪಡಿಸಿದೆ. ಘಟನೆ ನಂತರ ಹಲವು ತನಿಖೆ ನಡೆಸಿದ ಸಮಿತಿ ಈ ಹೇಳಿಕೆ ನೀಡಿದೆ. ಘಟನೆಯಲ್ಲಿ ಸಾವನ್ನಪ್ಪಿರುವ 10 ಮೃತ ಪ್ರಯಾಣಿಕರನ್ನು ಗುರುತಿಸಲಾಗಿದೆ. ಮೊದಲು ಹೇಳಲಾದ ಪಟ್ಟಿಯಲ್ಲಿದ್ದ ವ್ಯಕ್ತಿಗಳೇ ತನಿಖೆ ನಂತರ ಬಂದ ವರದಿಗೆ ಸರಿ ಹೊಂದುತ್ತಿದೆ ಎಂದು ಸಮಿತಿಯು ಹೇಳಿದೆ.

ಯೆವ್​ಗನಿ ಪ್ರಿಗೊಜಿನ್ ಜೊತೆ 9 ಜನರ ಸಾವಿಗೆ ಕಾರಣವಾದ ಜೆಟ್​ವಿಮಾನದ ಬ್ಲ್ಯಾಕ್​ ಬಾಕ್ಸ್​(ವಿಮಾನ ಡೇಟಾ ರೆಕಾರ್ಡರ್) ಅನ್ನು ರಷ್ಯಾದ ತನಿಖಾಧಿಕಾರಿಗಳು ವಶಪಡಿಸಿಕಕೊಂಡಿದ್ದಾರೆ. ವಿಮಾನ ಪತನವು ಆಗಸ್ಟ್​ 23 ರಂದು ರಷ್ಯಾದ ರಾಜಧಾನಿ ಮಾಸ್ಕೋದ ಉತ್ತರಭಾಗದಲ್ಲಿ ನಡೆದಿತ್ತು. ಖಾಸಗಿ ಜೆಟ್​ ಮಾಸ್ಕೋದಿಂದ ಸೇಂಟ್​ ಪೀಟರ್ಸ್​ಬರ್ಗ್​ಗೆ ತೆರಳುವಾಗ ರಾಜಧಾನಿಯಿಂದ 100 ಕಿಮೀ ದೂರದಲ್ಲಿ ಪತನವಾಗಿತ್ತು. ಘಟನೆಯಲ್ಲಿ ಸಾವನ್ನಪ್ಪಿದವರೆಲ್ಲ ಪ್ರಿಗೊಜಿನ್ ಮತ್ತು ಅವರ ಕೆಲವು ಉನ್ನತ ಲೆಫ್ಟಿನೆಂಟ್‌ಗಳು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಯೆವ್ಗೆನಿ ಪ್ರಿಗೋಜಿನ್ ಯಾರು?: ಈಗ ಮಾಸ್ಕೋ ವಿರುದ್ಧ ತಿರುಗಿ ಬಿದ್ದಿದ್ದ ಪ್ರಿಗೊಜಿನ್ ಮಾಜಿ ಅಪರಾಧಿ ಮತ್ತು ಒಂದು ಕಾಲದಲ್ಲಿ ತಿಂಡಿ ತಿನಿಸು ಮಾರುವ ವ್ಯಕ್ತಿಯಾಗಿದ್ದ. ಈತ ತನ್ನ ನಿರ್ದಯತೆ, ಹಿಂಸೆ ಮತ್ತು ಕ್ರೌರ್ಯಕ್ಕೆ ಕುಖ್ಯಾತನಾಗಿದ್ದಾನೆ. 1961 ರಲ್ಲಿ ಸೇಂಟ್ ಪೀಟರ್ಸ್ ಬರ್ಗ್​ನಲ್ಲಿ ಜನಿಸಿದ ಈತ ಆರಂಭದಲ್ಲಿ ಕ್ರೀಡಾ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ. ಆದರೆ, ಚಿಕ್ಕವನಿರುವಾಗಲೇ ಸಣ್ಣ ಪುಟ್ಟ ಅಪರಾಧಿಗಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. 1980 ರಲ್ಲಿ ಹಲವಾರು ಹಿಂಸಾತ್ಮಕ ದರೋಡೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಈತ ತಮ್ಮ 20 ರ ಹರೆಯದಲ್ಲಿ ಹೆಚ್ಚಿನ ಸಮಯವನ್ನು ಜೈಲಿನಲ್ಲಿಯೇ ಕಳೆದ.

1990 ರಲ್ಲಿ ಈತ ಜೈಲಿನಿಂದ ಬಿಡುಗಡೆಯಾದಾಗ ಸೋವಿಯತ್ ಒಕ್ಕೂಟವು ಛಿದ್ರವಾಗುವ ಹಂತದಲ್ಲಿತ್ತು. ಆಗ ಆತ ಸಣ್ಣ ಪ್ರಮಾಣದಲ್ಲಿ ತಿಂಡಿ ತಿನಿಸು ಮಾರುತ್ತಿದ್ದ. ಆದರೆ, ತುಂಬಾ ಕಡಿಮೆ ಸಮಯದಲ್ಲಿ ಈತ ತನ್ನ ತವರು ನಗರದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಸೂಪರ್‌ಮಾರ್ಕೆಟ್ ಚೇನ್​ನಲ್ಲಿ ಪಾಲು ಪಡೆದುಕೊಂಡ. ಆಗಲೇ ಆತ ವ್ಲಾಡಿಮಿರ್ ಪುಟಿನ್ ಸೇರಿದಂತೆ ಪ್ರಬಲ ವ್ಯಕ್ತಿಗಳ ನಂಬಿಕೆ ಗಳಿಸಿಕೊಂಡು ಅವರಿಗಾಗಿ ಕೆಲಸ ಮಾಡತೊಡಗಿದ್ದ.ಪ್ರಿಗೊಜಿನ್ ಉನ್ನತ ಮಟ್ಟದ ಅಧಿಕೃತ ಕಾರ್ಯಕ್ರಮಗಳಿಗೆ ಆಹಾರ ಸರಬರಾಜು ಮಾಡುತ್ತ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದ.

ಆದರೆ, ಸರ್ಕಾರದ ಆಹಾರ ಗುತ್ತಿಗೆಗಳಿಂದ ಈತ ಅತಿ ಬೇಗನೆ ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ. ದಶಕದ ಹಿಂದೆ ರಷ್ಯಾ ಅಕ್ರಮವಾಗಿ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಸ್ವಾಧೀನಪಡಿಸಿಕೊಂಡಿತ್ತು ಮತ್ತು ಪೂರ್ವ ಉಕ್ರೇನ್‌ಗೆ ಅನಾಮಧೇಯ ಸೇನಾ ಪಡೆಗಳನ್ನು ಕಳುಹಿಸಿತ್ತು. ಆಗಲೇ ಪ್ರಿಗೊಜಿನ್ ತನ್ನ ಖಾಸಗಿ ಸೇನಾಪಡೆಯನ್ನು ಸ್ಥಾಪಿಸಿದ್ದನಲ್ಲದೇ ಪುಟಿನ್ ಪರವಾಗಿ ಹೋರಾಡಿದ್ದ. ಈ ಮೂಲಕ ಹೋರಾಟದಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಪುಟಿನ್ ತೋರಿಸಿಕೊಳ್ಳಲು ನೆರವಾಗಿದ್ದ. ಕೆಲ ವರ್ಷಗಳಲ್ಲಿ ಪ್ರಿಗೋಜಿನ್ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಇತ್ತೀಚೆಗೆ ಉಕ್ರೇನ್‌ನಾದ್ಯಂತ ವ್ಯಾಗ್ನರ್ ಪಡೆಯನ್ನು ಪ್ರಬಲ ಶಕ್ತಿಯಾಗಿ ನಿರ್ಮಿಸಿದ್ದ. ಸಿರಿಯಾದಲ್ಲಿ ಅಪ್ರತಿಮ ಹೋರಾಟ ನಡೆಸಿದ ವ್ಯಾಗ್ನರ್ ಪಡೆಗಳು ಪ್ರಥಮ ಬಾರಿಗೆ ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿದ್ದವು.

ಸಿರಿಯಾದ ಬಶರ್ ಅಲ್-ಅಸ್ಸಾದ್‌ ಗುಂಪಿಗೆ ಮಾಸ್ಕೋ ಬೆಂಬಲ ನೀಡಿತ್ತು ಮತ್ತು ಇದಕ್ಕೆ ಪೂರಕವಾಗಿ ವ್ಯಾಗ್ನರ್ ಪಡೆ ಹೋರಾಟ ನಡೆಸಿತ್ತು. ಮಾಲಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಮತ್ತು ಸುಡಾನ್ ಸೇರಿದಂತೆ ರಷ್ಯಾದ ಹಿತಾಸಕ್ತಿಗಳನ್ನು ಬೆಂಬಲಿಸುವ ಕಾರ್ಯಾಚರಣೆಗಳಲ್ಲಿ ವ್ಯಾಗ್ನರ್ ಪಡೆಗಳು ಆಫ್ರಿಕಾದಾದ್ಯಂತ ಹೋರಾಡಿದ್ದವು. ಪಾಶ್ಚಿಮಾತ್ಯ ಗುಪ್ತಚರ ವಿಶ್ಲೇಷಕರ ಪ್ರಕಾರ, ಕಳೆದ ವರ್ಷ ಜೈಲುಗಳಲ್ಲಿದ್ದ ಕೈದಿಗಳನ್ನು ತನ್ನ ಸೇನಾಪಡೆಗೆ ನೇಮಕ ಮಾಡಿಕೊಳ್ಳಲು ವ್ಯಾಗ್ನರ್​ಗೆ ಅವಕಾಶ ನೀಡಲಾಗಿತ್ತು. ಇದರ ನಂತರ ವ್ಯಾಗ್ನರ್ ಪಡೆ 50 ಸಾವಿರ ಯೋಧರ ಬಲ ಹೊಂದಿದೆ. ಪ್ರಿಗೋಜಿನ್ ಅವರ ವ್ಯಕ್ತಿತ್ವ ಮತ್ತು ಕಾರ್ಯಾಚರಣೆಯ ವಿಧಾನ ಮುಂತಾದ ಕಾರಣಗಳಿಂದ ರಷ್ಯಾದ ಸಾಂಪ್ರದಾಯಿಕ ಮಿಲಿಟರಿ ಮತ್ತು ಅವರ ಮಧ್ಯೆ ಹಲವಾರು ವರ್ಷಗಳಿಂದ ಉದ್ವಿಗ್ನತೆ ಉಂಟಾಗುವಂತೆ ಮಾಡಿದೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಈ ದ್ವೇಷ ಮತ್ತಷ್ಟು ಹೆಚ್ಚಾಗಿತ್ತು.(ANI)

ಇದನ್ನೂ ಓದಿ: ಪುಟಿನ್​ ವಿರುದ್ಧ ಬಂಡಾಯವೆದ್ದಿದ್ದ 'ವ್ಯಾಗ್ನರ್​' ನಾಯಕ ಪ್ರಿಗೊಜಿನ್​ ವಿಮಾನ ಅಪಘಾತದಲ್ಲಿ ಸಾವು: ಶಂಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.