ETV Bharat / international

ಅಫ್ಘಾನಿಸ್ತಾನ ಭೂಕಂಪ: ಸಾವನ್ನಪ್ಪಿದರಲ್ಲಿ ಶೇಕಡಾ 90 ರಷ್ಟು ಮಕ್ಕಳು, ಮಹಿಳೆಯರೇ: ವಿಶ್ವಸಂಸ್ಥೆ - ನಾರ್ವೇಜಿಯನ್ ನಿರಾಶ್ರಿತರ ಮಂಡಳಿ

ಅಫ್ಘಾನಿಸ್ತಾನದಲ್ಲಿ ಉಂಟಾದ ಭೀಕರ ಭೂಕಂಪದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಮಕ್ಕಳು, ಮಹಿಳೆಯರೇ ಅತೀ ಹೆಚ್ಚು ಮೃತಪಟ್ಟಿದ್ದಾರೆ ಎಂದು ವಿಶ್ವ ಸಂಸ್ಥೆ ವರದಿ ಮಾಡಿದೆ.

ಅಫ್ಘಾನಿಸ್ತಾನ ಭೂಕಂಪ
ಅಫ್ಘಾನಿಸ್ತಾನ ಭೂಕಂಪ
author img

By PTI

Published : Oct 13, 2023, 8:15 AM IST

ಇಸ್ಲಾಮಾಬಾದ್: ಕಳೆದ ಶನಿವಾರ ಸಂಭವಿಸಿದ 6.3 ತೀವ್ರತೆಯ ಸರಣಿ ಭೂಕಂಪದಲ್ಲಿ ಸಾವನ್ನಪ್ಪಿದ ಮೃತರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮಕ್ಕಳು ಮತ್ತು ಮಹಿಳೆಯರೇ ಆಗಿದ್ದಾರೆಂದು ವಿಶ್ವಸಂಸ್ಥೆ​ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಹೆರಾತ್​ ಪ್ರಾಂತ್ಯದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ 2000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ​ದ ತಾಲಿಬಾನ್​​ ಅಧಿಕಾರಿಗಳು ತಿಳಿಸಿದಿದ್ದಾರೆ. ವಿಶ್ವಸಂಸ್ಥೆ​ಯ ಅಂಕಿ ಅಂಶಗಳ ಪ್ರಕಾರ 1,294 ಜನರು ಸಾವನ್ನಪ್ಪಿದ್ದು, 1688 ಜನರು ಗಾಯಗೊಂಡಿದ್ದಾರೆ. ಅಲ್ಲಿನ ಪ್ರತಿ ಒಂದು ಮನೆಯೂ ನಾಶವಾಗಿದೆ. ಇಲ್ಲಿನ ಝೆಂಡಾ ಜಾನ್ ಜಿಲ್ಲೆ ಭೂಕಂಪನದ ಕೇಂದ್ರಬಿಂದುವಾಗಿತ್ತು.

ಬೆಳಗ್ಗೆ ಭೂಕಂಪ ಸಂಭವಿಸಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಈ ಹೊತ್ತಿನಲ್ಲಿ ಮನೆಯಲ್ಲಿದ್ದರು. ಮೊದಲ ಭೂಕಂಪನ ಸಂಭವಿಸಿದಾಗ ಜನರೆಲ್ಲ ಅದನ್ನು ಸ್ಫೋಟ ಎಂದು ಭಾವಿಸಿದರು. ಇದರಿಂದ ಎಲ್ಲರೂ ತಮ್ಮ ತಮ್ಮ ಮನೆಗೆ ಓಡಿ ಹೋದರು ಎಂದು ಹೆರಾತ್‌ನಲ್ಲಿರುವ ಯುನಿಸೆಫ್ ಕ್ಷೇತ್ರ ಕಚೇರಿಯ ಮುಖ್ಯಸ್ಥ ಸಿದ್ದಿಗ್ ಇಬ್ರಾಹಿಂ ಹೇಳಿದ್ದಾರೆ. ಝೆಂಡಾ ಜಾನ್ ಜಿಲ್ಲೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದು, ಇದರಲ್ಲಿ ಮಹಿಳೆಯರು ಹೆಚ್ಚಾಗಿ ಒಳಗಾಗಿದ್ದಾರೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಅಫ್ಘಾನಿಸ್ತಾನದ ಪ್ರತಿನಿಧಿ ಜೈಮ್ ನಡಾಲ್ ಪ್ರಕಾರ ರಾತ್ರಿ ಭೂಕಂಪ ಸಂಭವಿಸಿದ್ದರೆ ಸಾವಿನ ಸಂಖ್ಯೆಗೆ ಲೆಕ್ಕವೇ ಇರುತ್ತಿರಲಿಲ್ಲ ಎಂದಿದ್ದಾರೆ. ಹಗಲಿನ ಸಮಯದಲ್ಲಿ ಅನೇಕ ಪುರುಷರು ಕೆಲಸಕ್ಕಾಗಿ ಇರಾನ್‌ಗೆ ವಲಸೆ ಹೋಗುತ್ತಾರೆ. ಹೆಂಗಸರು ಮಾತ್ರ ಮನೆ ಕೆಲಸ ಮಾಡಿಕೊಂಡಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಎಲ್ಲ ಅವಶೇಷಗಳ ಅಡಿ ಸಿಲುಕಿ ಸತ್ತಿರುವುದು ಮಕ್ಕಳು ಮತ್ತು ಮಹಿಳೆಯರೇ ಅಧಿಕವಾಗಿದ್ದಾರೆ.

ಬುಧವಾರ ಸಂಭವಿಸಿದ 6.3 ತೀವ್ರತೆಯ ಭೂಕಂಪವು ಇಡೀ ಹಳ್ಳಿಯನ್ನೇ ನಾಶಪಡಿಸಿದೆ. ನೂರಾರು ಮಣ್ಣಿನ ಇಟ್ಟಿಗೆ ಮನೆಗಳು ನೆಲಸಮಗೊಂಡಿವೆ. ಶಾಲೆಗಳು, ಆರೋಗ್ಯ ಚಿಕಿತ್ಸಾಲಯಗಳು ಮತ್ತು ಇತರ ಗ್ರಾಮ ಸೌಲಭ್ಯಗಳು ಸಹ ಕುಸಿದು ಹೋಗಿವೆ ಎಂದು ನಾರ್ವೇಜಿಯನ್ ನಿರಾಶ್ರಿತರ ಮಂಡಳಿ ಹೇಳಿದೆ. ಈ ತಂಡಗಳ ಪ್ರಾಥಮಿಕ ವರದಿ ಪ್ರಕಾರ, ಭೂಕಂಪದಿಂದ ಜೀವಗಳನ್ನು ಕಳೆದುಕೊಂಡವರಲ್ಲಿ ಹೆಚ್ಚಿನವರು ಚಿಕ್ಕ ಮಕ್ಕಳಾಗಿದ್ದು, ಕಟ್ಟಡಗಳು ಅವರ ಮೇಲೆ ಕುಸಿದು ಬಿದ್ದು, ಅವಶೇಷಗಳಡಿಯೇ ಬಾಕಿ ಆಗಿ ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ಕೌನ್ಸಿಲ್ ತಿಳಿಸಿದೆ.

ಈಗಾಗಲೇ ವಿಶ್ವ ಸಂಸ್ಥೆಯು ಪ್ರಾದೇಶಿಕ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್‌ಗಳನ್ನು ಒದಗಿಸಿದೆ. ಮತ್ತು ಸ್ಥಳಾಂತರಗೊಂಡ ಕುಟುಂಬಗಳಿಗೆ ಸೌರ ದೀಪಗಳು, ನೈರ್ಮಲ್ಯ ಕಿಟ್​ಗಳು ಮತ್ತು ಅಗತ್ಯಗಳನ್ನು ಒದಗಿಸಿದೆ. ಹಾಗೇ ವಿಶ್ವ ಆಹಾರ ಕಾರ್ಯಕ್ರಮದಡಿ 81 ಟನ್‌ಗಳಷ್ಟು ಆಹಾರವನ್ನು ಕಳುಹಿಸುತ್ತಿದೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಬಲ ಭೂಕಂಪಗಳಿಗೆ ನಲುಗಿದ ಅಫ್ಘಾನಿಸ್ತಾನ: ಮೃತರ ಸಂಖ್ಯೆ 2,000ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.