ETV Bharat / international

Modi in US: 2024ರಲ್ಲಿ ಇಸ್ರೋ-ನಾಸಾದಿಂದ ಜಂಟಿ ಬಾಹ್ಯಾಕಾಶ ಯೋಜನೆ ಉಡ್ಡಯನ ಒಪ್ಪಂದ - Micron Technology

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸವು ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಅಮೆರಿಕದ ಮಹತ್ವದ ಆರ್ಟೆಮಿಸ್ ಒಪ್ಪಂದ ಸೇರುವಿಕೆ ಹಾಗೂ ನಾಸಾ- ಇಸ್ರೋ ಜಂಟಿ ಅಂತರಿಕ್ಷ ಕಾರ್ಯಾಚರಣೆಗಳಿಗೂ ನಿರ್ಧರಿಸಲಾಗಿದೆ.

Prime Minister Narendra Modi and US President Joe Biden meet
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ
author img

By

Published : Jun 22, 2023, 6:57 PM IST

ವಾಷಿಂಗ್ಟನ್ ಡಿಸಿ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ದ್ವಿಪಕ್ಷೀಯ ಮಾತುಕತೆಗೂ ಮೊದಲು ನಾಗರಿಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಸಮಾನ ಮನಸ್ಕ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಆರ್ಟೆಮಿಸ್ ಒಪ್ಪಂದ (Artemis Accords)ಕ್ಕೆ ಸೇರಲು ಭಾರತ ನಿರ್ಧರಿಸಿದೆ. ಇದೇ ವೇಳೆ, 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಸಾ ಮತ್ತು ಇಸ್ರೋ ಜಂಟಿ ಕಾರ್ಯಾಚರಣೆಗೂ ಉಭಯ ದೇಶಗಳು ಒಪ್ಪಿಗೆ ನೀಡಿವೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಲಿದೆ. ಮನುಕುಲದ ಪ್ರಯೋಜನವೇ ಬಾಹ್ಯಾಕಾಶ ಸಂಶೋಧನೆಯ ಗುರಿಯಾಗಿದೆ. 1967ರ ಬಾಹ್ಯಾಕಾಶ ಒಪ್ಪಂದದ (Outer Space Treaty - OST) ಆಧಾರದಲ್ಲಿ ಆರ್ಟೆಮಿಸ್ ಒಪ್ಪಂದಗಳನ್ನು 21ನೇ ಶತಮಾನದಲ್ಲಿ ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆಗೆ ಮಾರ್ಗದರ್ಶನ ನೀಡಲು ರೂಪಿಸಲಾಗಿದೆ.

2025ರ ವೇಳೆಗೆ ಮತ್ತೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ಅಮೆರಿಕ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಂಗಳ ಮತ್ತು ಅದರಾಚೆಗೂ ಬಾಹ್ಯಾಕಾಶ ಪರಿಶೋಧನೆಯನ್ನು ವಿಸ್ತರಿಸುವ ಉದ್ದೇಶವೂ ಇದೆ. ನಾಸಾ ಮತ್ತು ಇಸ್ರೋ ಈ ವರ್ಷ ಮಾನವ ಬಾಹ್ಯಾಕಾಶಯಾನ ಸಹಕಾರ ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತಿವೆ. ಇದಲ್ಲದೇ, 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಂಟಿ ಕಾರ್ಯಾಚರಣೆಗೆ ನಾಸಾ ಮತ್ತು ಇಸ್ರೋ ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.

ಮೈಕ್ರಾನ್ ಟೆಕ್ನಾಲಜಿಯಿಂದ 800 ಮಿಲಿಯನ್‌ ಡಾಲರ್​ ಹೂಡಿಕೆ: ಸೆಮಿಕಂಡಕ್ಟರ್‌ಗಳಲ್ಲಿ ಪೂರೈಕೆ ಸರಪಳಿ ವೈವಿಧ್ಯೀಕರಣ ಉತ್ತೇಜಿಸುವ ಅರೆವಾಹಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅಮೆರಿಕ ಕಂಪನಿಗಳು ಭಾರತದೊಂದಿಗೆ ಪಾಲುದಾರಿಕೆ ಹೊಂದಿವೆ. ಭಾರತೀಯ ರಾಷ್ಟ್ರೀಯ ಸೆಮಿಕಂಡಕ್ಟರ್ ಮಿಷನ್‌ನ ಬೆಂಬಲದೊಂದಿಗೆ ಮೈಕ್ರಾನ್ ಟೆಕ್ನಾಲಜಿ 800 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚಿನ ಹೂಡಿಕೆಯನ್ನು ಘೋಷಿಸಿದೆ.

ಇದು ಭಾರತೀಯ ಅಧಿಕಾರಿಗಳಿಂದ ಹೆಚ್ಚುವರಿ ಹಣಕಾಸಿನ ಬೆಂಬಲದೊಂದಿಗೆ ಭಾರತದಲ್ಲಿ 2.75 ಬಿಲಿಯನ್ ಡಾಲರ್​ ಸೆಮಿಕಂಡಕ್ಟರ್ ಘಟಕ ಮತ್ತು ಪರೀಕ್ಷಾ ಸೌಲಭ್ಯ ನೀಡುತ್ತದೆ. ಇದರ ಜೊತೆಗೆ ಅಮೆರಿಕ ಅಪ್ಲೈಡ್ ಮೆಟೀರಿಯಲ್ಸ್ ಭಾರತದಲ್ಲಿ ವಾಣಿಜ್ಯೀಕರಣ ಮತ್ತು ನಾವೀನ್ಯತೆಗಾಗಿ ಹೊಸ ಸೆಮಿಕಂಡಕ್ಟರ್ ಸೆಂಟರ್ ​ಅನ್ನು ಘೋಷಿಸಿದೆ. ಲ್ಯಾಂಬ್ ರಿಸರ್ಚ್ ಮತ್ತೊಂದು ಸೆಮಿಕಂಡಕ್ಟರ್ ಉತ್ಪಾದನಾ ಸಲಕರಣೆ ಕಂಪನಿಯು 60 ಸಾವಿರ ಭಾರತೀಯ ಇಂಜಿನಿಯರ್‌ಗಳಿಗೆ ಸೆಮಿವರ್ಸ್ ಪರಿಹಾರದ ಮೂಲಕ ಭಾರತದ ಸೆಮಿಕಂಡಕ್ಟರ್ ವರ್ಕ್‌ಫೋರ್ಸ್ ಅಭಿವೃದ್ಧಿ ಗುರಿಗಳನ್ನು ವೇಗಗೊಳಿಸಲು ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ.

ಖನಿಜಗಳ ಪೂರೈಕೆ ಸರಪಳಿಗೆ ಬಲ: ಅಲ್ಲದೇ, ಖನಿಜ ಭದ್ರತೆ ಪಾಲುದಾರಿಕೆ ಸದಸ್ಯನಾಗಲು ಭಾರತಕ್ಕೆ ಅಮೆರಿಕ ತನ್ನ ಬೆಂಬಲವನ್ನು ಘೋಷಿಸಿದ್ದು, ಇದು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ. ಹವಾಮಾನ, ಆರ್ಥಿಕ ಮತ್ತು ತಂತ್ರಜ್ಞಾನ ಗುರಿಗಳಿಗೆ ಅಗತ್ಯವಿರುವ ಖನಿಜಗಳು ನಮ್ಮ ಆಯಾ ಮಾರುಕಟ್ಟೆಗಳಿಗೆ ಉತ್ತಮವಾಗಿ ಸರಬರಾಜು ಮಾಡಲ್ಪಟ್ಟಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದರ ಜೊತೆಗೆ ಸುಧಾರಿತ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನದಲ್ಲಿ ಭಾರತ ಮತ್ತು ಅಮೆರಿಕ ಮೊದಲು ಜಂಟಿ ಇಂಡೋ-ಯುಎಸ್ ಕ್ವಾಂಟಮ್ ಸಮನ್ವಯ ಕಾರ್ಯವಿಧಾನವನ್ನು ಸ್ಥಾಪಿಸಿವೆ. ಇದು ಕೈಗಾರಿಕೆಗಳು, ಅಕಾಡೆಮಿಗಳು ಮತ್ತು ಸರ್ಕಾರದ ನಡುವೆ ಹೆಚ್ಚಿನ ಸಹಯೋಗವನ್ನು ಸುಗಮಗೊಳಿಸುತ್ತದೆ ಎಂದು ಹೇಳಿದ್ದಾರೆ.

ದೂರಸಂಪರ್ಕ ಕ್ಷೇತ್ರದಲ್ಲಿ ಜಂಟಿ ಕಾರ್ಯನಿರ್ವಹಣೆ: ಇದಲ್ಲದೇ, ಕೃತಕ ಬುದ್ಧಿಮತ್ತೆಯ ಸುಧಾರಿತ ವೈರ್‌ಲೆಸ್ ಮತ್ತು ಕ್ವಾಂಟಮ್ ತಂತ್ರಜ್ಞಾನಗಳ ಕುರಿತು ಹೊಸ ಅನುಷ್ಠಾನ ವ್ಯವಸ್ಥೆಗೆ ಸಹಿ ಹಾಕಲಾಗಿದೆ. ಇದು ಆರ್ಥಿಕ ಅಭಿವೃದ್ಧಿ ಒಕ್ಕೂಟದ ಸದಸ್ಯತ್ವಕ್ಕೆ ಭಾರತೀಯ ಕ್ವಾಂಟಮ್ ವಿಶ್ವವಿದ್ಯಾಲಯಗಳು ಮತ್ತು ಘಟಕಗಳನ್ನು ಸ್ವಾಗತಿಸುತ್ತಿದೆ.

ಈಗಾಗಲೇ ಎರಡೂ ದೇಶಗಳು 5ಜಿ ಮತ್ತು 6ಜಿ ತಂತ್ರಜ್ಞಾನಗಳು ಮತ್ತು ಓಪನ್ ರೇಡಿಯೋ ಆಕ್ಸೆಸ್ ನೆಟ್‌ವರ್ಕ್ (RAN) ಸಿಸ್ಟಮ್‌ಗಳು ಒಳಗೊಂಡಂತೆ ಸುಧಾರಿತ ದೂರಸಂಪರ್ಕದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿವೆ. ಎರಡೂ ಮಾರುಕಟ್ಟೆಗಳ ನಿರ್ವಾಹಕರು ಮತ್ತು ಮಾರಾಟಗಾರರೊಂದಿಗೆ ಉಭಯ ದೇಶಗಳಲ್ಲಿ ಓಪನ್ ರೇಡಿಯೋ ಆಕ್ಸೆಸ್ ನೆಟ್‌ವರ್ಕ್, ಕ್ಷೇತ್ರ ಪ್ರಯೋಗಗಳು ಮತ್ತು ಹೊಸ ಉತ್ಪನ್ನಗಳಿಗೆ ಪಾಲುದಾರಿಕೆಗಳಿಗೂ ಅಮೆರಿಕ ಸ್ವಾಗತಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ನುರಿತ ಉದ್ಯೋಗಿಗಳಿಗಾಗಿ ಸರಳ ವೀಸಾ ಯೋಜನೆ ರೂಪಿಸಲು ಮುಂದಾದ ಅಮೆರಿಕ; ಮೋದಿ ಪ್ರವಾಸದ ಇಂಪ್ಯಾಕ್ಟ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.