ವಾಷಿಂಗ್ಟನ್ (ಯುಎಸ್): ಹಾಲಿವುಡ್ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಅವರನ್ನೇ ಹೋಲುವಂತೆ ತಾರೆಯೊಬ್ಬಳು 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ವಿಚಿತ್ರ ಅಂದ್ರೆ ಅದಕ್ಕೆ ತೃಪ್ತಿಯಾಗದೇ ಮತ್ತೆ ಮೊದಲಿನಂತೆ ಕಾಣುವಂತೆ ಸರ್ಜರಿಗೊಳಗಾಗಿದ್ದಾರೆ. ಇದಕ್ಕಾಗಿ ಅವರು ಮೊದಲು ಕಿಮ್ ಕಾರ್ಡಶಿಯನ್ ರೂಪ ತಾಳಲು $600K (4.7 ಕೋಟಿ ಭಾರತೀಯ ರೂಪಾಯಿ) ಖರ್ಚು ಮಾಡಿದರೆ ಬಳಿಕ ಅಸಲಿ ರೂಪಕ್ಕಾಗಿ ಮತ್ತೆ $120K (95,49,660.00 ರೂ.) ಖರ್ಚು ಭರಿಸಿದ್ದಾರೆ.
29 ವರ್ಷ ರಿಯಾಲಿಟಿ ಸೂಪರ್‌ಸ್ಟಾರ್ ಜೆನ್ನಿಫರ್ ಪ್ಯಾಂಪ್ಲೋನಾ ಈ ಹರಸಾಹ ಮಾಡಿದ ತಾರೆ. 12 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 40 ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಮೂಲಕ ಜೆನ್ನಿಫರ್ ಇದೀಗ ಫ್ಯಾಷನ್ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯನ್ನು ಖಾಯಿಲೆಯಾಗಿ ಪರಿವರ್ತಿಸಿಕೊಂಡಿರುವ ಈ ತಾರೆ ಕೊನೆಗೆ ತನ್ನದೇ ರೂಪ ಪಡೆದುಕೊಂಡಿದ್ದಾರೆ.
ನಾನು ಅಲ್ಪ - ಸ್ವಲ್ಪ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದು, ಜನರು ನನ್ನನ್ನು ಕಾರ್ಡಶಿಯನ್ ಎಂದೇ ಕರೆಯುತ್ತಿದ್ದರು. ಆರಂಭದಲ್ಲಿ ಇದು ಖುಷಿ ತರಿಸಿತು. ಆದರೆ, ಕಾಲಕ್ರಮೇಣ ಇದು ನನಗೆ ಕಿರಿಕಿರಿಯುಂಟು ಮಾಡಲು ಪ್ರಾರಂಭಿಸಿತು. ಹಾಗಾಗಿ ಅಸಲಿ ರೂಪ ತಾಳಲು ಮತ್ತೆ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಬೇಕಾಯಿತು ಎಂದು ತಾರೆಯು ತನ್ನ ಮನದ ತೊಳಲಾಟ ಬಿಚ್ಚಿಟಿದ್ದಾರೆ.
-
Woman spent $600K to be Kim Kardashian, now paying $120K to 'detransition'
— ANI Digital (@ani_digital) July 12, 2022 " class="align-text-top noRightClick twitterSection" data="
Read @ANI story: https://t.co/grUuoV6mVs#KimKardashian #surgery #Hollywood pic.twitter.com/fsr7YAfYSd
">Woman spent $600K to be Kim Kardashian, now paying $120K to 'detransition'
— ANI Digital (@ani_digital) July 12, 2022
Read @ANI story: https://t.co/grUuoV6mVs#KimKardashian #surgery #Hollywood pic.twitter.com/fsr7YAfYSdWoman spent $600K to be Kim Kardashian, now paying $120K to 'detransition'
— ANI Digital (@ani_digital) July 12, 2022
Read @ANI story: https://t.co/grUuoV6mVs#KimKardashian #surgery #Hollywood pic.twitter.com/fsr7YAfYSd
ನಾನು ಕೆಲಸ ಮಾಡಿದ್ದೇನೆ. ಸಾಕಷ್ಟು ಓದಿದ್ದೇನೆ. ಉದ್ಯಮಿ ಕೂಡ ಆಗಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಈ ಎಲ್ಲ ಸಾಧನೆಗಳನ್ನು ಹೊಂದಿದ್ದೇನೆ. ಆದರೆ, ಜನರು ನನ್ನ ಅಸಲಿ ಹೆಸರಿನಿಂದ ಕರೆಯುವುದನ್ನು ಬಿಟ್ಟು ಕಾರ್ಡಶಿಯನ್ ಅಂತೆಯೇ ಕರೆಯುತ್ತಿದ್ದರು. ತೃಪ್ತಿ ತರಿಸದ ಕಾರಣ ನಾನು ಮತ್ತೆ ಮೂಲ ರೂಪ ಹೊಂದಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕಾಯಿತು ಎಂದಿದ್ದಾರೆ.
ಜೆನ್ನಿಫರ್ ತಾವು 17ನೇ ವಯಸ್ಸಿನಲ್ಲಿ ಇದ್ದಾಗಲೇ ಈ ರೀತಿಯ ಸರ್ಜರಿ ಮಾಡಿಸಿಕೊಳ್ಳುವ ಖಯಾಲಿ ಮಾಡಿಕೊಂಡಿದ್ದರಂತೆ. ಸತತ 12 ವರ್ಷಗಳ ಕಾಲ ಅವರು 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಇದೀಗ ಅಚ್ಚರಿಗೆ ಕಾರಣರಾಗಿದ್ದಾರೆ. ಇದೀಗ ತಮ್ಮ ಬಗ್ಗೆ ತಾವೇ ಬೇಸರ ಹೊರ ಹಾಕಿಕೊಂಡಿರುವ ಅವರು ಈ ಮಾರ್ಗವನ್ನು ಅನುಸರಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ತಾರೆಯು ಅಂತಿಮ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಪ್ರಮಾಣದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮತ್ತು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಸಲುವಾಗಿಯೇ ಈ ಪ್ರಮಾಣದ ಪ್ಲಾಸ್ಟಿಕ್ ಸರ್ಜರಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.