ಕಠ್ಮಂಡು (ನೇಪಾಳ): ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನೇಪಾಳದ ಪರ್ವತಮಯ ಪ್ರದೇಶ ಮುಸ್ತಾಂಗ್ ಜಿಲ್ಲೆಯಲ್ಲಿ ನಿನ್ನೆ ಪತನಗೊಂಡಿತ್ತು. ಇದೀಗ ವಿಮಾನದ ಅವಶೇಷಗಳಿಂದ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಉಳಿದವರಿಗಾಗಿ ಶೋಧ ಮುಂದುವರೆದಿದೆ ಎಂದು ತಿಳಿದುಬಂದಿದೆ.
-
Nepal plane crash | Officials present at plane crash site have recovered 14 bodies till now. The bodies will be flown to Kathmandu for postmortem, the officials say.
— ANI (@ANI) May 30, 2022 " class="align-text-top noRightClick twitterSection" data="
">Nepal plane crash | Officials present at plane crash site have recovered 14 bodies till now. The bodies will be flown to Kathmandu for postmortem, the officials say.
— ANI (@ANI) May 30, 2022Nepal plane crash | Officials present at plane crash site have recovered 14 bodies till now. The bodies will be flown to Kathmandu for postmortem, the officials say.
— ANI (@ANI) May 30, 2022
ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರಬಹುದು. ನಾವು ಪ್ರಾಥಮಿಕ ಕಾರ್ಯಾಚರಣೆ ನಡೆಸಿದ್ದು, ವಿಮಾನದಲ್ಲಿ ಯಾವುದೇ ಬೆಂಕಿ ಕಾಣಿಸಿಕೊಂಡಿಲ್ಲ. ವಿಮಾನ ಸಮೀಪದ ಬಂಡೆಗೆ ಅಪ್ಪಳಿಸಿರುವುದರಿಂದ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆಯಿಲ್ಲ. ಆದರೆ ಅಧಿಕೃತ ಹೇಳಿಕೆ ಬರಬೇಕಿದೆ ಎಂದು ಗೃಹ ಸಚಿವಾಲಯ ವಕ್ತಾರ ಫದೀಂದ್ರ ಮಣಿ ಪೋಖ್ರೆಲ್ ಹೇಳಿದರು.
ಭಾನುವಾರ ಬೆಳಗ್ಗೆ ಪತನಗೊಂಡ ಪ್ರಯಾಣಿಕ ವಿಮಾನದ ಅವಶೇಷಗಳನ್ನು ವಾಯುವ್ಯ ನೇಪಾಳದ ಮುಸ್ತಾಂಗ್ ಜಿಲ್ಲೆಯ ಸನೋಸ್ವೇರ್, ಥಾಸಾಂಗ್ -2ರಲ್ಲಿ ಪತ್ತೆ ಹಚ್ಚಲಾಗಿದೆ. ವಿಮಾನವು ರಾಡಾರ್ ಸಂಪರ್ಕ ಕಳೆದುಕೊಂಡ ಸುಮಾರು 20 ಗಂಟೆಗಳ ನಂತರ ಪತ್ತೆಯಾಗಿತ್ತು.
ಇದನ್ನೂ ಓದಿ: ನೇಪಾಳ ವಿಮಾನ ಪತನವಾದ ಸ್ಥಳ ಪತ್ತೆ: ಮುಸ್ತಾಂಗ್‌ನಲ್ಲಿ ಸೇನೆಯಿಂದ ಶೋಧ ಕಾರ್ಯ