ETV Bharat / international

ಚೀನಾದಲ್ಲಿ ಪ್ರಬಲ ಭೂಕಂಪ: ನೆಲಕ್ಕುರುಳಿದ ಕಟ್ಟಡಗಳು, ಕನಿಷ್ಠ 118 ಸಾವು, ನೂರಾರು ಮಂದಿಗೆ ಗಾಯ - ಭೂಕಂಪದ ತೀವ್ರತೆ

Earthquake in China: ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 118 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

Midnight earthquake kills 111 in China  earthquake struck  earthquake damaged houses  ಚೀನಾದಲ್ಲಿ ಪ್ರಬಲ ಭೂಕಂಪ  ನೆಲಕ್ಕುರುಳಿದ ಕಟ್ಟಡಗಳು  111 ಜನ ಸಾವು  ನೂರಾರು ಮಂದಿಗೆ ಗಾಯ  ಚೀನಾದಲ್ಲಿ ಪ್ರಬಲ ಭೂಕಂಪ  ಸೋಮವಾರ ರಾತ್ರಿ ಸಂಭವಿಸಿದ ಭೂಕಂಪ  ಚೀನಾದ ಗನ್ಸು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ  ಭೂಕಂಪದ ತೀವ್ರತೆ  ರಿಕ್ಟರ್ ಮಾಪಕ
111 ಜನ ಸಾವು
author img

By PTI

Published : Dec 19, 2023, 7:16 AM IST

Updated : Dec 19, 2023, 11:42 AM IST

ಬೀಜಿಂಗ್ (ಚೀನಾ): ಸೋಮವಾರ ತಡರಾತ್ರಿ ಚೀನಾದ ಗನ್ಸು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.2 ಎಂದು ಅಳೆಯಲಾಗಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ಸೋಮವಾರ ರಾತ್ರಿ 23:59 ಕ್ಕೆ ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದಕ್ಕೂ ಮುನ್ನ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪನದ ಅನುಭವವಾಗಿತ್ತು.

Midnight earthquake kills 111 in China  earthquake struck  earthquake damaged houses  ಚೀನಾದಲ್ಲಿ ಪ್ರಬಲ ಭೂಕಂಪ  ನೆಲಕ್ಕುರುಳಿದ ಕಟ್ಟಡಗಳು  116 ಜನ ಸಾವು  ನೂರಾರು ಮಂದಿಗೆ ಗಾಯ  ಚೀನಾದಲ್ಲಿ ಪ್ರಬಲ ಭೂಕಂಪ  ಸೋಮವಾರ ರಾತ್ರಿ ಸಂಭವಿಸಿದ ಭೂಕಂಪ  ಚೀನಾದ ಗನ್ಸು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ  ಭೂಕಂಪದ ತೀವ್ರತೆ  ರಿಕ್ಟರ್ ಮಾಪಕ
ಚೀನಾದಲ್ಲಿ ಪ್ರಬಲ ಭೂಕಂಪ

ಗನ್ಸು ಪ್ರಾಂತೀಯ ತುರ್ತು ನಿರ್ವಹಣಾ ವಿಭಾಗವು ಭೂಕಂಪದ ತೀವ್ರತೆಯು ತುಂಬಾ ಪ್ರಬಲವಾಗಿದ್ದು, ಹಲವು ಕಟ್ಟಡಗಳು ಕುಸಿದಿವೆ ಎಂದು ಹೇಳಿದೆ. ಚೀನಾದ ಸರ್ಕಾರಿ ಮಾಧ್ಯಮದ ವರದಿಯ ಪ್ರಕಾರ, ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ 6.2 ತೀವ್ರತೆಯಿಂದ ಕೂಡಿದ ಭೂಕಂಪದಲ್ಲಿ ಕನಿಷ್ಠ 118 ಜನರು ಸಾವನ್ನಪ್ಪಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ 105 ಗನ್ಸುದಲ್ಲಿ ವರದಿಯಾಗಿದ್ರೆ, 13 ಸಾವುಗಳು ನೆರೆಯ ಕಿಂಗ್ಹೈ ಪ್ರಾಂತ್ಯದಲ್ಲಿ ದಾಖಲಾಗಿವೆ.

ಮಾಹಿತಿಯ ಪ್ರಕಾರ, ಕೌಂಟಿ, ಡಯೋಜಿ ಮತ್ತು ಕಿಂಗ್ಹೈ ಪ್ರಾಂತ್ಯದಲ್ಲಿ ಭೂಕಂಪದಿಂದಾಗಿ ಗರಿಷ್ಠ ಹಾನಿ ಸಂಭವಿಸಿದೆ. ಇಲ್ಲಿನ ಹಲವು ಕಟ್ಟಡಗಳು ಕುಸಿದು ಬಿದ್ದಿರುವುದರಿಂದ ಜನರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ತಂಡಗಳು ಅವರನ್ನು ರಕ್ಷಿಸುವಲ್ಲಿ ನಿರತವಾಗಿವೆ. ಮೃತರ ಮತ್ತು ಗಾಯಗೊಂಡವರ ಸಂಖ್ಯೆ ಹೆಚ್ಚಾಗಬಹುದಾಗಿದೆ. ಗನ್ಸುವಿನ ಜಿಶಿಶನ್‌ನಲ್ಲಿ ಭೂಕಂಪದ ಹಿನ್ನೆಲೆ 199 ಮಂದಿ ಗಾಯಗೊಂಡಿದ್ದಾರೆ ಮತ್ತು ಸುಮಾರು 6,381 ಮನೆಗಳಿಗೆ ಹಾನಿಯಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪದ ಕೇಂದ್ರಬಿಂದುವು 35.7 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 102.79 ಡಿಗ್ರಿ ಪೂರ್ವ ರೇಖಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ ಎಂದು CENC ಹೇಳಿದೆ. ತುರ್ತು ಸೇವೆ ತಂಡಗಳು ಜನರಿಗೆ ಸಹಾಯ ಮಾಡಲು ಪ್ರಾರಂಭಿಸಿವೆ ಮತ್ತು ಸಂತ್ರಸ್ತರಿಗೆ ನೆರವಾಗಲು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಭೂಕಂಪದಿಂದ ಕೆಲವು ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ದೂರಸಂಪರ್ಕ ಕಡಿತಗೊಂಡಿದೆ. ಆದ್ರೆ ಕೆಲವೊಂದು ನಗರಗಳಲ್ಲಿ ಭೂಕಂಪದಿಂದ ಅಸ್ತವ್ಯಸ್ತಗೊಂಡ ರಸ್ತೆ ಸಂಚಾರ, ವಿದ್ಯುತ್ ಸರಬರಾಜು ಮತ್ತು ಸಂಪರ್ಕಗಳನ್ನು ತುರ್ತು ದುರಸ್ತಿ ನಂತರ ಪುನರಾರಂಭಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಚೀನಾ ಮಾಧ್ಯಮಗಳ ವರದಿಯ ಪ್ರಕಾರ, ಚೀನಾದ ವಿಪತ್ತು ನಿಯಂತ್ರಣ ಮತ್ತು ಪರಿಹಾರಕ್ಕಾಗಿ ರಾಷ್ಟ್ರೀಯ ಆಯೋಗ ಮತ್ತು ತುರ್ತು ನಿರ್ವಹಣಾ ಸಚಿವಾಲಯವು ಪರಿಹಾರ ಪ್ರಕ್ರಿಯೆ ಸಕ್ರಿಯಗೊಳಿಸಿದೆ. ಆದರೆ, ಎತ್ತರದ ಪ್ರದೇಶವಾಗಿರುವುದರಿಂದ ಇಲ್ಲಿ ಚಳಿ ತೀವ್ರವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.

ಪಾಕಿಸ್ತಾನದಲ್ಲೂ ನಡುಗಿದ್ದ ಭೂಮಿ: ಸೋಮವಾರ ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆದರೆ, ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಸೆಂಟರ್ (NSMC) ಪ್ರಕಾರ, ಭೂಕಂಪವು 133 ಕಿ.ಮೀ ಆಳದಲ್ಲಿ ಸಂಭವಿಸಿದೆ ಮತ್ತು ಅದರ ಕೇಂದ್ರಬಿಂದು ಭಾರತದ ಜಮ್ಮು ಮತ್ತು ಕಾಶ್ಮೀರವಾಗಿದೆ. ರಾಜಧಾನಿ ಇಸ್ಲಾಮಾಬಾದ್ ಹಾಗೂ ಇತರ ನಗರಗಳಲ್ಲಿ ಭೂಕಂಪನದ ಅನುಭವವಾಗಿದೆ.

ಓದಿ: ಕೆಂಪು ಸಮುದ್ರದ ಮೇಲೆ ಹೌತಿ ಬಂಡುಕೋರರ ದಾಳಿ: ಮಾರ್ಗ ಬದಲಿಸುತ್ತಿರುವ ಹಡಗುಗಳು

Last Updated : Dec 19, 2023, 11:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.