ಜೀವನದ ಕೊನೆಯಾಸೆಗಳು ಚಿತ್ರ ವಿಚಿತ್ರವಾಗಿರುತ್ತವೆ. ಕತ್ರಿನಾ ಒರ್ಡುನಾ ಪೆರೆಜ್ ಎಂಬ ಮೆಕ್ಸಿಕನ್ ಮಹಿಳೆಯ ಈ ಆಸೆಯನ್ನು ಕೇಳಿದರೆ ಎಲ್ಲರೂ ಒಂದು ಕ್ಷಣ ಶಾಕ್ಗೆ ಒಳಗಾಗಿಸುವುದು ಖಂಡಿತ. ಅದೇನೆಂದರೆ, ತಮ್ಮ ಸಮಾಧಿಯ ಮೇಲೆ "ಪುರುಷ ಶಿಶ್ನ"ದ ಮಾದರಿಯನ್ನು ಅಳವಡಿಸಬೇಕು ಎಂಬುದು ಇವರ ಬಯಕೆಯಾಗಿತ್ತಂತೆ.
ಅಚ್ಚರಿಯಾದರೂ ಇದು ಸತ್ಯ. 2021 ರಲ್ಲಿ ಮೃತಪಟ್ಟ ಕತ್ರಿನಾ ಒರ್ಡುನಾ ಪೆರೇಜ್ ಅವರ ಸಮಾಧಿಯ ಮೇಲೆ ಕುಟುಂಬಸ್ಥರು ಅಜ್ಜಿ ಬಯಸಿದಂತೆ ಶಿಶ್ನದ ಮಾದರಿಯನ್ನು ನಿರ್ಮಿಸಿದ್ದಾರೆ. ಐದೂವರೆ ಅಡಿ ಉದ್ದ ಮತ್ತು 600 ಪೌಂಡ್ ತೂಕದ "ಪುರುಷ ಪ್ರತಿನಿಧಿತ್ವ" ಸಮಾಧಿಯ ಮೇಲಿದೆ. ಇದನ್ನು "ಪ್ರೀತಿ ಮತ್ತು ಜೀವನ ಸಂತೋಷ"ದ ಸಂಕೇತವಾಗಿ ಸ್ಥಾಪಿಸಲಾಗಿದೆ ಎಂದು ಆಕೆಯ ಕುಟುಂಬ ಹೇಳಿದೆ.
ಕತ್ರಿನಾ ಅವರ ಮೊಮ್ಮಗ ಅಲ್ವಾರೊ ಮೋಟಾ ಲಿಮೊನ್ ಹೇಳುವಂತೆ, ತನ್ನ ಅಜ್ಜಿ ಮೆಕ್ಸಿಕನ್ ಕಟ್ಟಳೆಗಳ ವಿರೋಧಿಯಾಗಿದ್ದರು. ಅವುಗಳನ್ನು ಮೀರಿ ಜೀವಿಸುವ ಇಚ್ಚಾಶಕ್ತಿ ಹೊಂದಿದ್ದರು. ಏಕೆಂದರೆ ಇಲ್ಲಿ ಮಹಿಳೆಯರ ಮೇಲೆ ಸಾಮಾಜಿಕ ಕಟ್ಟಳೆಗಳು ಹೇರಳವಾಗಿವೆ. ಇವು ಆಕೆಯನ್ನು ಉಸಿರು ಗಟ್ಟಿಸಿತ್ತು. ಆದರೆ, ತುಂಬಾ ಮುಂದುವರಿದ ಚಿಂತನೆ ಹೊಂದಿದ್ದ ಅಜ್ಜಿ, ಈ ಸಾಮಾಜಿಕ ನಿರ್ಬಂಧಗಳನ್ನು ಆಕ್ಷೇಪಿಸುತ್ತಿದ್ದರು.
2021ರ ಜನವರಿ 20 ರಂದು ಕತ್ರಿನಾ ಪೆರೆಜ್ ನಿಧನರಾದರು. ಆಗ ಅವರಿಗೆ 99 ವರ್ಷ ವಯಸ್ಸಾಗಿತ್ತು. ಪೆರೆಜ್ ಪುರುಷ ಶಿಶ್ನದೆಡೆಗೆ ಹೆಚ್ಚಿನ ಆಕರ್ಷಣೆ ಹೊಂದಿದ್ದಳು. ಇದರಿಂದಾಗಿ ತನ್ನ ಮರಣದ ನಂತರ ಸಮಾಧಿಯ ಮೇಲೆ ಶಿಶ್ನವನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು. ಅದರಂತೆ ಅವರ ಬಯಕೆಯನ್ನು ಪೂರೈಸಲಾಗಿದೆ ಎಂದು ತಿಳಿಸಿದರು.
ಶಿಶ್ನ ಮಾದರಿ ನಿರ್ಮಿಸಬೇಕು ಎಂದು ಇಂಜಿನಿಯರ್ ಬಳಿ ಹೇಳಿದಾಗ ಅವರು ಮೊದಲು ತಮಾಷೆ ಮತ್ತು ಆಶ್ಚರ್ಯದಿಂದ ನೋಡಿದ್ದರು. ಬಳಿಕ 12 ಜನರ ತಂಡ ಅಜ್ಜಿಯ ಆಸೆಯಂತೆಯೇ ಅದನ್ನು ನಿರ್ಮಿಸಿದೆ. ಇದಕ್ಕೆ ಸಂಪ್ರದಾಯವಾದಿಗಳ ವಿರೋಧವಿದ್ದರೂ ಕುಟುಂಬಸ್ಥರು ಮಾತ್ರ ಅಜ್ಜಿಯ ಕೊನೆಯಾಸೆಯನ್ನು ನೆರವೇರಿಸಿದ್ದಾರೆ.
ಓದಿ: ಚಂದ್ರನ ಕುಳಿಗಳಲ್ಲಿ ಇದೆ ಮಾನವ ವಾಸ ಯೋಗ್ಯ ಪರಿಸರ: ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆ