ETV Bharat / international

'ಎಂಬಾಪೆ' ಫ್ರಾನ್ಸ್‌ಗಿಂತ ಭಾರತದಲ್ಲಿ ಹೆಚ್ಚು ಜನಪ್ರಿಯರು: ಫುಟ್ಬಾಲ್ ಸ್ಟಾರ್ ಗುಣಗಾನ ಮಾಡಿದ ಪ್ರಧಾನಿ ಮೋದಿ

PM Modi in France: ಪ್ಯಾರಿಸ್​ನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಭಾಗವಹಿಸಿದ್ದ ಮೋದಿ ಕಾರ್ಯಕ್ರಮದಲ್ಲಿ ಫ್ರೆಂಚ್ ಫುಟ್ಬಾಲ್ ಸ್ಟಾರ್ ಕೈಲಿಯನ್ ಎಂಬಾಪೆ ಅವರ ಗುಣಗಾನ ಮಾಡಿದರು.

PM Modi, Mbappe
ಪ್ರಧಾನಿ ಮೋದಿ, ಕೈಲಿಯನ್ ಎಂಬಪ್ಪೆ
author img

By

Published : Jul 14, 2023, 5:58 PM IST

ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್​ನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಾಪೆ ಅವರ ಗುಣಗಾನ ಮಾಡಿದರು. ಗುರುವಾರ ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು "ಫ್ರೆಂಚ್ ಫುಟ್‌ಬಾಲ್ ಆಟಗಾರ ಕೈಲಿಯನ್ ಎಂಬಾಪೆ ಭಾರತದಲ್ಲಿನ ಯುವಕರಲ್ಲಿ ಸೂಪರ್‌ಹಿಟ್ ಆಗಿದ್ದಾರೆ. ಬಹುಶಃ ಫ್ರಾನ್ಸ್‌ಗಿಂತ ಭಾರತದಲ್ಲಿ ಹೆಚ್ಚಿನ ಜನರಿಗೆ ಎಂಬಾಪೆ ಪರಿಚಿತರಾಗಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದರು.

  • #WATCH | French football player Kylian Mbappe is superhit among the youth in India. Mbappe is probably known to more people in India than in France, said PM Modi, in Paris pic.twitter.com/fydn9tQ86V

    — ANI (@ANI) July 13, 2023 " class="align-text-top noRightClick twitterSection" data=" ">

ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಫುಟ್ಬಾಲ್ ಸ್ಟಾರ್: ಪ್ರಸ್ತುತ ಫುಟ್ಬಾಲ್ ಜಗತ್ತಿನಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಷಿಯನೋ ರೊನಲ್ಡೋ ಬಳಿಕ ಕೇಳಿ ಬರುವ ಪ್ರಮುಖ ಹೆಸರು ಕೈಲಿಯನ್ ಎಂಬಾಪೆ. ಹೀಗಾಗಿ ಈ ಫ್ರೆಂಚ್ ಸ್ಟಾರ್​ಗೆ ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳಿದ್ದಾರೆ. ಎಂಬಾಪೆ ಭಾರತದಲ್ಲೂ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಈ ಬಾರಿ ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ನಲ್ಲಿ ಫ್ರಾನ್ಸ್ ತಂಡವನ್ನು ಫೈನಲ್​ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಫೈನಲ್ ಪಂದ್ಯದಲ್ಲಿ ದಾಖಲೆಯ ಹ್ಯಾಟ್ರಿಕ್ ಗೋಲು ಬಾರಿಸಿದ್ದರು.

ಅಲ್ಲದೇ ಇದರ ಹಿಂದಿನ ಆವೃತ್ತಿ ಅಂದರೆ 2022ರಲ್ಲಿ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್​ನಲ್ಲಿ ಫ್ರಾನ್ಸ್ ಚಾಂಪಿಯನ್ ಆಗುವಲ್ಲಿ ಎಂಬಾಪೆ ಪಾತ್ರ ಹಿರಿದಾಗಿತ್ತು. ಜತೆಗೆ ಕತಾರ್ ವಿಶ್ವಕಪ್​ನಲ್ಲಿ ಆಡಿದ 7 ಪಂದ್ಯಗಳಲ್ಲಿ 8 ಗೋಲು ಸಿಡಿಸಿದ್ದ ಎಂಬಾಪೆ ಗೋಲ್ಡನ್ ಬೂಟ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಫ್ರೆಂಚ್ ಲೀಗ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಾಬಲ್ಯ ಹೆಚ್ಚುತ್ತಿದೆ. ವಿಶ್ವಕಪ್ 2022ರ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಅವರ ವಿಶ್ವಕಪ್ ಹ್ಯಾಟ್ರಿಕ್ ಪ್ರಪಂಚದಾದ್ಯಂತ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.

ಫ್ರಾನ್ಸ್​ ಪ್ರವಾಸದಲ್ಲಿ ಪಿಎಂ ಮೋದಿ: ಇದಕ್ಕೂ ಮುನ್ನ ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ಪ್ಯಾರಿಸ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ವಿಧ್ಯುಕ್ತ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಲ್ಲಿ ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ ಸ್ವಾಗತಿಸಿದರು. "ಪ್ಯಾರಿಸ್​ಗೆ ನರೇಂದ್ರ ಮೋದಿ ಅವರಿಗೆ ಸ್ವಾಗತ. ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳ ಸಂಭ್ರಮಾಚರಣೆಯಲ್ಲಿ, ಪರಿಸರ ಪರಿವರ್ತನೆ, ಶಿಕ್ಷಣ ಮತ್ತು ಸಂಸ್ಕೃತಿಗಾಗಿ ಫ್ರಾನ್ಸ್ ಮತ್ತು ಭಾರತ ನಡುವಿನ ಸಹಕಾರವನ್ನು ಗಾಢವಾಗಿಸೋಣ" ಎಂದು ಫ್ರೆಂಚ್ ಪ್ರಧಾನಿ ಎಲಿಜಬೆತ್ ಬೋರ್ನ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್​ ರಾಜಧಾನಿ ಪ್ಯಾರಿಸ್‌ನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಬಳಿಕ ಮೋದಿ ಅವರು ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರೊಂದಿಗೆ ಸೆನೆಟ್ ಕಟ್ಟಡದಲ್ಲಿ ಸಭೆ ನಡೆಸಿದರು. ಇಂದು ಪ್ರಧಾನ ಮಂತ್ರಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್​ ಅವರೊಂದಿಗೆ ಗೌರವ ಅತಿಥಿಯಾಗಿ ಪ್ಯಾರಿಸ್‌ನಲ್ಲಿ ನಡೆದ ಫ್ರೆಂಚ್ ರಾಷ್ಟ್ರೀಯ ದಿನಾಚರಣೆ(ಬಾಸ್ಟಿಲ್ ಡೇ ಪರೇಡ್‌)ಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಫ್ಲೈಪಾಸ್ಟ್ ಅನ್ನು ಪ್ರದರ್ಶಿಸುವ ಮೂಲಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ: Bastille Day Parade: ಪ್ರಧಾನಿ ಮೋದಿ ಭಾಗಿ.. ಫ್ರೆಂಚ್ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಗಮನ ಸೆಳೆದ ಫ್ಲೈಪಾಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.