ETV Bharat / international

ಮೇ 9ರ ಗಲಭೆ: ಇಮ್ರಾನ್​ ಖಾನ್​ಗೆ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ಸಾಧ್ಯತೆ - ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್

ಮೇ 9 ರಂದು ಪಾಕಿಸ್ತಾನದ ವಿವಿಧ ನಗರಗಳ ಹಿಂಸಾಚಾರದ ಘಟನೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

Imran Khan's trial likely in military court

author img

By

Published : Jun 4, 2023, 2:06 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ವಿವಿಧ ನಗರಗಳಲ್ಲಿನ ಸರ್ಕಾರಿ ಮತ್ತು ಮಿಲಿಟರಿ ಕಟ್ಟಡಗಳ ಮೇಲೆ ಮೇ 9 ರಂದು ನಡೆದ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಇಮ್ರಾನ್​ರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವ ಬಗ್ಗೆ ಆಂತರಿಕ ಸಚಿವ ರಾಣಾ ಸನಾವುಲ್ಲಾ ಈ ಹಿಂದೆಯೇ ಸುಳಿವು ನೀಡಿದ್ದರು ಎಂಬುದು ಗಮನಾರ್ಹ.

ಮುಂದಿನ ದಿನಗಳಲ್ಲಿ ಇಮ್ರಾನ್ ಖಾನ್ ಮೇ 9ರ ಹಿಂಸಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಪುರಾವೆಗಳು ಕಂಡು ಬಂದರೆ ಮಾಜಿ ಪ್ರಧಾನಿಯನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಆದರೆ ಅಂದಿನ ಘಟನೆಯಲ್ಲಿ ಅವರು ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಾಕ್ ರಕ್ಷಣಾ ಸಚಿವರು ಮಾಧ್ಯಮಗಳಿಗೆ ತಿಳಿಸಿದರು.

ಖಾನ್ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಂಡಿತವಾಗಿಯೂ ಮಾಡಬಹುದು. ಮಿಲಿಟರಿ ಕಟ್ಟಡಗಳ ಮೇಲೆ ದಾಳಿ ಮಾಡಲು ಅವರು ಯೋಜನೆ ರೂಪಿಸಿದ್ದಾರೆ ಮತ್ತು ಅದನ್ನು ಕಾರ್ಯಗತಗೊಳಿಸಿದ್ದಾರೆ. ನನ್ನ ತಿಳುವಳಿಕೆಯ ಪ್ರಕಾರ ಇದು ಸಂಪೂರ್ಣವಾಗಿ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಪ್ರಕರಣವಾಗಿದೆ ಎಂದರು. ಮೇ 9ರ ಗಲಭೆಗೆ ಖಾನ್ ವೈಯಕ್ತಿಕವಾಗಿ ಸಂಚು ರೂಪಿಸಿದ್ದಾರೆ ಎಂದು ಸಚಿವರು ಆರೋಪಿಸಿದರು.

ಖಾನ್ ಅವರು ಜೈಲಿನಲ್ಲಿದ್ದಾಗ ತಮ್ಮ ಪಕ್ಷದ ನಾಯಕರೊಂದಿಗೆ ಹೇಗೆ ಸಂವಹನ ನಡೆಸಲು ಸಾಧ್ಯವಾಯಿತು ಎಂದು ಕೇಳಿದಾಗ, ಈ ಎಲ್ಲ ಯೋಜನೆಯನ್ನು ಅವರು ಜೈಲಿಗೆ ಹೋಗುವ ಮೊದಲೇ ನಿರ್ಧರಿಸಲಾಗಿತ್ತು. ಅವರನ್ನು ಬಂಧಿಸಿದಾಗ ಯಾರು ಯಾವಾಗ ಎಲ್ಲಿ ಏನು ಮಾಡುತ್ತಾರೆ ಎಂಬುದನ್ನು ಮೊದಲೇ ನಿರ್ಧರಿಸಲಾಗಿತ್ತು ಎಂದು ಸಚಿವರು ಆರೋಪಿಸಿದರು.

ಸೇನಾ ಕಾಯಿದೆಯಡಿಯಲ್ಲಿ ಇಮ್ರಾನ್ ಅವರನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಈ ಮುನ್ನ ಆಸಿಫ್ ಹೇಳಿದ್ದರು. ಆದರೆ ಅಂಥ ಸಾಧ್ಯತೆಯನ್ನು ಅವರು ತಳ್ಳಿ ಹಾಕಿರಲಿಲ್ಲ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇ 9 ರ ಹಿಂಸಾಚಾರದ ಮಾಸ್ಟರ್ ಮೈಂಡ್ ಆಗಿದ್ದಾರೆ ಮತ್ತು ಆ ದಿನ ಏನೇನು ನಡೆಯಿತು ಎಂಬುದೆಲ್ಲವೂ ಅವರಿಗೆ ತಿಳಿದಿದೆ ಎಂದು ಆರೋಪಿಸಲಾಗಿದೆ.

ಮೇ 9 ರಂದು ಇಸ್ಲಾಮಾಬಾದ್‌ನಲ್ಲಿ ಪ್ಯಾರಾಮಿಲಿಟರಿ ರೇಂಜರ್‌ಗಳು ಖಾನ್ ಅವರನ್ನು ಬಂಧಿಸಿದ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಅವರ ಪಕ್ಷದ ಕಾರ್ಯಕರ್ತರು ಲಾಹೋರ್ ಕಾರ್ಪ್ಸ್ ಕಮಾಂಡರ್ ಹೌಸ್, ಮಿಯಾನ್ವಾಲಿ ವಾಯುನೆಲೆ ಮತ್ತು ಫೈಸಲಾಬಾದ್‌ನ ಐಎಸ್​ಐ ಕಟ್ಟಡ ಸೇರಿದಂತೆ 20 ಕ್ಕೂ ಹೆಚ್ಚು ಮಿಲಿಟರಿ ಕಚೇರಿಗಳು ಮತ್ತು ಸರ್ಕಾರಿ ಕಟ್ಟಡಗಳನ್ನು ಧ್ವಂಸಗೊಳಿಸಿದ್ದರು. ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯ (GHQ) ಮೇಲೂ ಮೊದಲ ಬಾರಿಗೆ ಗುಂಪು ದಾಳಿ ನಡೆದಿತ್ತು. ನಂತರ ಜಾಮೀನಿನ ಮೇಲೆ ಖಾನ್ ಬಿಡುಗಡೆಯಾಗಿದ್ದರು.

ಇದನ್ನೂ ಓದಿ : ಕೈಕೊಟ್ಟ ಆಪ್ತರು: ಏಕಾಂಗಿಯಾದ ಪಾಕ್ ಮಾಜಿ ಪ್ರಧಾನಿ ಇಮ್ರಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.