ವಾಷಿಂಗ್ಟನ್(ಅಮೆರಿಕ): ಪಂಚ ರಾಜ್ಯಗಳ ಪೈಕಿ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರ ಹೊರಬಿದ್ದಿದೆ. ಈ ನಾಲ್ಕು ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ನಲ್ಲಿ ಅಮೆರಿಕದ ಗಾಯಕಿ, ನಟಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
"ಭಾರತದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ದೇಶದ ಹೃದಯ ಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಗೆಲುವು ಸಾಧಿಸಿದೆ. ಇದು ಪ್ರಧಾನಿ ಮೋದಿಯವರ 2024ರ ಭರ್ಜರಿ ಗೆಲುವಿನ ಮುನ್ಸೂಚನೆ. ಮೋದಿ ಭಾರತ ಮೊದಲು ಎನ್ನುವ ನಾಯಕ ಮತ್ತು ಅಮೆರಿಕ-ಭಾರತದ ಸಂಬಂಧಕ್ಕೂ ಅತ್ಯುತ್ತಮ ನಾಯಕ" ಎಂದು ಹೊಗಳಿದ್ದಾರೆ.
-
Today’s election results in #India, the @BJP4India winning the heartland states of Rajasthan, Madhya Pradesh and Chhattisgarh, is a precursor to a strong victory for PM @narendramodi in 2024. He is the #IndiaFirst candidate and the best leader for the U.S.-India relationship.🇺🇸🇮🇳 pic.twitter.com/I5Aj0QJxXv
— Mary Millben (@MaryMillben) December 3, 2023 " class="align-text-top noRightClick twitterSection" data="
">Today’s election results in #India, the @BJP4India winning the heartland states of Rajasthan, Madhya Pradesh and Chhattisgarh, is a precursor to a strong victory for PM @narendramodi in 2024. He is the #IndiaFirst candidate and the best leader for the U.S.-India relationship.🇺🇸🇮🇳 pic.twitter.com/I5Aj0QJxXv
— Mary Millben (@MaryMillben) December 3, 2023Today’s election results in #India, the @BJP4India winning the heartland states of Rajasthan, Madhya Pradesh and Chhattisgarh, is a precursor to a strong victory for PM @narendramodi in 2024. He is the #IndiaFirst candidate and the best leader for the U.S.-India relationship.🇺🇸🇮🇳 pic.twitter.com/I5Aj0QJxXv
— Mary Millben (@MaryMillben) December 3, 2023
ಇದನ್ನೂ ಓದಿ : ಕೆಲಸ ಮಾಡದೆ ಸೋಶಿಯಲ್ ಮೀಡಿಯಾ ಸಮರ ನಿಷ್ಪ್ರಯೋಜಕ ಎಂಬುದನ್ನು ಚುನಾವಣೆ ತೋರಿಸಿದೆ: ಗಂಭೀರ್
ಈ ಹಿಂದೆಯೂ ಕೂಡ ಮೇರಿ ಮಿಲ್ಬೆನ್ ಅವರು ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾಗ ಅದನ್ನು ಖಂಡಿಸಿದ್ದರು. ಇದೇ ವೇಳೆ ಮಹಿಳೆಯರ ಪರವಾದ ಪ್ರಧಾನಿ ಮೋದಿ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು. "ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಅತ್ಯುತ್ತಮ ನಾಯಕ. ಅವರು ಯುಎಸ್ ಜೊತೆಗಿನ ಉತ್ತಮ ಸಂಬಂಧಕ್ಕೂ ನಾಯಕರು. ಮೋದಿ ಮಹಿಳೆಯರ ಪರವಾಗಿದ್ದಾರೆ" ಎಂದಿದ್ದರು.
ಇದನ್ನೂ ಓದಿ: 'ಓಂ ಜೈ ಜಗದೀಶ್ ಹರೇ'.. ಅಮೆರಿಕ ಗಾಯಕಿಯಿಂದ ಭಾರತೀಯರಿಗೆ ದೀಪಾವಳಿ ಶುಭಾಶಯ
ಕಳೆದ ಜೂನ್ ತಿಂಗಳಲ್ಲಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ರೊನಾಲ್ಡ್ ರೀಗನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಫ್ರಿಕನ್-ಅಮೆರಿಕನ್ ಹಾಲಿವುಡ್ ಗಾಯಕಿಯಾಗಿರುವ ಮಿಲ್ಬೆನ್ ಅವರು ಭಾರತ ರಾಷ್ಟ್ರೀಯ ಗೀತೆ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಹಾಡುಗಳನ್ನು ಹಾಡಿ, ನಂತರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಕೂಡಲೇ ಅವರನ್ನು ತಡೆದು, ಹಸ್ತಲಾಘವ ಮಾಡಿದ್ದರು.
ಇದನ್ನೂ ಓದಿ: ಭಾರತದ ರಾಷ್ಟ್ರಗೀತೆ ಹಾಡಿದ ಬಳಿಕ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ - ವಿಡಿಯೋ
ಬಳಿಕ ಮಾತನಾಡಿದ್ದ ಮೇರಿ ಮಿಲ್ಬೆನ್, "ಅಮೆರಿಕನ್ ಮತ್ತು ಭಾರತೀಯ ಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ. ಇದು ಯುಎಸ್-ಭಾರತದ ಸಂಬಂಧದ ನಿಜವಾದ ಸಾರ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ಸನಾತನ ಧರ್ಮ ನಿಂದಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ : ವೆಂಕಟೇಶ್ ಪ್ರಸಾದ್