ETV Bharat / international

ಐದನೇ ಬಾರಿಯೂ ಅವಳಿ ಮಕ್ಕಳ ಜನನ.. 10 ಮಕ್ಕಳನ್ನು ಸಾಕಲಾರೆ ಎಂದು ಮನೆ ಬಿಟ್ಟೋದ ಪತಿ! - 10 ಮಕ್ಕಳನ್ನು ಸಾಕಲಾರೆ ಎಂದು ಮನೆ ತೊರೆದ ಪತಿ

ಐದು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ- 10 ಮಕ್ಕಳನ್ನು ಸಾಕಲು ನನ್ನಿಂದಾಗದು ಎಂದು ಮನೆ ಬಿಟ್ಟೋದ ಪತಿ- ಉಂಗಾಂಡದಲ್ಲೊಂದು ವಿಚಿತ್ರ ಪ್ರಕರಣ

An Ugandan great grandmother who gave birth to 10 children
ಐದನೇ ಬಾರಿಯೂ ಅವಳಿ ಮಕ್ಕಳ ಜನನ
author img

By

Published : Jul 27, 2022, 6:03 PM IST

ಉಗಾಂಡ: ಒಂದು ಮನೆಯಲ್ಲಿ ಮಗು ಜನಿಸಿದ್ರೆ, ಸಾಮಾನ್ಯವಾಗಿ ಎಲ್ಲರಿಗೂ ಸಂತೋಷವಾಗುತ್ತದೆ. ಅದೇ ಅವಳಿ ಮಕ್ಕಳಾದರೆ, ಡಬಲ್ ಖುಷಿಯಾಗುತ್ತದೆ. ಆದರೆ ಇಲ್ಲೋರ್ವ ಮಹಾತಾಯಿ ಐದು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಆ ದಂಪತಿಗೆ ಈಗ ಒಟ್ಟು 10 ಮಕ್ಕಳಿವೆ. ಈ ಎಲ್ಲಾ 10 ಮಕ್ಕಳನ್ನು ಬೆಳೆಸಲು ಆಗುವುದಿಲ್ಲ ಎಂದು ಪತಿಯು ಪತ್ನಿ, ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಉಗಾಂಡದ ನಲೋಂಗೋ ಗ್ಲೋರಿಯಾ ಬಡ ಕುಟುಂಬದ ಮಹಿಳೆ. ಆಕೆ ಉದ್ಯೋಗಕ್ಕಾಗಿ ಕಂಪಾಲಾಗೆ ಬಂದಿದ್ದರು. ಆಗ ಕೆಲವು ವರ್ಷಗಳ ಹಿಂದೆ ಸ್ಸಾಲೊಂಗೊ ಪರಿಚಯವಾಯಿತು. ಬಳಿಕ ಇಬ್ಬರೂ ಮದುವೆಯಾಗಿದ್ದಾರೆ. ಗ್ಲೋರಿಯಾ ಗರ್ಭಿಣಿಯಾಗುತ್ತಾರೆ. ಬಳಿಕ ಅವರು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಹೀಗೆ ಒಂದಲ್ಲ ಎರಡಲ್ಲ ಐದು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಗ್ಲೋರಿಯಾ.

ಸಾಮಾನ್ಯವಾಗಿ, ಐವಿಎಫ್ ಚಿಕಿತ್ಸೆಗೆ ಒಳಗಾಗುವ ಮಹಿಳೆಯರು ಅವಳಿ ಮಕ್ಕಳಿಗೆ ಜನ್ಮ ನೀಡುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಆದರೆ ಗ್ಲೋರಿಯಾ ವಿಷಯದಲ್ಲಿ ಅಂಥದ್ದೇನೂ ಇಲ್ಲ. ಅವರು ಸ್ವಾಭಾವಿಕವಾಗಿ ಐದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಪತಿ ಸ್ಸಲೋಂಗೊ ಇದನ್ನು ಇಷ್ಟಪಡಲಿಲ್ಲ. 9 ಮತ್ತು 10 ನೇ ಮಕ್ಕಳು ಜನಿಸಿದಾಗ, ಆತ ಗ್ಲೋರಿಯಾಗೆ ತವರು ಮನೆಗೆ ಹೋಗುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಫಿಲಿಪ್ಪೀನ್ಸ್‌​ನಲ್ಲಿ ಗಢಗಢ ನಡುಗಿದ ಭೂಮಿ; 7.3 ತೀವ್ರತೆಯ ಭಾರಿ ಭೂಕಂಪ

ಒಂದು ದಿನ ಗ್ಲೋರಿಯಾ ಕೆಲಸದಿಂದ ಹಿಂದಿರುಗಿದಾಗ, ಸ್ಸಲೋಂಗೋ ಎಲ್ಲಿಯೂ ಕಾಣಲಿಲ್ಲ. ಲಗೇಜ್ ತೆಗೆದುಕೊಂಡು ಎಲ್ಲೋ ಹೋಗಿದ್ದು, ತಡವಾಗಿ ತಿಳಿದುಬಂದಿದೆ. ಗಂಡ ಎಲ್ಲಿಗೆ ಹೋಗಿದ್ದಾನೆ ಎಂಬುದು ಆಕೆಗೂ ಗೊತ್ತಿಲ್ಲ. ಅಂದಿನಿಂದ ಇಂದಿನವರೆಗೆ ಒಂದೇ ಒಂದು ಫೋನ್‌ ಕರೆ ಸಹ ಬಂದಿಲ್ಲ. ಇಬ್ಬರು ಹತ್ತು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು, ಇನ್ನುಳಿದ ಮಕ್ಕಳ ಜವಾಬ್ದಾರಿ ಈಗ ಗ್ಲೋರಿಯಾ ಮೇಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.