ETV Bharat / international

ಇಂಗ್ಲೆಂಡ್​​: ಬಕ್ಕಿಂಗ್​​​ಹ್ಯಾಮ್​​ ಅರಮನೆ ಹೊರಗೆ ಅನುಮಾಸ್ಪದ ವ್ಯಕ್ತಿಯ ಬಂಧನ - london news

ಬಕ್ಕಿಂಗ್​ಹ್ಯಾಮ್ ಅರಮನೆಯ ಗೇಟ್​​ನಿಂದ ಅನುಮಾನಸ್ಪದ ವ್ಯಕ್ತಿಯೊಬ್ಬ ಶಾಟ್​​ಗನ್​​ ಕಾಟ್ರೀಡ್ಜ್​​ಗಳನ್ನು ಎಸೆದಿರುವ ಘಟನೆ ನಡೆದಿದೆ.​

man-arrested-outside-buckingham-palace-with-suspected-weapon
ಇಂಗ್ಲೆಂಡ್​​: ಬಕ್ಕಿಂಗ್​​​ಹ್ಯಾಮ್​​ ಅರಮನೆಯ ಹೊರಗೆ ಅನುಮಾಸ್ಪದ ವ್ಯಕ್ತಿಯ ಬಂಧನ
author img

By

Published : May 3, 2023, 5:49 PM IST

ಲಂಡನ್​ (ಇಂಗ್ಲೆಂಡ್​​​​​): ಮಂಗಳವಾರ ತಡರಾತ್ರಿ ಬಕಿಂಗ್​​ಹ್ಯಾಮ್​ ಅರಮನೆಯ ಹೊರಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಆಕ್ರಮಣಕಾರಿ ಶಸ್ತ್ರಾಸ್ತ್ರ ಹೊಂದಿರುವ ಶಂಕೆಯ ಮೇಲೆ ಆತನನ್ನು ಬಂಧಿಸಿ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ನಿಯಂತ್ರಿಕ ಸ್ಫೋಟ ನಡೆಸಲಾಯಿತು ಎಂದು ಲಂಡನ್​​ ಪೊಲೀಸರು ತಿಳಿಸಿದ್ದಾರೆ.

ಲಂಡನ್​ ಮೆಟ್ರೋ ಪೊಲೀಸರ ಪ್ರಕಾರ, ಅನುಮಾಸ್ಪದ ವ್ಯಕ್ತಿಯೊಬ್ಬ ಬಕ್ಕಿಂಗ್​​ಹ್ಯಾಮ್​​ ಅರಮನೆಯ ಗೇಟ್​​​ ಬಳಿ ಒಂದು ಚೀಲದಲ್ಲಿ ಶಾಟ್​​ಗನ್​​ ಕಾಟ್ರಿಡ್ಜ್​​ಗಳನ್ನು ಅರಮನೆಯ ಒಳಗಡೆ ಎಸೆದಿದ್ದಾನೆ ಇದನ್ನು ಗಮನಿಸಿದ ಅಧಿಕಾರಿಗಳು ತಕ್ಷಣವೇ ವ್ಯಕ್ತಿಯನ್ನು ಬಂಧಿಸಿ ಪೊಲೀಸ್​​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಯಾವುದೇ ಅಹಿತರಕರ ಘಟನೆಗಳು ಮತ್ತು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಿಲ್ಲ ಮತ್ತು ಈ ಘಟನೆಗೂ ಭಯೋತ್ಪಾದೆನೆಗೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯ ಅಧೀಕ್ಷಕ ಜೋಸೆಫ್​​ ಮೆಕ್​ಡೊನಾಲ್ಡ್​​​​​ ತಿಳಿಸಿದ್ದಾರೆ.

ಈ ಘಟನೆ ನಡೆದ ಸಮಯದಲ್ಲಿ ಕಿಂಗ್​​ ಚಾರ್ಲ್ಸ್​​​​ III ಮತ್ತು ರಾಣಿ ಕ್ಯಾಮಿಲ್ಲಾ ಬಕ್ಕಿಂಗ್​​​ಹ್ಯಾಮ್​​​ ಅರಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಅರಮನೆಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಂಗಳವಾರ ತಡರಾತ್ರಿ ಅರಮನೆ ಸುತ್ತ ಕಟ್ಟೆಚ್ಚರ ವಹಿಸಲಾಗಿತ್ತು. ಅಧಿಕಾರಿಗಳಿಗು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ತನಿಖೆ ಮುಂದವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಶನಿವಾರದಂದು ವೆಸ್ಟ್​​ಮಿನಿಸ್ಟರ್​​​ ಅಬ್ಬೆ (ಬ್ರಿಟಿಷ್​ ರಾಜರ ಪಟ್ಟಾಭಿಷೇಕ ಸ್ಥಳ)ಯಲ್ಲಿ ನಡೆಯಲಿರುವ ಕಿಂಗ್​ ಚಾರ್ಲ್ಸ್​​​ನ ಪಟ್ಟಾಭಿಕಷೇಕ ಸಮಾರಂಭಕ್ಕೂ ಮುನ್ನ ಈ ಘಟನೆ ನಡೆದಿದ್ದು ಆತಂಕ ಸೃಷ್ಟಿಸಿದೆ. 1953ರಲ್ಲಿ ರಾಣಿ ಎಲೆಜಬೆತ್​​​ II ಪಟ್ಟಾಭಿಷೇಕದ ನಂತರ ಅರಮನೆಯಲ್ಲಿ ಮೊದಲ ಬಾರಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ರಾಜಮನೆತನದವರು, ಗಣ್ಯರು ಮತ್ತು ರಾಷ್ಟ್ರದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಪತ್ರಕರ್ತರ ಮೇಲಿನ ದೌರ್ಜನ್ಯ ನಿಲ್ಲಿಸಿ, ಪ್ರಜಾಪ್ರಭುತ್ವ ಉಳಿಸಿ: ವಿಶ್ವಸಂಸ್ಥೆ ಕರೆ

ಭಾರತಕ್ಕೆ ಕ್ಷಮೆ ಕೇಳಿದ ಉಕ್ರೇನ್​​: ಹಿಂದೂ ದೇವತೆ ಕಾಳಿ ಮಾತೆಯನ್ನು ಅವಮಾನಕರವಾಗಿ ಚಿತ್ರಿಸಿದ ನಂತರ ಉಕ್ರೇನ್​​ನ ರಕ್ಷಣಾ ಇಲಾಖೆಯು ಭಾರತೀಯರ ಕ್ಷಮೆ ಯಾಚಿಸಿದೆ. ಈ ಬಗ್ಗೆ ಉಕ್ರೇನ್​ನ ಉಪ - ವಿದೇಶಾಂಗ ಸಚಿವೆ ಎಮಿನೆ ಝೆಪ್ಪರ್ ಟ್ವೀಟ್ ಮೇ 2ರಂದು​ ಮಾಡಿದ್ದು, ಉಕ್ರೇನ್ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ ಹಾಗೂ ಉಕ್ರೇನ್ - ರಷ್ಯಾ ಯುದ್ಧದ ವಿಚಾರದಲ್ಲಿ ಭಾರತವು ಉಕ್ರೇನ್​​ಗೆ ಬೆಂಬಲ ನೀಡಿದ್ದನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ಉಕ್ರೇನ್ ರಕ್ಷಣಾ ಸಚಿವಾಲಯವು ಹಿಂದೂ ದೇವತೆ ಕಾಳಿ ಮಾತೆಯನ್ನು ಅಪಮಾನಕರ ರೀತಿಯಲ್ಲಿ ಬಿಂಬಿಸಿದ್ದಕ್ಕೆ ನಾವು ವಿಷಾದಿಸುತ್ತೇವೆ. ಉಕ್ರೇನ್ ಮತ್ತು ಅದರ ಜನರು ಅನನ್ಯ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ ಮತ್ತು ಭಾರತ ನೀಡಿರುವ ಬೆಂಬಲವನ್ನು ಪ್ರಶಂಸಿಸುತ್ತಾರೆ. ಚಿತ್ರಣವನ್ನು ಈಗಾಗಲೇ ತೆಗೆದುಹಾಕಲಾಗಿದೆ. ಪರಸ್ಪರ ಗೌರವ ಮತ್ತು ಸ್ನೇಹಗಳನ್ನು ಇನ್ನಷ್ಟು ಹೆಚ್ಚಿಸಲು ಉಕ್ರೇನ್ ಉತ್ಸುಕವಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ: 1087 ಅಭ್ಯರ್ಥಿಗಳು ಕೋಟಿವೀರರು, 14 ಜನರ ಆಸ್ತಿ ಶೂನ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.