ETV Bharat / international

ಮಾಲಿಯಲ್ಲಿ ಸೇನಾ ಕಾರ್ಯಾಚರಣೆ.. 200ಕ್ಕೂ ಉಗ್ರರ ಬೇಟೆ

author img

By

Published : Apr 2, 2022, 12:08 PM IST

ಮಾಲಿ ದೇಶದ ಮಧ್ಯ ಭಾಗದಲ್ಲಿ ಸೇನಾ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 8 ದಿನಗಳಲ್ಲಿ 203 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Malian Army killed over 200 militants in central part of country: Reports
ಮಾಲಿಯಲ್ಲಿ ಸೇನಾ ಕಾರ್ಯಾಚರಣೆ: 200ಕ್ಕೂ ಉಗ್ರರ ಹತ್ಯೆ

ಬಮಾಕೊ(ಮಾಲಿ): ಸುಮಾರು 8 ದಿನಗಳ ಕಾಲ ಮಾಲಿ ದೇಶದ ಮಧ್ಯ ಭಾಗದಲ್ಲಿ ಸೇನಾ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 203 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾರ್ಚ್ 23ರಿಂದ 31ರವರೆಗೆ ಮೋರಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಮಾಲಿಯನ್ ಮಿಲಿಟರಿಯನ್ನು ಉಲ್ಲೇಖಿಸಿ ಏಜೆನ್ಸ್ ಫ್ರಾನ್ಸ್-ಪ್ರೆಸ್ ವರದಿ ಮಾಡಿದೆ.

ಕಾರ್ಯಾಚರಣೆಯಲ್ಲಿ ಮಾಲಿಯನ್ ಪಡೆಗಳು 51 ಉಗ್ರರನ್ನು ಬಂಧಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿದುಬಂದಿದೆ. 2012ರಲ್ಲಿ ಟುವಾರೆಗ್ ಉಗ್ರಗಾಮಿಗಳು ದೇಶದ ಉತ್ತರ ಭಾಗದಲ್ಲಿ ವಿಶಾಲವಾದ ಪ್ರದೇಶಗಳನ್ನು ವಶಪಡಿಸಿಕೊಂಡಾಗ ಮಾಲಿಯಲ್ಲಿ ಪರಿಸ್ಥಿತಿ ಅಸ್ಥಿರವಾಗಿತ್ತು. ಇಸ್ಲಾಮಿಸ್ಟ್‌ಗಳ ಚಟುವಟಿಕೆಗಳು, ಲಿಬಿಯಾದ ಮಾಜಿ ನಾಯಕ ಮುಅಮ್ಮರ್ ಗಡಾಫಿಗೆ ನಿಷ್ಠರಾಗಿರುವ ಶಕ್ತಿಗಳು ಮತ್ತು ಫ್ರೆಂಚ್ ಹಸ್ತಕ್ಷೇಪದ ಕಾರಣದಿಂದ ಸಂಘರ್ಷವು ಹೆಚ್ಚಾಗಿತ್ತು. ಈಗ ಮಾಲಿಯನ್ ಸೇನೆ ಕಾರ್ಯಾಚರಣೆ ನಡೆಸಿದ್ದು, ಉಗ್ರರನ್ನು ಮಟ್ಟ ಹಾಕುವ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ:ಪಾತಾಳಕ್ಕೆ ಕುಸಿದ ಶ್ರೀಲಂಕಾ ಆರ್ಥಿಕತೆ: ತುರ್ತುಪರಿಸ್ಥಿತಿ ಘೋಷಿಸಿದ ಗೊಟಬಯ ರಾಜಪಕ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.