ETV Bharat / international

ಸಂಸತ್ತಿನಲ್ಲಿ ಸಂಪೂರ್ಣ ಬಹುಮತ ಕಳೆದುಕೊಂಡ ಫ್ರಾನ್ಸ್​​ ಅಧ್ಯಕ್ಷ ಮ್ಯಾಕ್ರನ್ - ಬಹುಮತ ಕಳೆದುಕೊಂಡ ಫ್ರಾನ್ಸ್​​ ಅಧ್ಯಕ್ಷ ಇಮ್ಯಾನುವೆಲ್​ ಮ್ಯಾಕ್ರನ್

ರಷ್ಯಾ- ಉಕ್ರೇನ್​ ಯುದ್ಧ ಕೊನೆಗಾಣಿಸಲು ಯತ್ನಿಸುತ್ತಿದ್ದ ಫ್ರಾನ್ಸ್​ ಅಧ್ಯಕ್ಷ ಇಮ್ಯೂನುವೆಲ್​ ಮ್ಯಾಕ್ರನ್​ಗೆ ದೇಶದಲ್ಲೇ ಸೋಲಾಗಿದೆ.

ಸಂಸತ್ತಿನಲ್ಲಿ ಸಂಪೂರ್ಣ ಬಹುಮತ ಕಳೆದುಕೊಂಡ ಫ್ರಾನ್ಸ್​​ ಅಧ್ಯಕ್ಷ ಇಮ್ಯಾನುವೆಲ್​ ಮ್ಯಾಕ್ರನ್

author img

By

Published : Jun 20, 2022, 9:27 PM IST

ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವೆಲ್​ ಮ್ಯಾಕ್ರನ್ ನೇತೃತ್ವದ ಸರ್ಕಾರ​ ಸಂಸತ್​ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಕಳೆದುಕೊಂಡಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರನ್ ನೇತೃತ್ವದ ಎಡಪಂಥದ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗಿ, ಬಹುಮತ ಪಡೆಯಲಾಗದೇ ಸೋಲನುಭವಿಸಿದೆ. ಈ ಮೂಲಕ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಬಯಸಿದ್ದ ಮ್ಯಾಕ್ರನ್​ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

577 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತ ಪಡೆಯಲು 289 ಸ್ಥಾನಗಳು ಬೇಕಿದ್ದವು. ಮ್ಯಾಕ್ರನ್​ ನೇತೃತ್ವದ 'ಟುಗೆದರ್​ ಪಕ್ಷ' 245 ಸ್ಥಾನಗಳನ್ನು ಮಾತ್ರ ಪಡೆದಿದೆ. ಬಹುಮತಕ್ಕಾಗಿ 44 ಸ್ಥಾನಗಳು ಬೇಕಿವೆ. ಹೀಗಾಗಿ ಮ್ಯಾಕ್ರಾನ್​ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿದೆ.

44ರ ಹರೆಯದ ಮ್ಯಾಕ್ರನ್ ನೇತೃತ್ವದ ಟುಗೆದರ್​ ಒಕ್ಕೂಟವು ದೊಡ್ಡ ಪಕ್ಷವಾಗಿ ಹೊರಮಹೊಮ್ಮಿದರೂ ಅಧಿಕಾರ ಪಡೆಯುವಷ್ಟು ಸ್ಥಾನಗಳನ್ನು ಪಡೆದುಕೊಂಡಿಲ್ಲ. ರಷ್ಯಾ- ಉಕ್ರೇನ್​ ಯುದ್ಧ ಕೊನೆಗೊಳಿಸುವಲ್ಲಿ ಮತ್ತು ಯುರೋಪಿಯನ್​ ಯೂನಿಯನ್​ನಲ್ಲಿ ಪ್ರಮುಖ ಪಾತ್ರ ವಹಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಮ್ಯಾಕ್ರನ್​ಗೆ ದೇಶದಲ್ಲೇ ದೊಡ್ಡ ಹಿನ್ನಡೆ ಉಂಟಾಗಿದೆ.

ಈ ಪರಿಸ್ಥಿತಿಯು ನಮ್ಮ ದೇಶಕ್ಕೆ ಅಪಾಯವ ಉಂಟುಮಾಡುತ್ತದೆ. ನಾವು ಎದುರಿಸಬೇಕಾದ ಸವಾಲುಗಳು ಇನ್ನಷ್ಟಿವೆ ಎಂದು ಪ್ರಧಾನಿ ಎಲಿಸಬೆತ್ ಬೋರ್ನ್ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಹುಮತ ಪಡೆಯಲು ನಾವು ನಾಳೆಯಿಂದಲೇ ಕಾರ್ಯ ಶುರುಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ಅಧಿಕಾರವನ್ನು ಮರಳಿ ಪಡೆಯಲು ಮ್ಯಾಕ್ರನ್​ ಬಲಪಂಥೀಯ ಸಾಂಪ್ರದಾಯಿಕ ಪಕ್ಷವಾದ ರಿಪಬ್ಲಿಕನ್ನರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅವಿಶ್ವಾಸ ನಿರ್ಣಯ: ಎಡಪಂಥೀಯ ನ್ಯೂಪ್ಸ್​ ಒಕ್ಕೂಟದಿಂದ ಮ್ಯಾಕ್ರನ್​ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಲಿದೆ ಎಂದು ತಿಳಿದು ಬಂದಿದೆ. ಸಂಸತ್ತಿನಲ್ಲಿ ಅಧಿಕಾರ ಪಡೆಯುವಷ್ಟು ಸ್ಥಾನ ಗೆಲ್ಲದ ಕಾರಣ ಸರ್ಕಾರದ ವಿರುದ್ಧ ಅವಿಶ್ವಾಸಕ್ಕೆ ನ್ಯೂಪ್ಸ್​ ನೇತೃತ್ವದ ಒಕ್ಕೂಟ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಅಧ್ಯಕ್ಷರ ಬದಲು ಸಂಸತ್ತಿ​ನ ಅಧಿಕಾರ ಹೆಚ್ಚಿಸುವ ಹೊಸ ತಿದ್ದುಪಡಿ ಅಂಗೀಕರಿಸಿದ ಶ್ರೀಲಂಕಾ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.