ವಾಷಿಂಗ್ಟನ್: ಭಾರತೀಯ ಸೇನೆಯೊಂದಿಗೆ ತನ್ನ ಸಂಬಂಧವನ್ನು ಅಭಿವೃದ್ಧಿಪಡಿಸಲು ಮತ್ತು ಬೆಳೆಸಲು ಯುನೈಟೆಡ್ ಸ್ಟೇಟ್ಸ್ ಎದುರು ನೋಡುತ್ತಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ (ಪೆಂಟಗಾನ್) ಹೇಳಿದೆ. ಅಮೆರಿಕ ಮತ್ತು ಭಾರತ ಉತ್ತಮ ಪಾಲುದಾರಿಕೆ ಹೊಂದಿವೆ. ಭಾರತೀಯ ಸೇನೆಯೊಂದಿಗೆ ನಮ್ಮ ಸಂಬಂಧವನ್ನು ವೃದ್ಧಿಪಡಿಸಲು ಮತ್ತು ಬೆಳೆಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಪೆಂಟಗಾನ್ ಪ್ರೆಸ್ ಕಾರ್ಯದರ್ಶಿ ಏರ್ ಫೋರ್ಸ್ ಬ್ರಿಗ್ ಜನರಲ್ ಪ್ಯಾಟ್ ರೈಡರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1997ರಲ್ಲಿ, ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ವ್ಯಾಪಾರವು ಬಹುತೇಕ ನಗಣ್ಯವಾಗಿತ್ತು. ಇಂದು ಅದು USD 20 ಶತಕೋಟಿಗಿಂತ ಹೆಚ್ಚಾಗಿದೆ. ಕಳೆದ ತಿಂಗಳು ಪತ್ರಿಕಾಗೋಷ್ಠಿಯಲ್ಲಿ, ರೈಡರ್ ಅವರು ಅಮೆರಿಕದಿಂದ ಭದ್ರತಾ ನೆರವು ಆಯ್ಕೆ ಮಾಡುವ ದೇಶಗಳಿಗೆ "ಭಾರತ ಉತ್ತಮ ಉದಾಹರಣೆ" ಎಂದು ಹೇಳಿದ್ದರು. ರಷ್ಯಾದಿಂದ ದೂರವಿರಲು ಯಾವುದೇ ಪ್ರತಿಕ್ರಿಯೆಗೆ ಅದು ಸಿದ್ಧವಾಗಿದೆ ಎಂದು ಒತ್ತಿ ಹೇಳಿದರು. ಇನ್ನು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಖಂಡಿಸಲು ಅಮೆರಿಕ ಮತದಾನ ನಿರ್ಣಯದಿಂದ ದೂರವಿರಲು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಭಾರತವು ಯುಎಸ್ ಶಾಸಕರಿಂದ ಟೀಕೆಗೆ ಗುರಿಯಾಗಿದೆ.
ಕಳವಳ ವ್ಯಕ್ತಪಡಿಸಿದ್ದ ಯುಎಸ್ ಅಧಿಕಾರಿಗಳು: ರಷ್ಯಾದಿಂದ ಎಸ್ - 400 ಕ್ಷಿಪಣಿಗಳನ್ನು ಭಾರತ ಖರೀದಿಸಿರುವ ಬಗ್ಗೆ ಯುಎಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 2018ರಲ್ಲಿ ಭಾರತವು ತನ್ನ ವಾಯು ರಕ್ಷಣೆಯನ್ನು ಹೆಚ್ಚಿಸಲು S - 400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ರಷ್ಯಾದೊಂದಿಗೆ USD 5 ಶತಕೋಟಿ ಒಪ್ಪಂದಕ್ಕೆ ಸಹಿ ಹಾಕಿತು.
ಮತದಾನದಿಂದ ದೂರ ಉಳಿದ ಭಾರತ: ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ನಿರ್ಣಯದ ಮೇಲೆ ಭಾರತ ಮತದಾನದಿಂದ ದೂರ ಉಳಿದಿದೆ. ಯುಎನ್‌ಜಿಎಯಲ್ಲಿ ಗುರುವಾರ(ಫೆ.23) ನಡೆದ 'ಐತಿಹಾಸಿಕ ಮತದಾನ'ದಲ್ಲಿ, ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ಬಹುತೇಕ ದೇಶಗಳು ಖಂಡಿಸಿದವು.
ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ಮನವಿಯೊಂದಿಗೆ ತಕ್ಷಣ ಕೀವ್ನಿಂದ ಸೇನೆ ಹಿಂತೆಗೆದುಕೊಳ್ಳುವಂತೆ ಸಭೆಯಲ್ಲಿ ರಷ್ಯಾವನ್ನು ಒತ್ತಾಯಿಸಿತು. ಅಸೆಂಬ್ಲಿಯಲ್ಲಿ 193 - ಸದಸ್ಯ ರಾಷ್ಟ್ರಗಳಲ್ಲಿ ನಿರ್ಣಯದ ಪರವಾಗಿ 141 ರಾಷ್ಟ್ರಗಳು ಮತ ಚಲಾಯಿಸಿದವು. ಚೀನಾ ಮತ್ತು ಭಾರತ ಸೇರಿದಂತೆ 32 ದೇಶಗಳು ಮತದಾನಕ್ಕೆ ಗೈರು ಹಾಜರಾಗಿದ್ದವು. ಮತ್ತು ಏಳು ರಾಷ್ಟ್ರಗಳು ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು.
ವಿಶ್ವಸಂಸ್ಥೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ರಷ್ಯಾ - ಉಕ್ರೇನ್ ಯುದ್ಧದಲ್ಲಿ ಭಾರತದ ನಿರ್ಣಯವನ್ನು ಪುನರುಚ್ಚರಿಸಿದರು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಕಾರ್ಯ ಸಾಧ್ಯವಾದ ಮಾರ್ಗವಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ, ತಕ್ಷಣ ರಷ್ಯಾ ಸೇನೆ ವಾಪಸ್ ಪಡೆಯುವಂತೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ