ETV Bharat / international

'ಥ್ಯಾಂಕ್ಯೂ ಮೈ ಡಾರ್ಲಿಂಗ್​​ ಮಮಾ'.. ಅಗಲಿದ ತಾಯಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಸಿದ ಕಿಂಗ್​ ಚಾರ್ಲ್ಸ್​​ - ಕಿಂಗ್​ ಚಾರ್ಲ್ಸ್ ಅಗಲಿದ ತಾಯಿಯ ಗುಣಗಾನ

ರಾಣಿ ಎಲಿಜಬೆತ್ II ನಿಧನದಿಂದಾಗಿ ಬ್ರಿಟನ್ ದೇಶ ಶೋಕ ಸಾಗರದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ಐತಿಹಾಸಿಕ ಭಾಷಣ ಮಾಡಿರುವ ಕಿಂಗ್​ ಚಾರ್ಲ್ಸ್ ಅಗಲಿದ ತಾಯಿಯ ಗುಣಗಾನ ಮಾಡಿದ್ದಾರೆ.

King Charles III
King Charles III
author img

By

Published : Sep 10, 2022, 8:56 AM IST

ಲಂಡನ್​​: ಬ್ರಿಟಿಷ್​ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದ 2ನೇ ಎಲಿಜಬೆತ್(96)​​​ ತೀವ್ರ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಹಿರಿಯ ಮಗ ಚಾರ್ಲ್ಸ್​​​ ತಕ್ಷಣದಿಂದಲೇ ಜಾರಿಗೆ ಬರುವಂತೆ ಲಂಡನ್​ ರಾಜನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಅಗಲಿದ ತಾಯಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಕೆ ಮಾಡಿದ್ದು, ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಎಲಿಜಬೆತ್​ ರಾಣಿ ನಿಧನದ ಬೆನ್ನಲ್ಲೇ ಕಿಂಗ್​ ಚಾರ್ಲ್ಸ್​​​ ಅವರ ರೆಕಾರ್ಡ್ ಮಾಡಿರುವ ಭಾಷಣ ನಿನ್ನೆ ಪ್ರಸಾರಗೊಂಡಿದ್ದು, ಶೋಕಸಾಗರದಿಂದ ಕೂಡಿರುವ ಇಂಗ್ಲೆಂಡ್ ಜನತೆಯನ್ನುದ್ದೇಶಿಸಿ ರಾಜ ಚಾರ್ಲ್ಸ್​​​ III ಮಾತನಾಡಿದ್ದಾರೆ. 'ಥ್ಯಾಂಕ್ಯೂ ಮೈ ಡಾರ್ಲಿಂಗ್​ ಮಮಾ( Thank You" to my darling mama). ನಿಮ್ಮ ಜೀವನದ ಉದ್ದಕ್ಕೂ ನನಗೆ ಸ್ಫೂರ್ತಿಯಾಗಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿಯ ವಾತ್ಸಲ್ಯ, ಮಾರ್ಗದರ್ಶನಕ್ಕೆ ಧನ್ಯವಾದ. ನಿಮ್ಮ ಜೀವಮಾನವಿಡಿ ಜನರ, ದೇಶದ ಸೇವೆ ಮಾಡಿದ್ದು, ನಾನು ನಿಮ್ಮ ರೀತಿಯಲ್ಲೇ ಜನರ ಸೇವೆ ಮಾಡುವೆ' ಎಂದಿದ್ದಾರೆ.

Queen Elizabeth
ರಾಣಿ ಎಲಿಜಬೆತ್​ ನಿಧನ

"ನನ್ನ ಪ್ರೀತಿಯ ತಾಯಿ, ಅಗಲಿರುವ ತಂದೆಯನ್ನ ಸೇರಲು ಕೊನೆಯ ಪ್ರಯಾಣ ಆರಂಭಿಸಿದಾಗ ನಾ ಹೇಳ ಬಯಸುವುದು ಇಷ್ಟೇ. ನಮ್ಮ ಕುಟುಂಬ ಹಾಗೂ ರಾಷ್ಟ್ರಕ್ಕಾಗಿ ನೀವು ಸಲ್ಲಿಸಿದ ಸೇವೆ ಹಾಗೂ ಪ್ರೀತಿಗೆ ಧನ್ಯವಾದಗಳು. ಇಷ್ಟು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

Queen Elizabeth
70 ವರ್ಷಕ್ಕೂ ಅಧಿಕ ಕಾಲ ರಾಣಿಯಾಗಿದ್ದ ಎಲಿಜಬೆತ್​​

ನಿಮ್ಮನ್ನು ಕಳೆದುಕೊಂಡು ತುಂಬಾ ಆಳವಾದ ದುಃಖದಲ್ಲಿ ಮಾತನಾಡುತ್ತಿದ್ದೇನೆ. ನೀವು ನನ್ನ ಕುಟುಂಬಕ್ಕೆ ಸ್ಫೂರ್ತಿ ಹಾಗೂ ಉತ್ತಮ ಉದಾಹರಣೆಯಾಗಿದ್ದೀರಿ. ಅದಕ್ಕೆ ನಾವು ಋಣಿ. ನಿಮ್ಮ ಉತ್ತಮವಾದ ಜೀವನ ಶೈಲಿ ಎಲ್ಲರಿಗೂ ಮಾದರಿ. ನಿಮ್ಮ ರೀತಿ ನಾನು ದೇಶ ಸೇವೆ ಮಾಡುವೆ ಎಂದು ತಮ್ಮ ಐತಿಹಾಸಿಕ ಭಾಷಣದಲ್ಲಿ ತಿಳಿಸಿದರು.

ಇದನ್ನೂ ಓದಿ: ಬ್ರಿಟನ್​ ರಾಣಿ ಅಸ್ತಂಗತ.. 73 ವರ್ಷದ ಚಾರ್ಲ್ಸ್​​​​ ಆಗಲಿದ್ದಾರೆ ಬ್ರಿಟನ್​​​​ನ ಹೊಸ ರಾಜ.. ವಿಶ್ವಾದ್ಯಂತ ಸಂತಾಪ

ರಾಣಿಯಾಗಿ 70 ವರ್ಷಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುವ ಎಲಿಜಬೆತ್​, ಅನೇಕ ದೇಶಗಳು, ಕಾಮನ್​​ವೆಲ್ತ್ ರಾಷ್ಟ್ರ ಹಾಗೂ ಪ್ರಪಂಚದಾದ್ಯಂತ ಮಹತ್ವದ ಕೆಲಸ ಮಾಡಿದ್ದಾರೆ. ಹೀಗಾಗಿ, ನಿಮ್ಮ ಅಭಿಮಾನಿಗಳು ಈ ದುಃಖದಲ್ಲಿ ಭಾಗಿಯಾಗಿದ್ದಾರೆ. ಇದೀಗ ನಾನು ಸಹ ಈ ರಾಷ್ಟ್ರಗಳ ಸೇವೆ ಸಲ್ಲಿಸುವುದಾಗಿ ತಿಳಿಸಿದರು.

1947ರಲ್ಲಿ ತಮ್ಮ 21ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡದ್ದ ಎಲಿಜಬೆತ್ ಮಹತ್ವದ ಘೋಷಣೆ ಮಾಡಿದ್ದರು. ತಮ್ಮ ಜೀವನದ ಉದ್ದಕ್ಕೂ ಜನರ ಸೇವೆ ಮಾಡುವುದಾಗಿ ತಿಳಿಸಿದ್ದರು. ಅದಿನಿಂದಲೂ ತಮ್ಮ ವಾಗ್ದಾನಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ಸದಸ್ಯನನ್ನು ಕುಟುಂಬದ ಸದಸ್ಯನಂತೆ ನೋಡಿಕೊಂಡಿದ್ದೀರಿ. ಇದಕ್ಕೆ ಇಡೀ ಲಂಡನ್​ ರಾಷ್ಟ್ರ ಸಾಕ್ಷಿಯಾಗಿದೆ ಎಂದರು.

ರಾಜನಾಗಿ ನನ್ನ ತಾಯಿಯ ಮೌಲ್ಯ ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡುತ್ತೇನೆ. ನಿಷ್ಠೆ, ಗೌರವ ಮತ್ತು ಪ್ರೀತಿಯಿಂದ ಜನರ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ. ಸಾಂವಿಧಾನಿಕ ತತ್ವ ಎತ್ತಿ ಹಿಡಿಯಲು ದೇವರು ನನಗೆ ಶಕ್ತಿ ನೀಡಲಿ ಎಂದರು. ಇಂಗ್ಲೆಂಡ್ ಸರ್ಕಾರ ಮಹಾರಾಣಿಯ ನಿಧನಕ್ಕೆ 10 ದಿನಗಳ ಅಧಿಕೃತ ಶೋಕಾಚರಣೆ ಮಾಡಲಿದ್ದು, ಈ ಸಮಯದಲ್ಲಿ ಅತ್ಯಗತ್ಯ ಸರ್ಕಾರಿ ಕಾರ್ಯಕ್ರಮಗಳು ಮಾತ್ರ ನಡೆಯಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.