ETV Bharat / international

ಕೇರಳ ಪ್ರಗತಿಪರ ವಿಚಾರಗಳ ದಾರಿದೀಪ.. ಕೋಮು ಸೌಹಾರ್ದತೆ ಮತ್ತು ಶಾಂತಿಯುತ ಸಹಬಾಳ್ವೆ ಅಭಿವೃದ್ಧಿಗೆ ಪೂರಕ : ಕೇರಳ ಸಿಎಂ ಪಿಣರಾಯಿ ವಿಜಯನ್​ - ಕೋಮು ಸೌಹಾರ್ದತೆ ಮತ್ತು ಶಾಂತಿಯುತ ಸಹಬಾಳ್ವೆ

ಕೇರಳವು ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದಿದೆ ಎಂದು ಸಿಎಂ ಪಿಣರಾಯಿ ವಿಜಯನ್​ ಹೇಳಿದರು.

ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
author img

By

Published : Jun 12, 2023, 12:44 PM IST

ನ್ಯೂಯಾರ್ಕ್​ (ಅಮೆರಿಕ): ಕಳೆದ ಆರು ವರ್ಷಗಳಲ್ಲಿ ಕೇರಳ ಎಲ್ಲ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿದ್ದು, ಪ್ರಗತಿಪರ ಆಲೋಚನೆಗಳ ದಾರಿದೀಪವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ನಿನ್ನೆ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದ ಪ್ರಾದೇಶಿಕ ವಲಸಿಗರ ಸಮ್ಮೇಳನ ಸಭೆಯಲ್ಲಿ, ಕೇರಳದ ಪ್ರಗತಿಪರ ಮೌಲ್ಯಗಳು, ಸಾಮಾಜಿಕ ಏಕತೆ ಮತ್ತು ಸಮಾನ ಬೆಳವಣಿಗೆ, ಸಾರ್ವಜನಿಕ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆಗಳು, ಆರೋಗ್ಯ ವ್ಯವಸ್ಥೆ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧಿಸಿದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಸಿಎಂ ಮಾತನಾಡಿದರು.

ಕೇರಳ ಸಮಗ್ರ ಅಭಿವೃದ್ಧಿಯ ಮಾದರಿಯಾಗಿ ಮತ್ತು ಜನಕೇಂದ್ರಿತ ಪ್ರಗತಿಯ ಉದಾಹರಣೆಯಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಆಹಾರ ಭದ್ರತಾ ಸೂಚ್ಯಂಕದಲ್ಲಿ ಕೇರಳವು ಮೊದಲ ಸ್ಥಾನವನ್ನು ತಲುಪಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಕೇರಳ. ಎನ್‌ಐಟಿಐ ಆಯೋಗ ಸೇರಿದಂತೆ ಹಲವು ಏಜೆನ್ಸಿಗಳು ದೇಶದ ಅತ್ಯುತ್ತಮ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಕೇರಳಕ್ಕೆ ಸೇರಿವೆ ಎಂದು ವಿವರಿಸಿದರು.

ಬಳಿಕ ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಿ, ಕೇರಳ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನೂ ಹೊಂದಿದೆ. ಕಳೆದ ಹಲವು ವರ್ಷಗಳಿಂದ ಕೇರಳದಲ್ಲಿ ಒಂದೇ ಒಂದು ಕೋಮುಗಲಭೆ ನಡೆದಿಲ್ಲ. ಎಲ್ಲಾ ಸಮಯದಲ್ಲೂ ಕೋಮು ಸೌಹಾರ್ದತೆ ಮತ್ತು ಶಾಂತಿಯುತ ಸಹಬಾಳ್ವೆಯೇ ಕೇರಳದ ಬೆಳವಣಿಗೆಗೆ ಕಾರಣವಾಗಿದೆ. ಇನ್ನು ಅಮೆರಿಕದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ಮಲಯಾಳಿಗಳು 'ಮುಂಬರುವ ದಿನಗಳಲ್ಲಿ ನಮ್ಮ ದೇಶವನ್ನು ಇನ್ನಷ್ಟು ಸಮೃದ್ಧವಾಗಿಸಲು ತಮ್ಮೊಂದಿಗೆ ಸಹಕರಿಸುವುದನ್ನು ಮುಂದುವರಿಸಿ' ಎಂದು ಇದೇ ವೇಳೆ ವಿಜಯನ್​ ಮನವಿ ಮಾಡಿದರು.

ಈ ಆಡಳಿತ ಬಗ್ಗೆ ಮಾತನಾಡಿ, ಮೇ ತಿಂಗಳಲ್ಲಿ ಕೇರಳ ಭಾರತದ ಮೊದಲ ಸಂಪೂರ್ಣ ಇ-ಆಡಳಿತ ರಾಜ್ಯವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೇರಳ ಮಾದರಿಯ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು. ಇ-ಆಡಳಿತದ ಮೂಲಕ ಪಾರದರ್ಶಕತೆ ಮತ್ತು ದಕ್ಷತೆಯನ್ನು ಸಾಧಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ವಿವಿಧ ಸಾರ್ವಜನಿಕ ಸೇವೆಗಳಿಗೆ ತಡೆರಹಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಹೇಳಿದರು.

ವಲಸಿಗರಿಗಾಗಿ ಹಲವು ಯೋಜನೆ ಜಾರಿ: ಮುಂದುವರೆದು ಮಾತನಾಡಿದ ಅವರು, ರಾಜ್ಯ ಸರ್ಕಾರವು ವಲಸಿಗರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಲಸಿಗರಿಗಾಗಿ ಪ್ರಮುಖ ಪುನರ್ವಸತಿ ಯೋಜನೆಯಾ ಮೂಲಕ 6,600 ಕ್ಕೂ ಹೆಚ್ಚು ಉದ್ಯಮಗಳನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಅಸ್ತಿತ್ವದಲ್ಲಿರುವ ಪುನರ್ವಸತಿ ಯೋಜನೆಗಳ ಜೊತೆಗೆ, ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡ ವಲಸಿಗರಿಗೆ 'ಪ್ರವಾಸಿ ಭದ್ರತಾ' ಎಂಬ ಪುನರ್ವಸತಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರ ಭಾಗವಾಗಿ ಕುಟುಂಬಶ್ರೀ ಮತ್ತು ಬ್ಯಾಂಕ್‌ಗಳ ಮೂಲಕ ಸಬ್ಸಿಡಿ ಸಾಲ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದಕ್ಕೂ ಮುನ್ನಾ ದಿನ ಸಿಎಂ ಪಿಣರಾಯಿ ವಿಜಯನ್​ ಅಮೆರಿಕ ಮೂಲದ ಮುಂಚೂಣಿಯಲ್ಲಿರುವ ಔಷಧ ತಯಾರಿಕಾ ಕಂಪನಿ ಫೈಜರ್ ಮುಖ್ಯಸ್ಥರನ್ನು ಭೇಟಿ ಮಾಡಿ ಸಭೆ ನಡೆಸಿದ್ದರು.

ಇದನ್ನೂ ಓದಿ: ದೆಹಲಿ ಆರ್ಡಿನೆನ್ಸ್ ಬಿಲ್ | 'ದೆಹಲಿ ವಿರುದ್ಧದ ಸುಗ್ರೀವಾಜ್ಞೆ ಕೇವಲ ಆರಂಭ'; ಇತರ ರಾಜ್ಯಗಳ ಮೇಲೂ ಕೇಂದ್ರ ದಾಳಿ ನಡೆಸಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.