ನೈರೋಬಿ(ಕೀನ್ಯಾ): ಕೀನ್ಯಾ ತನ್ನ ಮೊದಲ ಆಪರೇಷನಲ್ ಯು ಅರ್ಥ್ ಉಪಗ್ರಹ ಉಡಾವಣೆಗೆ ಸಿದ್ಧವಾಗಿದೆ. ಟೈಫಾ-1 ಹೆಸರಿನ ಸ್ಯಾಟಲೈಟ್ ಅನ್ನು ಮುಂದಿನ ಸೋಮವಾರ ಉಡಾವಣೆ ಮಾಡಲಾಗುವುದು ಎಂದು ಆ ದೇಶದ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೀನ್ಯಾ ಬಾಹ್ಯಾಕಾಶ ಸಂಸ್ಥೆ (ಕೆಎಸ್‌ಎ) ಏಪ್ರಿಲ್ 11 ರಂದು ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಿಂದ ಈ ಉಪಗ್ರಹ ಉಡಾವಣೆಯಾಗಲಿದೆ.
ಕೃಷಿ ಮತ್ತು ಆಹಾರ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೆರವಾಗುವಂತೆ ಭೂ ವೀಕ್ಷಣಾ ಉಪಗ್ರಹ ಮಾಹಿತಿಯನ್ನು ಒದಗಿಸಲು ಈ ಮಿಷನ್ ವಿನ್ಯಾಸಗೊಳಿಸಲಾಗಿದೆ ಎಂದು ಕೀನ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಹೊಸ ಉಪಗ್ರಹವು ಕೃಷಿ ಮತ್ತು ಆಹಾರ ಭದ್ರತೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಪರಿಸರದ ಮೇಲ್ವಿಚಾರಣೆ ಬಗ್ಗೆ ಅಧ್ಯಯನ ನಡೆಸಲಿದೆ. ಇದಲ್ಲದೇ, ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಕೀನ್ಯಾದ ತಾಂತ್ರಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು. ಮಿಷನ್‌ನ ಪ್ರಮುಖ ಉದ್ದೇಶವಾಗಿದೆ.
ಉಡಾವಣೆಗ ಕುರಿತು ವಿವರ ನೀಡಿದ ಕೆಎಸ್‌ಎ ಕಾರ್ಯನಿರ್ವಾಹಕ ನಿರ್ದೇಶಕ ಬ್ರಿಗ್ ಹಿಲರಿ ಕಿಪ್ಕೊಸ್ಗೆ, ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೀನ್ಯಾವೂ ಕೂಡ ಸ್ಥಾನ ಪಡೆದುಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಉಪಗ್ರಹ ಅಭಿವೃದ್ಧಿ, ಮಾಹಿತಿ ವಿಶ್ಲೇಷಣೆ ಮತ್ತು ಅಪ್ಲಿಕೇಶನ್‌ಗಳ ಪ್ರಕ್ರಿಯೆ ಮತ್ತು ಅಭಿವೃದ್ಧಿಯ ಬೆಳವಣಿಗೆಗೆ ಗಮನಾರ್ಹವಾಗಿ ಇದು ಕೊಡುಗೆ ನೀಡುತ್ತದೆ ಎಂದು ವರದಿಯಾಗಿದೆ.
ಕೀನ್ಯಾವನ್ನು ಬಾಹ್ಯಾಕಾಶ ವ್ಯವಸ್ಥೆಗಳ ಎಂಜಿನಿಯರಿಂಗ್, ಅದರ ಕಾರ್ಯಾಚರಣೆಗಳು, ಡೇಟಾ ಸಂಸ್ಕರಣೆ ಮತ್ತು ವಿಶ್ಲೇಷಣೆ, ಗ್ರೌಂಡ್ ಸ್ಟೇಷನ್ ಸೇವೆಗಳು ಮತ್ತು ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಸಾಮರ್ಥ್ಯ ವರ್ಧಿಸಲು ಇದು ನೆರವಾಗಲಿದೆ ಎಂದು ಬ್ರಿಗ್ ಹಿಲರಿ ಹೇಳಿದರು.
ಉಡಾಯಿಸಲು ಉದ್ದೇಶಿಸಿರುವ ಉಪಗ್ರಹದ ನಿರ್ಮಾಣ ಮತ್ತು ವಿನ್ಯಾಸವನ್ನು ಕೀನ್ಯಾದ ಎಂಜಿನಿಯರ್‌ಗಳ ತಂಡವೇ ಸಂಪೂರ್ಣವಾಗಿ ರೂಪಿಸಿದೆ. ಅದರ ಭಾಗಗಳ ತಯಾರಿಕೆ ಮತ್ತು ಪರೀಕ್ಷೆಯನ್ನು ಬಲ್ಗೇರಿಯನ್ ಏರೋಸ್ಪೇಸ್ ತಯಾರಕರಾದ ಎಂಡ್ಯೂರೋಸಾಟ್ ಸಹಯೋಗದೊಂದಿಗೆ ಮಾಡಲಾಗಿದೆ. ಸ್ಥಳೀಯವಾಗಿ ಇದನ್ನು ನಿರ್ಮಿಸುವುದು ತುಂಬಾ ದುಬಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉಪಗ್ರಹವನ್ನು 2 ವರ್ಷಗಳಿಂದ ವಿನ್ಯಾಸ ಮಾಡಲಾಗುತ್ತಿದೆ. ಬಹುನಿರೀಕ್ಷಿತ ಈ ಉಪಗ್ರಹವನ್ನು ಸ್ವದೇಶಿ ತಂಡವೇ ನಿರ್ಮಾಣ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬ್ರಿಗ್ ಹಿಲರಿ ಹೇಳಿದರು. ಟೈಫಾ-1 ಉಪಗ್ರಹ ಮಿಷನ್ ಕೀನ್ಯಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಕೀನ್ಯಾದ ಉದಯೋನ್ಮುಖ ಬಾಹ್ಯಾಕಾಶ ಆರ್ಥಿಕತೆಯ ಉಪಗ್ರಹ ಅಭಿವೃದ್ಧಿ, ಡೇಟಾ ವಿಶ್ಲೇಷಣೆ ಮತ್ತು ಸಂಸ್ಕರಣೆ ಮತ್ತು ಅಪ್ಲಿಕೇಶನ್‌ಗಳ ಅಭಿವೃದ್ಧಿಗೆ ಇದು ಗಮನಾರ್ಹ ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ), ಡಿಆರ್ಡಿಒ ಮತ್ತು ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಭಾನುವಾರ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾದ ಸ್ವತಂತ್ರ ಲ್ಯಾಂಡಿಂಗ್ ಮಿಷನ್ (RLV LEX) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
"ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಯು ಬೆಳಗ್ಗೆ 7:10 ಕ್ಕೆ ಟೇಕ್ ಆಫ್ ಆಯಿತು. ಬಳಿಕ, 4.5 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಿತು. ಆರ್‌ಎಲ್‌ವಿಯ ಮಿಷನ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಕಮಾಂಡ್‌ನ ಆಧಾರದ ಮೇಲೆ ಪೂರ್ವನಿರ್ಧರಿತವಾದಂತೆ ಆರ್‌ಎಲ್‌ವಿ 4.6 ಕಿಮೀ ಕಡಿಮೆ ವ್ಯಾಪ್ತಿಯಲ್ಲಿ ಮಧ್ಯ ಗಾಳಿಯನ್ನು ಬಿಡುಗಡೆ ಮಾಡಿದೆ.
ಓದಿ: ಬಾಹ್ಯಾಕಾಶದ ತೂಕರಹಿತ ಸ್ಥಿತಿಯಲ್ಲಿ ಮಾನವ ಜೀವಕೋಶ ಬದಲಾಗುವ ಸಾಧ್ಯತೆ: ಸಂಶೋಧನೆ