ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಈಗ ಸಂಸತ್ತು ಮತ್ತು ಅಲ್ಲಿನ ಸುಪ್ರೀಂಕೋರ್ಟ್ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಪರಮಾಧಿಕಾರಕ್ಕೆ ಕತ್ತರಿ ಹಾಕಲು ಪಾಕಿಸ್ತಾನದ ಸಂಸತ್ತು ಹೊಸ ಮಸೂದೆಗೆ ಅಂಗೀಕಾರ ನೀಡಿದೆ. ಆದರೆ, ಅದಕ್ಕಿನ್ನು ಅಲ್ಲಿನ ಅಧ್ಯಕರು ಸಹಿ ಮಾಡಿಲ್ಲ.
ಈ ನಡುವೆ ಮಸೂದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಅಲ್ಲಿನ ಸುಪ್ರೀಂಕೋರ್ಟ್‌ನ ಎಂಟು ಮಂದಿ ಜಸ್ಟೀಸ್ಗಳ ಪೂರ್ಣ ಪೀಠ ಹೊಸ ಮಸೂದೆ ಜಾರಿಗೆ ತಡೆ ನೀಡಿದೆ. ಅಷ್ಟೇ ಅಲ್ಲ ಈ ಮಸೂದೆ ಕಾನೂನಾಗಿ ಜಾರಿಯಾವುದಕ್ಕೆ ಅಲ್ಲಿನ ಎಂಟು ನ್ಯಾಯಮೂರ್ತಿಗಳ ಪೂರ್ಣಪೀಠ ತಡೆ ನೀಡಿದೆ. ಆದರೆ ಇದನ್ನು ನಿರ್ಲಕ್ಷಿಸಿರುವ ಪಾಕಿಸ್ತಾನದ ಸಂಸತ್ನಲ್ಲಿ ಎರಡನೇ ಬಾರಿಗೆ ಮುಖ್ಯನ್ಯಾಯಮೂರ್ತಿಗಳು ಸೇರಿ ನ್ಯಾಯಮೂರ್ತಿಗಳಿಗೆ ನಿರ್ಬಂಧ ವಿಧಿಸುವ ಮಸೂದೆಗೆ ಎರಡನೇ ಬಾರಿಗೆ ಪಾಕ್ ಸಂಸತ್ತು ಒಪ್ಪಿಗೆ ನೀಡಿದ್ದು, ಸರ್ವಾನುಮತದಿಂದ ಅಂಗೀಕಾರಗೊಂಡಿದೆ.
ಈ ನಡುವೆ ಈ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ನೇತೃತ್ವದ ಎಂಟು ಸದಸ್ಯರ ಪೀಠವು ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಕನಿಷ್ಠ ಮೂರು ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಮಸೂದೆ ಸಂಸತ್ನಲ್ಲಿ ಅಂಗೀಕಾರಗೊಂಡಿದೆ. ಆದರೆ ಅದಕ್ಕಿನ್ನು ರಾಷ್ಟ್ರಪತಿಗಳ ಸಹಿ ಬಿದ್ದಿಲ್ಲ. ಒಂದೊಮ್ಮೆ ಅಧ್ಯಕ್ಷರು ಸಹಿ ಹಾಕದಿದ್ದರೂ 10 ದಿನಗಳ ನಂತರ ಅದು ತನ್ನಿಂದ ತಾನೇ ಅಧ್ಯಕ್ಷರ ಸಹಿ ಇಲ್ಲದೇ ಕಾನೂನಾಗಿ ಜಾರಿಗೆ ಬರಲಿದೆ.
ಈ ಬಗೆಗಿನ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಮೇಲ್ನೋಟಕ್ಕೆ ಪ್ರಸ್ತಾವಿತ ಕಾನೂನು ತನ್ನದೇ ಆದ ನಿಯಮಗಳನ್ನು ರೂಪಿಸಲು ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕಡಿತಗೊಳಿಸಿದೆ ಹಾಗೂ ಈ ಮೊದಲಿನ ನಿಯಮದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ ಈ ಅರ್ಜಿಗಳು ನ್ಯಾಯಾಲಯದ ವಿಚಾರಣೆಗೆ ಅರ್ಹವಾಗಿದೆ ಎಂದು ಪೀಠವು ಗಮನಿಸಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ನ್ಯಾಯಾಲಯದ ಕಾರ್ಯವಿಧಾನದಲ್ಲಿ ಯಾವುದೇ ಹಸ್ತಕ್ಷೇಪವು ಸರಿಯಲ್ಲ. ಅತ್ಯಂತ ತಾತ್ಕಾಲಿಕ ಮೌಲ್ಯಮಾಪನಗಳ ಮೇಲೂ ಸಹ ನಿರ್ಬಂಧ ವಿಧಿಸುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹಾನಿಯುಂಟುಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಒಂದೊಮ್ಮೆ ಅದಕ್ಕೆ ರಾಷ್ಟ್ರಪತಿಗಳು ಸಹಿ ಹಾಕಿದರೆ ಕಾನೂನಾಗುತ್ತದೆ. 10 ದಿನದ ಒಳಗೆ ರಾಷ್ಟ್ರಾಧ್ಯಕ್ಷರು ಸಹಿಹಾಕದಿದ್ದರೂ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ. ಆದರೆ ಸುಪ್ರೀಂಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ. ಮಸೂದೆ ಜಾರಿಗೆ ಬಂದ ನಂತರ ಆ ಕ್ಷಣದಿಂದ ಮತ್ತು ಮುಂದಿನ ಆದೇಶದವರೆಗೆ ಕಾನೂನು ಜಾರಿ ಆಗದಂತೆ ತಡೆ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ. ಜಾರಿಗೆ ಬರುವ ಕಾಯಿದೆಯು ಯಾವುದೇ ಪರಿಣಾಮ ಹೊಂದಿರುವುದಿಲ್ಲ ಅಥವಾ ಯಾವುದೇ ರೀತಿಯಲ್ಲಿ ಕಾರ್ಯನಿರ್ವಹಿಸಬಾರದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿಗಳ ಅಧಿಕಾರ ಮೊಟಕುಗೊಳಿಸುವ ಮಸೂದೆಯ ಸಿಂಧುತ್ಬ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಕೈಗೆತ್ತಿಗೊಂಡಿರುವ ನ್ಯಾಯಾಲಯ, ರಾಜಕೀಯ ಪಕ್ಷಗಳು, ಫೆಡರಲ್ ಸರ್ಕಾರ, ಅಟಾರ್ನಿ ಜನರಲ್, ಪಾಕಿಸ್ತಾನ್ ಬಾರ್ ಕೌನ್ಸಿಲ್ (ಪಿಬಿಸಿ), ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಪ್ರಕರಣದ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲ ಕಲಾಪವನ್ನು ಮೇ 2 ಕ್ಕೆ ಮುಂದೂಡಿದೆ.
ಈ ನಡುವೆ ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಕಿಸ್ತಾನದದ ರಾಜಕೀಯ ಪಕ್ಷಗಳು ಟೀಕಿಸಿವೆ. ರಾಜಕೀಯ ಪ್ರತಿನಿಧಿಗಳು ರೂಪಿಸಿರುವ ಮಸೂದೆ ವಿರುದ್ಧದ ಅರ್ಜಿಗಳ ಬಗ್ಗೆ ಗರಂ ಆಗಿವೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಕೆಲವು ಪಕ್ಷಗಳ ನಾಯಕರು, ಸುಪ್ರೀಂಕೋರ್ಟ್ ಈ ಬಗೆಗಿನ ವಿಚಾರಣೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಪಾಕಿಸ್ತಾನ ಪೀಪಲ್ ಪಾರ್ಟಿ ಮಂಡಿಸಿರುವ ನಿರ್ಣಯದ ಪ್ರಕಾರ, ಸಂವಿಧಾನ ರಚನೆಯು ಸಂಸತ್ತಿನ ಏಕೈಕ ಜವಾಬ್ದಾರಿಯಾಗಿದೆ ಮತ್ತು ಸದನವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು "ಕಾಳಜಿಯಿಂದ" ನೋಡುತ್ತದೆ ಎಂದು ವಾದಿಸಿದೆ.
ಇದನ್ನು ಓದಿ:ಪಾಕಿಸ್ತಾನ ಕೂಡ ಭಾರತದಂತೆ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬಯಸಿತ್ತು: ಇಮ್ರಾನ್ ಖಾನ್