ETV Bharat / international

ಏರ್‌ಫೋರ್ಸ್ ಅಕಾಡೆಮಿ ಪದವಿ ಸಮಾರಂಭದಲ್ಲಿ ಮುಗ್ಗರಿಸಿ ಬಿದ್ದ ಅಮೆರಿಕ ಅಧ್ಯಕ್ಷ ಬೈಡನ್ - ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಏರ್‌ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಸಮಾರಂಭದಲ್ಲಿ ನೆಲಕ್ಕೆ ಮುಗ್ಗರಿಸಿ ಬಿದ್ದರು. ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Biden trips and falls on stage
ಏರ್ ಫೋರ್ಸ್ ಅಕಾಡೆಮಿ ಪದವಿ ಸಮಾರಂಭದಲ್ಲಿ ಮುಗ್ಗರಿಸಿ ಬಿದ್ದ ಅಮೆರಿಕ ಅಧ್ಯಕ್ಷ
author img

By

Published : Jun 2, 2023, 9:34 AM IST

ಕೊಲೊರಾಡೋ (ಯುಎಸ್): ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಯುಎಸ್ ಏರ್‌ಫೋರ್ಸ್ ಅಕಾಡೆಮಿ ಪದವಿ ಸಮಾರಂಭದಲ್ಲಿ ವೇದಿಕೆಯ ಮೇಲೆ ಬಿದ್ದಿದ್ದಾರೆ. ಬೈಡನ್​ ಅವರು ಕೊಲೊರಾಡೋದ ಸ್ಪ್ರಿಂಗ್ಸ್‌ನಲ್ಲಿ ಪದವೀಧರರನ್ನು ವೇದಿಕೆಯ ಮುಂಭಾಗದಲ್ಲಿ ಸ್ವಾಗತಿಸುತ್ತಿದ್ದರು. ಆಗ ಮುಗ್ಗರಿಸಿ ಬಿದ್ದರು. ವಾಯುಪಡೆಯ ಅಧಿಕಾರಿ ಹಾಗೂ ಅವರ ರಹಸ್ಯ ಸೇವಾ ಸಿಬ್ಬಂದಿ ಮೇಲೇಳಲು ಸಹಾಯ ಮಾಡಿದರು.

ವೇದಿಕೆಯಲ್ಲಿ ಅಧಿಕೃತ ನಿಯೋಗದ ಕೆಲವು ಸದಸ್ಯರು ಸೇರಿದಂತೆ ವೀಕ್ಷಕರು ಸೇರಿದ್ದರು. 80 ವರ್ಷದ ಬೈಡನ್​ ದೇಶದ ಅತ್ಯಂತ ಹಿರಿಯ ಅಧ್ಯಕ್ಷರು. ಈ ರೀತಿ ಮುಗ್ಗರಿಸಿ ಬೀಳುತ್ತಿರುವುದು ಇದೇ ಮೊದಲಲ್ಲ. ಈ ಘಟನೆಯ ಬಳಿಕ ಶ್ವೇತಭವನಕ್ಕೆ ಅವರು ತೆರಳಿದ್ದಾರೆ. "ಅಧ್ಯಕ್ಷರು ಚೆನ್ನಾಗಿದ್ದಾರೆ" ಎಂದು ಶ್ವೇತಭವನದ ಸಂವಹನ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್ ಮಾಡಿದ್ದಾರೆ. ವೇದಿಕೆಯ ಮೇಲೆ ಸ್ಪೀಕರ್‌ಗಳು ಬಳಸುವ ಟೆಲಿಪ್ರೊಂಪ್ಟರ್​ ಆಧಾರವಾಗಿ ಮರಳಿನ ಚೀಲವನ್ನು ಇರಿಸಲಾಗಿತ್ತು. ಅದು ತಾಗಿ ಎಡವಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬೈಡನ್​ ಪದವೀಧರರನ್ನು ಶ್ಲಾಘಿಸಿದರು. ಬಳಿಕ ಉಕ್ರೇನ್‌ ರಷ್ಯಾ ಸಂಘರ್ಷದ ಬಗ್ಗೆಯೂ ಅವರು ಮಾತನಾಡಿದ್ದರು. ಅಲ್ಲದೇ ಚೀನಾದೊಂದಿಗಿನ ಸಂಬಂಧವನ್ನು ಉದ್ದೇಶಿಸಿ, ಯುಎಸ್ ಆರೋಹಣ ಶಕ್ತಿಯೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ಅಮೆರಿಕ "ತನ್ನ ಜನರ ಹಿತಾಸಕ್ತಿ ಮತ್ತು ಮೌಲ್ಯಗಳ ಪರವಾಗಿ ನಿಲ್ಲುತ್ತದೆ" ಎಂದು ಹೇಳಿದರು.

ಬೈಡನ್ ಅವರ ವಯಸ್ಸು ಮತ್ತು ಸೇವೆ ಸಲ್ಲಿಸಲು ಅವರ ಫಿಟ್‌ನೆಸ್ ಕುರಿತು ಟೀಕೆಗಳಿಗೆ ಒಳಗಾಗಿದ್ದಾರೆ. 2024 ರ ವೇಳೆಗೆ ಅವರು ಎರಡನೇ ಅವಧಿಗೆ ಪ್ರಚಾರ ಮಾಡುವಾಗ ಅವರ ಈ ತಪ್ಪು ಹೆಜ್ಜೆಗಳು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಆಹಾರವಾಗಿವೆ. 2021ರಲ್ಲಿ ಅವರು ಅಟ್ಲಾಂಟಾಕ್ಕೆ ತೆರಳುವಾಗ ಹೀಗೆ ವಿಮಾನದ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ್ದರು. ಆಗಲೂ ಬೈಡನ್​ ಆರೋಗ್ಯದ ಬಗ್ಗೆ ಚರ್ಚೆ ಶುರುವಾಗಿತ್ತು. ಆದರೆ ಜೋರಾದ ಗಾಳಿಯಿಂದಾಗಿ ಅವರು ಆಯ ತಪ್ಪಿದರು ಎಂದು ಆಗ ವೈಟ್ ಹೌಸ್ ಹೇಳಿತ್ತು. ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿರುವ ತನ್ನ ಮನೆಯ ಬಳಿ ಸೈಕಲ್ ಸವಾರಿ ಮಾಡುತ್ತಿದ್ದ ವೇಳೆ ಬಿದ್ದಿದ್ದರು.

"80 ವರ್ಷ ವಯಸ್ಸಿನಲ್ಲಿಯೂ ಬೈಡನ್​ ಆರೋಗ್ಯವಾಗಿದ್ದಾರೆ. ಅಧ್ಯಕ್ಷೀಯ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಮರ್ಥರಾಗಿದ್ದಾರೆ" ಎಂದು ಬೈಡನ್​ ಅವರ ವೈಯಕ್ತಿಕ ವೈದ್ಯರು ಇತ್ತೀಚೆಗೆ ಹೇಳಿದ್ದರು. ಸಾರ್ವಜನಿಕವಾಗಿ ಎಡವಿ ಬಿದ್ದ ರಾಷ್ಟ್ರೀಯ ನಾಯಕರ ಪೈಕಿ ಬೈಡನ್​ ಮೊದಲಿಗರಲ್ಲ. ಅಧ್ಯಕ್ಷ ಗೆರಾಲ್ಡ್ ಫೋರ್ಡ್ 1975 ರಲ್ಲಿ ಏರ್‌ಫೋರ್ಸ್ ಒನ್‌ನಿಂದ ಹೊರನಡೆಯುತ್ತಿರುವಾಗ ಕೆಳಗೆ ಬಿದ್ದಿದ್ದರು. ಕಾನ್ಸಾಸ್‌ನ ಸೆನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಬಾಬ್ ಡೋಲ್ ಅವರು 1996 ರಲ್ಲಿ ಪ್ರಚಾರ ರ್ಯಾಲಿಯಲ್ಲಿ ವೇದಿಕೆಯಿಂದ ಬಿದ್ದಿದ್ದರು.

2020ರ ವೆಸ್ಟ್ ಪಾಯಿಂಟ್ ಪ್ರಾರಂಭದಲ್ಲಿ ಅಧ್ಯಕ್ಷ ಟ್ರಂಪ್ ಅವರು ರಾಂಪ್‌ನಲ್ಲಿ ನಿಧಾನವಾಗಿ ನಡೆದುಕೊಳ್ಳುವುದು ಅವರ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿತ್ತು. 76 ವರ್ಷದ ಟ್ರಂಪ್ ಅವರು ಅಯೋವಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಬೈಡನ್ ಅವರು ಎಡವಿದ ಬಗ್ಗೆ ಕೇಳಿದ್ದರು. ಬಳಿಕ ಅವರ ತಮ್ಮ ವಿಚಾರವನ್ನು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ಸೈಕಲ್ ಸವಾರಿ ವೇಳೆ ಆಯತಪ್ಪಿ ಬಿದ್ದ ಜೋ ಬೈಡನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.