ETV Bharat / international

ಆಫ್ಘಾನಿಸ್ತಾನದಲ್ಲಿ JeM, LeT ತರಬೇತಿ ಶಿಬಿರ : UN ವರದಿ

1988ರ ನಿರ್ಬಂಧಗಳ ಸಮಿತಿ ಎಂದೂ ಕರೆಯಲ್ಪಡುವ ತಾಲಿಬಾನ್ ನಿರ್ಬಂಧಗಳ ಸಮಿತಿಯ ಅಧ್ಯಕ್ಷರಾಗಿ ಯುಎನ್ ರಾಯಭಾರಿಗೆ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ವರದಿಯನ್ನು ರವಾನಿಸಿದ್ದಾರೆ..

ಅಫ್ಘಾನಿಸ್ತಾನದಲ್ಲಿ JeM, LeT ತರಬೇತಿ ಶಿಬಿರ : UN ವರದಿ

author img

By

Published : May 30, 2022, 5:04 PM IST

ವಿಶ್ವಸಂಸ್ಥೆ : 26/11 ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಏ-ತೈಬಾದಂತಹ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಆಫ್ಘಾನಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ತಮ್ಮ ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿವೆ ಹಾಗೂ ಇವು ನೇರವಾಗಿ ತಾಲಿಬಾನ್ ನಿಯಂತ್ರಣದಲ್ಲಿವೆ ಎಂದು ಯುಎನ್​ ವರದಿ ಮಾಡಿದೆ.

ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ 13ನೇ ವರದಿಯ ಪ್ರಕಾರ ಜೈಶ್-ಏ-ಮೊಹಮ್ಮದ್‌(JeM), ತಾಲಿಬಾನ್‌ಗೆ ಸೈದ್ಧಾಂತಿಕವಾಗಿ ಹತ್ತಿರವಿರುವ ಗುಂಪು ನಂಗರ್‌ಹಾರ್‌ನಲ್ಲಿ ಎಂಟು ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿದೆ, ಅವುಗಳಲ್ಲಿ ಮೂರು ನೇರವಾಗಿ ತಾಲಿಬಾನ್ ಅಡಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಉಲ್ಲೇಖಿಸಲಾಗಿದೆ.

1988ರ ನಿರ್ಬಂಧಗಳ ಸಮಿತಿ ಎಂದು ಕರೆಯಲ್ಪಡುವ ತಾಲಿಬಾನ್ ನಿರ್ಬಂಧಗಳ ಸಮಿತಿಯ ಅಧ್ಯಕ್ಷರಾಗಿ ಯುಎನ್ ರಾಯಭಾರಿಗೆ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ಈ ವರದಿಯನ್ನು ರವಾನಿಸಿದ್ದಾರೆ.

ಕ್ವಾರಿ ರಂಜಾನ್ ನೇಮಕ : ಮಸೂದ್ ಅಜರ್ ನೇತೃತ್ವದ ದೇವಬಂದಿ ಗುಂಪಾದ ಜೈಶ್-ಏ-ಮೊಹಮ್ಮದ್ ಸೈದ್ಧಾಂತಿಕವಾಗಿ ತಾಲಿಬಾನ್‌ಗೆ ಹತ್ತಿರವಾಗಿದೆ ಹಾಗೆ ಆಫ್ಘಾನಿಸ್ತಾನದಲ್ಲಿ ಹೊಸದಾಗಿ ಜೆಎಂ ಮುಖ್ಯಸ್ಥರಾಗಿ ಕ್ವಾರಿ ರಂಜಾನ್ ನೇಮಕಗೊಂಡಿದ್ದಾರೆ. ಲಷ್ಕರ್-ಏ-ತೈಬಾ (ಎಲ್‌ಇಟಿ) ತಾಲಿಬಾನ್ ಕಾರ್ಯಾಚರಣೆಗಳಿಗೆ ಹಣಕಾಸು ಮತ್ತು ತರಬೇತಿ ಪರಿಣತಿಯನ್ನು ಒದಗಿಸಿದೆ ಎಂದು ಹಿಂದಿನ ಮಾನಿಟರಿಂಗ್ ಟೀಮ್​ನ ವರದಿಯನ್ನು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಎಲ್‌ಇಟಿ ಬಳಸಿದ್ದ ತರಬೇತಿ ಶಿಬಿರಕ್ಕೆ ಭೇಟಿ : ಆಫ್ಘಾನಿಸ್ತಾನದೊಳಗೆ ಇದು ಮಾವ್ಲಾವಿ ಯೂಸುಫ್ ಅವರ ನೇತೃತ್ವದಲ್ಲಿದೆ ಎಂದು ತಿಳಿಸಲಾಗಿದೆ. ಹಾಗೆ ಇನ್ನೊಬ್ಬ ಎಲ್ಇಟಿ ನಾಯಕ ಮೌಲಾವಿ ಅಸ್ಸಾದುಲ್ಲಾ ಅವರು ತಾಲಿಬಾನ್ ಉಪ ಆಂತರಿಕ ಸಚಿವ ನೂರ್ ಜಲೀಲ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದೆ.

ಜನವರಿ 2022ರಲ್ಲಿ ತಾಲಿಬಾನ್ ನಿಯೋಗವು ನಂಗರ್‌ಹಾರ್‌ನ ಹಸ್ಕಾ ಮೆನಾ ಜಿಲ್ಲೆಯಲ್ಲಿ ಎಲ್‌ಇಟಿ ಬಳಸಿದ್ದ ತರಬೇತಿ ಶಿಬಿರಕ್ಕೆ ಭೇಟಿ ನೀಡಿತ್ತು. ಇನ್ನು ಕುನಾರ್ ಮತ್ತು ನಂಗರ್‌ಹಾರ್‌ನಲ್ಲಿ ಮೂರು ಶಿಬಿರಗಳನ್ನು ನಿರ್ವಹಿಸುತ್ತಿದೆ. ಹಿಂದಿನ ಎಲ್‌ಇಟಿ ಸದಸ್ಯರು ಅಸ್ಲಾಮ್ ಫಾರೂಕಿ ಮತ್ತು ಎಜಾಜ್ ಅಹ್ಮದ್ ಅಹಂಗರ್ ಜೊತೆ ಐಎಸ್‌ಐಎಲ್-ಕೆ ಸೇರಿದ್ದಾರೆ ಎಂದು ವರದಿಯಲ್ಲಿ ಇದೆ.

ಭದ್ರತಾ ಕಾರ್ಯಾಚರಣೆ ಹೆಚ್ಚಾದ ಹಿನ್ನೆಲೆ ಈ ಪ್ರದೇಶದಲ್ಲಿ ಜೆಎಂ ಮತ್ತು ಎಲ್ಇಟಿ ಇರುವಿಕೆಯ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ. ಇನ್ನು ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆಫ್ಘಾನಿಸ್ತಾನದಲ್ಲಿ ವಿದೇಶಿ ಭಯೋತ್ಪಾದಕ ಹೋರಾಟಗಾರರ ಅತಿದೊಡ್ಡ ಘಟಕವಾಗಿದ್ದು, ಅವರ ಸಂಖ್ಯೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಪಾಕ್​ನಲ್ಲಿ ದಾಳಿ : ಇತರೆ ಗುಪುಗಳ ವಿಷಯಕ್ಕೆ ಬಂದರೆ ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ (ETIM), ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಉಜ್ಬೇಕಿಸ್ತಾನ್, ಜೈಶ್-ಏ-ಮೊಹಮ್ಮದ್, ಜಮಾತ್ ಅನ್ಸರುಲ್ಲಾ ಮತ್ತು ಎಲ್‌ಇಟಿ ಸೇರಿವೆ. ಪ್ರತಿಯೊಂದರಲ್ಲೂ ನೂರಾರು ಸದಸ್ಯರಿದ್ದಾರೆ. ಮುಫ್ತಿ ನೂರ್ ವಾಲಿ ಮೆಹ್ಸೂದ್ ನೇತೃತ್ವದ ಟಿಟಿಪಿಯು ತಾಲಿಬಾನ್ ಸ್ವಾಧೀನದಿಂದ ಆಫ್ಘಾನಿಸ್ತಾನದ ಎಲ್ಲಾ ವಿದೇಶಿ ಉಗ್ರಗಾಮಿ ಗುಂಪುಗಳಿಗೆ ಲಾಭವನ್ನು ನೀಡಿದೆ. ಇದು ಪಾಕಿಸ್ತಾನದಲ್ಲಿ ಹಲವಾರು ದಾಳಿಗಳು ಮತ್ತು ಕಾರ್ಯಾಚರಣೆಗಳನ್ನು ನಡೆಸಿದೆ ಎನ್ನಲಾಗಿದೆ.

ಟಿಟಿಪಿಯು ತನ್ನ ಹೋರಾಟಗಾರರನ್ನು ಆಫ್ಘಾನ್ ತಾಲಿಬಾನ್ ಘಟಕಗಳಲ್ಲಿ ವಿಲೀನಗೊಳಿಸುವ ಬದಲಾಗಿ ಅದ್ವಿತೀಯ ಶಕ್ತಿಯಾಗಿ ಅಸ್ತಿತ್ವದಲ್ಲಿದೆ. ಹೆಚ್ಚಿನ ವಿದೇಶಿ ಭಯೋತ್ಪಾದಕ ಹೋರಾಟಗಾರರ ನಿರೀಕ್ಷೆಯಂತೆ. ಈ ಗುಂಪು ಪೂರ್ವ ಮತ್ತು ಆಗ್ನೇಯ ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ನೆಲೆಗೊಂಡಿರುವ 3,000 ರಿಂದ 4,000 ಶಸ್ತ್ರಸಜ್ಜಿತ ಸದಸ್ಯರನ್ನು ಒಳಗೊಂಡಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಕ್ಕಾನಿ ನೆಟ್‌ವರ್ಕ್‌ : ಆಂತರಿಕ ಸಚಿವಾಲಯ ಮತ್ತು ನಿರಾಶ್ರಿತರ ಮತ್ತು ವಾಪಸಾತಿ ಸಚಿವಾಲಯದ ನಿಯಂತ್ರಣವನ್ನು ಹಕ್ಕಾನಿ ನೆಟ್‌ವರ್ಕ್‌ ನಿರ್ವಹಿಸುತ್ತಿದೆ. ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನದೊಂದಿಗೆ ಮತ್ತಷ್ಟು ಸಂಪರ್ಕವನ್ನು ನೀಡುತ್ತದೆ ಎಂದು ಅದು ಹೇಳಿದೆ. ಟಿಟಿಪಿ ಮತ್ತು ಪಾಕಿಸ್ತಾನದ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಿರಾಜುದ್ದೀನ್ ಹಕ್ಕಾನಿ ಪ್ರಮುಖ ಕೆಲಸ ಮಾಡುತ್ತಿದ್ದಾರೆ.

ಹಕ್ಕಾನಿ ಮಧ್ಯಸ್ಥಿಕೆಗಳು ಸುಸ್ಥಿರ ಕದನ ವಿರಾಮಕ್ಕೆ ಕಾರಣವಾಗಲಿಲ್ಲವಾದರೂ ತಾಲಿಬಾನ್‌ನಲ್ಲಿ ಮಧ್ಯವರ್ತಿಯಾಗಿ ಸಿರಾಜುದ್ದೀನ್‌ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ತಿಳಿಸಿದೆ. ಹಕ್ಕಾನಿ ನೆಟ್‌ವರ್ಕ್ ಅಲ್-ಖೈದಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಈ ಗುಂಪು ಸುರಕ್ಷಿತ ಸ್ಥಳೀಯ ಅನುಕೂಲಕ್ಕಾಗಿ ಮತ್ತು ಅಲ್-ಖೈದಾ ಕೋರ್‌ಗೆ ಬೆಂಬಲ ನೀಡುವ ಸಲುವಾಗಿ ವಿಶ್ವಾಸಾರ್ಹ ಪಾಲುದಾರನಾಗಿ ತನ್ನ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಟಿಕಾಯತ್​ ಮುಖಕ್ಕೆ ಮಸಿ ಬಳಿದ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರೈತ ನಾಯಕರ ಆಗ್ರಹ

ಕಳೆದ ವರ್ಷ ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಹಕ್ಕಾನಿ ನೆಟ್‌ವರ್ಕ್ ಕೆಲವು ಪ್ರಮುಖ ಪೋರ್ಟ್‌ಫೋಲಿಯೋಗಳು ಮತ್ತು ಸಚಿವಾಲಯಗಳ ನಿಯಂತ್ರಣವನ್ನು ಪಡೆಯಲು ತ್ವರಿತವಾಗಿ ತನ್ನ ಕಾರ್ಯಾಚರಣೆ ನಡೆಸಿತ್ತು. ಅದರಂತೆ ಯಶಸ್ವಿಯೂ ಆಗಿದೆ. ಗುರುತಿನ ಚೀಟಿಗಳು, ಪಾಸ್‌ಪೋರ್ಟ್‌ಗಳು ಮತ್ತು ದೇಶವನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ವ್ಯಕ್ತಿಗಳ ಮೇಲ್ವಿಚಾರಣೆಯನ್ನು ಸಚಿವಾಲಯಗಳು ಒಳಗೊಂಡಿರುವುದರಿಂದ ಈ ಪಾತ್ರಗಳಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ.

ಆಫ್ಘಾನಿಸ್ತಾನದಲ್ಲಿ ಭದ್ರತೆ ಜವಾಬ್ದಾರಿ : ಹಕ್ಕಾನಿ ನೆಟ್‌ವರ್ಕ್ ಅತ್ಯುತ್ತಮ ಮಿಲಿಟರಿ ಸುಸಜ್ಜಿತ ಬಣವಾಗಿದೆ ಮತ್ತು ಗಣ್ಯ ಬದ್ರಿ 313 ಬೆಟಾಲಿಯನ್ ಸೇರಿದಂತೆ ಹಲವಾರು ಸಶಸ್ತ್ರ ರಚನೆಗಳನ್ನು ಇದು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಹಕ್ಕಾನಿ ನೆಟ್‌ವರ್ಕ್ ಈಗ ರಾಜಧಾನಿ ಕಾಬೂಲ್‌ನ ಭದ್ರತೆ ಸೇರಿದಂತೆ ಆಫ್ಘಾನಿಸ್ತಾನದ ಭದ್ರತೆಯನ್ನು ಹೆಚ್ಚಾಗಿ ನಿಯಂತ್ರಿಸುತ್ತದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ತಾಲಿಬಾನ್‌ನ ಕೃಪೆ : ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ 11ನೇ ವರದಿಯಲ್ಲಿ ಭದ್ರತಾ ಬೆದರಿಕೆಯನ್ನುಂಟು ಮಾಡುವ ಗುಂಪುಗಳಲ್ಲಿ ಆಫ್ಘಾನ್, ತೆಹ್ರಿಕ್-ಏ-ತಾಲಿಬಾನ್ ಪಾಕಿಸ್ತಾನ್, ಜೈಶ್-ಏ-ಮೊಹಮ್ಮದ್ ಮತ್ತು ಲಷ್ಕರ್-ಏ-ತೈಬಾ ಗುಂಪುಗಳು ಇವೆ ಎಂದು ಉಲ್ಲೇಖ ಮಾಡಿದೆ. ಈ ಗುಂಪುಗಳು ಪೂರ್ವ ಪ್ರಾಂತ್ಯಗಳಾದ ಕುನಾರ್, ನಂಗರ್‌ಹಾರ್ ಮತ್ತು ನುರಿಸ್ತಾನ್‌ಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಲಾಗಿದೆ. ಅಲ್ಲಿ ತಾಲಿಬಾನ್‌ನ ಕೃಪೆಯಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ.

11ನೇ ವರದಿಯಲ್ಲಿ ಉಲ್ಲೇಖಿಸಿದಂತೆ ಆಫ್ಘಾನ್ ಸಂವಾದಕರ ಪ್ರಕಾರ, ಜೈಶ್-ಏ-ಮೊಹಮ್ಮದ್ ಮತ್ತು ಲಷ್ಕರ್-ಏ-ತೈಬಾ ಭಯೋತ್ಪಾದಕ ಹೋರಾಟಗಾರರನ್ನು ಆಫ್ಘಾನಿಸ್ತಾನಕ್ಕೆ ರವಾನಿಸಲು ಅನುಕೂಲ ಮಾಡಿಕೊಟ್ಟಿದೆ. ಸುಧಾರಿತ ಸ್ಫೋಟಕ ಸಾಧನಗಳ ಬಗ್ಗೆ ಅರಿವಿರುವವರು ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರಂತೆ.

ಸರ್ಕಾರಿ ಅಧಿಕಾರಿಗಳು ಮತ್ತು ಇತರರ ವಿರುದ್ಧ ಉದ್ದೇಶಿತ ಹತ್ಯೆಗಳನ್ನು ನಡೆಸಲು ಎರಡೂ ಗುಂಪುಗಳು ಕಾರಣವಾಗಿವೆ ಎನ್ನಲಾಗಿದೆ. ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಏ-ಮೊಹಮ್ಮದ್ ಕ್ರಮವಾಗಿ ಸರಿಸುಮಾರು 800 ಮತ್ತು 200 ಶಸ್ತ್ರಸಜ್ಜಿತ ಸದಸ್ಯರನ್ನು ಹೊಂದಿದ್ದು, ನಂಗರ್‌ಹಾರ್ ಪ್ರಾಂತ್ಯದ ಮೊಹಮಂಡ್ ದಾರಾ, ದುರ್ ಬಾಬಾ ಮತ್ತು ಶೆರ್ಜಾದ್ ಜಿಲ್ಲೆಗಳಲ್ಲಿ ತಾಲಿಬಾನ್ ಪಡೆಗಳೊಂದಿಗೆ ನೆಲೆಗೊಂಡಿವೆ ಎಂದು ವರದಿಯಲ್ಲಿ ತಿಳಿಸಿದೆ.

ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನವು ಲಾಲ್ ಪುರ ಜಿಲ್ಲೆಯಲ್ಲಿ, ಪಾಕಿಸ್ತಾನದ ಮೊಹಮಂದ್​​ ದಾರಾಹ್ ಗಡಿ ಪ್ರದೇಶದ ಸಮೀಪದಲ್ಲಿ ಕಾರ್ಯಪ್ರವೃತ್ತವಾಗಿವೆ. ಕುನಾರ್ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ 220 ಸದಸ್ಯರನ್ನು ಇರಿಸಿದೆ ಹಾಗೆ ಜೈಶ್-ಎ-ಮೊಹಮ್ಮದ್ 30 ಸದಸ್ಯರನ್ನು ಇರಿಸಿದೆ ಎಂದು ಹೇಳಲಾಗಿದೆ. ಇವರೆಲ್ಲಾ ತಾಲಿಬಾನ್ ಪಡೆಗಳಲ್ಲಿ ಚದುರಿಹೋಗಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ರಾಷ್ಟ್ರೀಯ ರೈತ ಮುಖಂಡರ ಮೇಲೆ ಮಸಿ ಬಳಿದ ಪ್ರಕರಣ : ಮೂವರನ್ನು ವಶಕ್ಕೆ ಪಡೆದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.