ETV Bharat / international

ಧೂಮಪಾನಕ್ಕಾಗಿ 14 ವರ್ಷದಲ್ಲಿ 4,512 ಬ್ರೇಕ್‌ ತೆಗೆದುಕೊಂಡ ಅಧಿಕಾರಿಗೆ 8 ಲಕ್ಷ ರೂಪಾಯಿ ದಂಡ - ಈಟಿವಿ ಭಾರತ ಕನ್ನಡ

ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಕೆಲಸದ ಅವಧಿಯಲ್ಲಿ ಧೂಮಪಾನಕ್ಕಾಗಿ ಹೆಚ್ಚು ಸಮಯ ತೆಗೆದುಕೊಂಡು ಭಾರಿ ಪ್ರಮಾಣದ ದಂಡದ ಬರೆ ಹಾಕಿಸಿಕೊಂಡಿದ್ದಾರೆ.

ಧೂಮಪಾನ ಮಾಡಿದ ಅಧಿಕಾರಿಗೆ ದಂಡ
ಧೂಮಪಾನ ಮಾಡಿದ ಅಧಿಕಾರಿಗೆ ದಂಡ
author img

By

Published : Mar 30, 2023, 9:27 AM IST

ಒಸಾಕಾ (ಟೋಕಿಯೋ): ಜಗತ್ತಿನ ಅನೇಕ ದೇಶಗಳು ಸಾರ್ವಜನಿಕ ಮತ್ತು ಜನನಿಬಿಡ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿದ್ದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿವೆ. ಆದಾಗ್ಯೂ, ಕೆಲವರು ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ ದಂಡ ಹಾಕಿಸಿಕೊಳ್ಳುವುದು ನಿಂತಿಲ್ಲ. ಸಾಮಾನ್ಯವಾಗಿ ಹೀಗೆ ನಿಯಮ ಉಲ್ಲಂಘಿಸಿದವರಿಗೆ 100 ರಿಂದ 500 ರೂಪಾಯಿ ಅದಕ್ಕೂ ಮಿಗಿಲಾಗಿ ಅಂದರೆ 1,000 ರೂಪಾಯಿವರೆಗೂ ದಂಡ ವಿಧಿಸುವುದುಂಟು. ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಧೂಮಪಾನ ಮಾಡಿದ್ದು 8.8 ಲಕ್ಷ ರೂಪಾಯಿ ದಂಡ ಕಟ್ಟಬೇಕಿದೆ.

ಇಷ್ಟೊಂದು ಪ್ರಮಾಣದ ದಂಡ ಹಾಕಿಸಿಕೊಂಡವರು ಜಪಾನ್‌ ದೇಶದ ಹಿರಿಯ ಸರ್ಕಾರಿ ಅಧಿಕಾರಿ. ಇವರು ಕಳೆದ 14 ವರ್ಷಗಳಲ್ಲಿ 4,500 ಬಾರಿ ಕರ್ತವ್ಯದ ಸಮಯದಲ್ಲಿ ಧೂಮಪಾನಕ್ಕಾಗಿ ವಿರಾಮ ತೆಗೆದುಕೊಂಡಿದ್ದಾರೆ. ಈ ಪ್ರಕರಣವನ್ನು ಕೊನೆಗೂ ಗಂಭೀರವಾಗಿ ಪರಿಗಣಿಸಿದ ಮೇಲಾಧಿಕಾರಿಗಳು ಇವರ ವಿರುದ್ಧ ಇಲಾಖಾ ತನಿಖೆ ಕೈಗೊಂಡು 14,700 ಸಿಂಗಾಪುರ್ ಡಾಲರ್ (8.8 ಲಕ್ಷ ಭಾರತೀಯ ರೂಪಾಯಿ) ದಂಡ ಹಾಕಿದ್ದಾರೆ.

ಒಸಾಕಾ ನಗರದ ಹಣಕಾಸು ವಿಭಾಗದಲ್ಲಿ ನಿರ್ದೇಶಕ ಮಟ್ಟದ ಅಧಿಕಾರಿ (61 ವಯಸ್ಸು) ಮತ್ತು ಇತರ ಇಬ್ಬರು ಸಹ ಅಧಿಕಾರಿಗಳು ಕಚೇರಿ ಕೆಲಸದ ಸಂದರ್ಭದಲ್ಲಿ ಧೂಮಪಾನ ಮಾಡುತ್ತಿದ್ದರು. ಕಾನೂನು ನಿಯಮಗಳನ್ನು ಮೀರುತ್ತಿದ್ದ ಈ ಮೂವರ ವಿರುದ್ಧ 2022ರಲ್ಲಿ, ಕಚೇರಿಗೆ ಬಂದಂತಹ ಒಂದಿಷ್ಟು ಜನರು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದರ ನಂತರ ಹಿರಿಯ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ, ಮತ್ತೆ ಧೂಮಪಾನ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೂ ತಮ್ಮ ವರ್ತನೆ ಬದಲಿಸಿಕೊಳ್ಳದ ಅಧಿಕಾರಿಗಳು ನಿಯಮ ಮುರಿದು ಧೂಮಪಾನಕ್ಕೆ ವಿರಾಮ ಪಡೆಯುತ್ತಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರಿ ವಿರುದ್ಧ ಮತ್ತೆ ದೂರು ಬಂದಾಗ ಈ ಬಗ್ಗೆ ಮೇಲಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಧೂಮಪಾನ ಮಾಡಿಲ್ಲ ಎಂಬ ಸುಳ್ಳು ಉತ್ತರ ನೀಡಿದ್ದಾರೆ.

ಹೆಚ್ಚಿನ ವಿಚಾರಣೆ ನಡೆಸಿದ ಅಧಿಕಾರಿಗಳು ಕಚೇರಿ ವೇಳೆ ಧೂಮಪಾನಕ್ಕಾಗಿ ಇವರು ತೆಗೆದುಕೊಂಡ ವಿರಾಮದ ಸಂಪೂರ್ಣ ವಿವರ ಕಲೆ ಹಾಕಿದ್ದಾರೆ. ಆಗ ದೊರೆತ ಮಾಹಿತಿ ಆತಂಕ ಹುಟ್ಟಿಸಿತ್ತು. ಏಕೆಂದರೆ ಇವರು ತಮ್ಮ ಕರ್ತವ್ಯದ ವೇಳೆ ಧೂಮಪಾನಕ್ಕಾಗಿ 355 ಗಂಟೆ 19 ನಿಮಿಷ ಸಮಯ ವ್ಯಯಿಸಿದ್ದು ಗೊತ್ತಾಗಿದೆ. ಕಳೆದ 14 ವರ್ಷಗಳಲ್ಲಿ, 4,512 ಬಾರಿ ಧೂಮಪಾನ ವಿರಾಮ ತೆಗೆದುಕೊಂಡಿದ್ದಾರೆ ಎಂಬುದನ್ನು ದೃಢಪಡಿಸಲಾಗಿದೆ. ಪರಿಣಾಮ, ನಿಯಮ ಉಲ್ಲಂಘಿಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡು 1.44 ಮಿಲಿಯನ್ ಯೆನ್ (ಜಪಾನ್​ ಕರೆನ್ಸಿ) ದಂಡ ಜಡಿದು ಮತ್ತು 6 ತಿಂಗಳವರೆಗೆ ಅವರ ಸಂಬಳದಲ್ಲಿ 10% ಕಡಿತಗೊಳಿಸುವಂತೆಯೂ ಸೂಚಿಸಿದ್ದಾರೆ.

ಮತ್ತೊಂದೆಡೆ, 2019 ರಲ್ಲಿ ಒಸಾಕಾದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಪ್ರೌಢಶಾಲೆಯ ಶಿಕ್ಷಕರೊಬ್ಬರು ಕೆಲಸದ ವೇಳೆ 3,400 ಬಾರಿ ಧೂಮಪಾನಕ್ಕಾಗಿ ವಿರಾಮ ತೆಗೆದುಕೊಂಡಿದ್ದರು. ಶಿಕ್ಷಣ ಇಲಾಖೆಯು ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡು 10 ಲಕ್ಷ ಯೆನ್ ದಂಡ ಹಾಕಿತ್ತು. ಹೀಗೆ ದಂಡ ವಿಧಿಸಿದ ನಂತರವೂ ಶಿಕ್ಷಕ ‘ಇದೊಂದು ಕೆಟ್ಟ ಚಟವಾದರೂ ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂದು ಬೋರ್ಡ್​ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು.

ಒಸಾಕಾದಲ್ಲಿ ವಿಶ್ವದ ಅತ್ಯಂತ ಕಠಿಣ ಧೂಮಪಾನ ವಿರೋಧಿ ಕಾನೂನುಗಳಿವೆ. ಹದಿನೈದು ವರ್ಷಗಳ ಹಿಂದೆಯೇ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಇಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಸರ್ಕಾರಿ ನೌಕರರು ತಮ್ಮ ಕೆಲಸದ ಸಮಯದಲ್ಲಿ ಧೂಮಪಾನ ಮಾಡುವುದನ್ನು ನಿಷೇಧಸಲಾಗಿದೆ.

ಇದನ್ನೂ ಓದಿ: ಗೂಗಲ್​ಗೆ 1,337.76 ಕೋಟಿ ರೂ. ದಂಡ.. ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.