ETV Bharat / international

ಕೆನಡಾದಲ್ಲಿ ನಿಜ್ಜರ್ ಹತ್ಯೆ ಪ್ರಕರಣ: ಸಾಕ್ಷ್ಯ ಪ್ರಸ್ತುತಪಡಿಸಿ, ತನಿಖೆಗೆ ನಾವು ಸಿದ್ಧ-ವಿದೇಶಾಂಗ ಸಚಿವ ಜೈಶಂಕರ್ - ನಾವು ತನಿಖೆಗೆ ಸಿದ್ಧರಿದ್ದೇವೆ

ವಿದೇಶಾಂಗ ಸಚಿವ ಎಸ್.ಜೈಶಂಕರ್ ಐದು ದಿನಗಳ ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳ ಬಗ್ಗೆ ವಿವರವಾಗಿ ಮಾತನಾಡಿದರು.

External Affairs Minister S Jaishankar
ಸಾಕ್ಷ್ಯ ಪ್ರಸ್ತುತಪಡಿಸಿ, ನಾವು ತನಿಖೆಗೆ ಸಿದ್ಧರಿದ್ದೇವೆ: ಕೆನಡಾಕ್ಕೆ ನೇರವಾಗಿ ಹೇಳಿದ ವಿದೇಶಾಂಗ ಸಚಿವ
author img

By PTI

Published : Nov 16, 2023, 10:36 AM IST

ಲಂಡನ್: ಭಾರತ-ಕೆನಡಾ ನಡುವಿನ ವಿವಾದದ ಬಗ್ಗೆ ಭಾರತದ ನಿಲುವನ್ನು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದರೆ ಅದಕ್ಕೆ ಕೆನಡಾ ಸರ್ಕಾರ ಸೂಕ್ತ ಪುರಾವೆಗಳನ್ನು ಪ್ರಸ್ತುತಪಡಿಸಬೇಕು ಎಂದು ಎಸ್. ಜೈಶಂಕರ್ ಹೇಳಿದರು. ಪತ್ರಕರ್ತ ಲಿಯೋನೆಲ್ ಬಾರ್ಬರ್ ಅವರೊಂದಿಗಿನ ಸಂವಾದದಲ್ಲಿ ಅವರು ಈ ವಿಷಯವನ್ನು ಒತ್ತಿ ಹೇಳಿದರು.

''ಯಾವುದೇ ಆರೋಪವನ್ನು ಸಮರ್ಥಿಸಿಕೊಳ್ಳಲು ವಿಶ್ವಾಸಾರ್ಹ ಪುರಾವೆಗಳು ಇರಬೇಕು. ಇದು ತುಂಬಾ ಮುಖ್ಯ'' ಎಂದರು. ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಕೈವಾಡದ ಬಗ್ಗೆ ಕೆನಡಾದ ಬಳಿ ಯಾವುದೇ ಪುರಾವೆಗಳಿವೆಯೇ ಎಂದು ಪತ್ರಕರ್ತ ವಿದೇಶಾಂಗ ಸಚಿವರನ್ನು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿ, ''ಯಾವುದೂ ಇಲ್ಲ'' ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.

ಟ್ರುಡೊ ಅವರ ಆರೋಪಗಳ ಬಗ್ಗೆ ಜೈಶಂಕರ್ ಹಲವು ವಿಚಾರಗಳನ್ನು ಬಹಿರಂಗಪಡಿಸಿದರು. ಈ ವಿಷಯವನ್ನು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರೊಂದಿಗೆ ಚರ್ಚಿಸಲಾಗಿದೆ. ''ತಮ್ಮ ಬಳಿ ಇರುವ ಯಾವುದೇ ಪುರಾವೆಗಳನ್ನು ಹಂಚಿಕೊಳ್ಳುವಂತೆ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಇದರ ಜೊತೆಗೆ ಭಾರತ ಖಂಡಿತವಾಗಿಯೂ ತನಿಖೆಗೆ ಸಹಕರಿಸಲು ಬಯಸುತ್ತದೆ'' ಎಂದು ತಿಳಿಸಿದರು.

''ತನಿಖೆಗೆ ಸಾಕ್ಷ್ಯ ಒದಗಿಸುವುದು ಅಗತ್ಯ. ಆದರೆ, ಈವರೆಗೂ ಅವರು ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಇದರಿಂದ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಕೆನಡಾದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಅವರು ನೀಡುವ ಯಾವುದೇ ಸಾಕ್ಷ್ಯಯನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುವುದು'' ಎಂದು ಜೈಶಂಕರ್ ವಿವರಿಸಿದರು.

ಜೈಶಂಕರ್, ಕೆನಡಾದ ರಾಜಕೀಯದಲ್ಲಿ ಖಲಿಸ್ತಾನವನ್ನು ಪ್ರತಿಪಾದಿಸುವ ಹಿಂಸಾತ್ಮಕ ಮತ್ತು ತೀವ್ರ ರಾಜಕೀಯ ದೃಷ್ಟಿಕೋನಗಳ ಸಮಸ್ಯೆಯನ್ನು ಪ್ರಸ್ತಾಪಿಸಿದರು. ''ಕೆನಡಾದ ರಾಜಕೀಯವು ಹಿಂಸಾತ್ಮಕ ಮತ್ತು ಉಗ್ರಗಾಮಿ ರಾಜಕೀಯ ಕಲ್ಪನೆಗಳಿಗೆ ಸ್ಥಾನ ನೀಡಿದೆ ಎಂದು ನಾವು ಭಾವಿಸುತ್ತೇವೆ'' ಎಂದಿರುವ ಅವರು, ''ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ನಿರ್ದಿಷ್ಟ ಜವಾಬ್ದಾರಿಯನ್ನು ಹೊಂದಿರುತ್ತದೆ. ಆ ಸ್ವಾತಂತ್ರ್ಯಗಳ ದುರುಪಯೋಗ ಹಾಗೂ ರಾಜಕೀಯ ಉದ್ದೇಶಗಳಿಗಾಗಿ ಸಹಿಸಿಕೊಳ್ಳುವುದು ತುಂಬಾ ತಪ್ಪಾಗುತ್ತದೆ ಎಂದು ಕೆನಡಾದಲ್ಲಿ ಖಲಿಸ್ತಾನಿ ಪರ ಚಟುವಟಿಕೆಗಳನ್ನು ಉಲ್ಲೇಖಿಸಿ ಜೈಶಂಕರ್ ಹೇಳಿದರು.

ಕೆನಡಾದಲ್ಲಿ ಭಾರತದ ಹೈಕಮಿಷನ್ ಹಾಗೂ ಕಾನ್ಸುಲೇಟ್ ಜನರಲ್ ಮೇಲೆ ಮಾಡಿದ ದಾಳಿಗಳನ್ನು ನೆನಪಿಸಿಕೊಂಡರು. ಭಾರತೀಯ ರಾಜತಾಂತ್ರಿಕರನ್ನು ಸಾರ್ವಜನಿಕವಾಗಿ ಬೆದರಿಸಲಾಯಿತು, ಅಪರಾಧಿಗಳ ವಿರುದ್ಧ ಕೆನಡಾದ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ: ಇಸ್ರೇಲ್ 'ಭಯೋತ್ಪಾದಕ ರಾಷ್ಟ್ರ'ವೆಂದ ಟರ್ಕಿ ಅಧ್ಯಕ್ಷ: ತಿರುಗೇಟು ಕೊಟ್ಟ ಇಸ್ರೇಲ್ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.