ರೋಮ್ (ಇಟಲಿ): ಇಟಲಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಸಂಸದೆಯೊಬ್ಬರು ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದಾರೆ. ಗಿಲ್ಡಾ ಸ್ಪೋರ್ಟಿಯೆಲ್ಲೊ ಅವರು ಸಂಸತ್ತಿನಲ್ಲಿ ಮಗುವಿಗೆ ಎದೆ ಹಾಲುಣಿಸಿದ ಮೊದಲ ರಾಜಕಾರಣಿ ಎಂಬ ಖ್ಯಾತಿ ಗಳಿಸಿದರು. ಸದನ ಸದಸ್ಯರು ಚಪ್ಪಾಳೆ ಮೂಲಕ ಅಭಿನಂದಿಸಿ ಪ್ರೋತ್ಸಾಹಿಸಿದರು.
ಸಂಸತ್ ಅಧಿವೇಶನದಲ್ಲಿ ಮಹಿಳೆಯರಿಗೆ ತಮ್ಮ ಶಿಶುಗಳಿಗೆ ಶುಶ್ರೂಷೆ ಮಾಡಲು ಅವಕಾಶ ಕಲ್ಪಿಸುವ ನಿಯಮಕ್ಕಾಗಿ ಕೆಳ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯೆ ಗಿಲ್ಡಾ ಸ್ಪೋರ್ಟಿಯೆಲ್ಲೊ ನಿರಂತರ ಹೋರಾಟ ಮಾಡಿದ್ದರು. ಈ ಹೋರಾಟದಲ್ಲಿ ಗೆದ್ದು ಯಶಸ್ವಿಯಾದ ಅವರು ಬುಧವಾರ ಸಂಸತ್ತಿನಲ್ಲಿ ಐತಿಹಾಸಿಕ ಕ್ಷಣಕ್ಕೂ ಕಾರಣರಾದರು. ಶಾಸಕಾಂಗ ಮತದಾನದ ಸಂದರ್ಭದಲ್ಲಿ ತಮ್ಮ 2 ತಿಂಗಳ ಮಗು ಫೆಡೆರಿಕೊಗೆ ಸಂಸದೆ ಸ್ತನ್ಯಪಾನ ಮಾಡಿಸಿದರು.
-
Alla Camera la deputata del Movimento 5 Stelle Gilda Sportiello, allatta il figlio di pochi mesi in Aula: è la prima volta che accade. 👏👏👏 pic.twitter.com/zaxviqvrfA
— The Baseball Furies (@DavideR46325615) June 7, 2023 " class="align-text-top noRightClick twitterSection" data="
">Alla Camera la deputata del Movimento 5 Stelle Gilda Sportiello, allatta il figlio di pochi mesi in Aula: è la prima volta che accade. 👏👏👏 pic.twitter.com/zaxviqvrfA
— The Baseball Furies (@DavideR46325615) June 7, 2023Alla Camera la deputata del Movimento 5 Stelle Gilda Sportiello, allatta il figlio di pochi mesi in Aula: è la prima volta che accade. 👏👏👏 pic.twitter.com/zaxviqvrfA
— The Baseball Furies (@DavideR46325615) June 7, 2023
ಗಿಲ್ಡಾ ಸ್ಪೋರ್ಟಿಯೆಲ್ಲೊ ಮತ್ತು ಪತಿ ರಿಕಾರ್ಡೊ ರಿಕಿಯಾರ್ಡಿ ಇಬ್ಬರೂ ಜನಪ್ರಿಯ ಫೈವ್ ಸ್ಟಾರ್ ಮೂವ್‌ಮೆಂಟ್‌ನ ಜನಪ್ರತಿನಿಧಿಗಳು. ತಮ್ಮ 12 ತಿಂಗಳ ವಯಸ್ಸಿನವರೆಗೆ ತಮ್ಮ ಮಕ್ಕಳನ್ನು ಶುಶ್ರೂಷೆ ಮಾಡುವಾಗ ಮಹಿಳೆಯರಿಗೆ ಮತದಾನ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ನಿಯಮಗಳನ್ನು ರೂಪಿಸಬೇಕೆಂದು ಗಿಲ್ಡಾ ಒತ್ತಾಯಿಸಿದ್ದರು. ಈ ಹಿಂದಿನ ಶಾಸನ ಸಭೆಯಲ್ಲಿ ನಿಯಮವನ್ನು ಚೇಂಬರ್‌ನ ನಿಯಮಗಳ ಸಮಿತಿಯಿಂದ ಅಂಗೀಕರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಸ್ತನ್ಯಪಾನ ದುರ್ಬಲಗೊಳಿಸಲು ಹಾಲಿನ ಕಂಪನಿಗಳು ಈ ನೀತಿ ಅನುಸರಿಸುತ್ತಿವೆ - ಲ್ಯಾನ್ಸೆಟ್ ವರದಿ!
ಇಂದಿನಿಂದ ಅತ್ಯುನ್ನತ ಇಟಾಲಿಯನ್ ಸಂಸ್ಥೆಗಳು ತಮ್ಮ ಕೆಲಸದ ಸ್ಥಳದಲ್ಲಿ ತಮ್ಮ ಮಕ್ಕಳ ಶುಶ್ರೂಷೆ ಮಾಡಲು ಮಹಿಳಾ ಕಾರ್ಮಿಕರಿಗೆ ಅವಕಾಶ ನೀಡಬೇಕು. ಯಾವುದೇ ಮಹಿಳೆ, ಯಾವುದೇ ವೃತ್ತಿಯಲ್ಲಿ ಈ ಹಕ್ಕನ್ನು ನಿರಾಕರಿಸಬಾರದು. ಅಲ್ಲದೇ, ಕೆಲಸಕ್ಕೆ ಮರಳುವ ನಿಟ್ಟಿನಲ್ಲಿ ಶುಶ್ರೂಷೆಗೆ ಅಡ್ಡಿಯಾಗುವಂತಹ ಯಾವುದೇ ಒತ್ತಡವನ್ನು ತಾಯಿ ಮೇಲೆ ಹಾಕಬಾರದು ಎಂದು ಗಿಲ್ಡಾ ಸ್ಪೋರ್ಟಿಯೆಲ್ಲೊ ಹೇಳಿದ್ದಾರೆ.
ಗಿಲ್ಡಾ ತಮ್ಮ ಮಗು ಫೆಡೆರಿಕೊಗೆ ಸ್ತನ್ಯಪಾನ ಮಾಡಿಸುವಾಗ ಸದನದ ಹಿಂದಿನ ಸಾಲಿನ ಆಸನದಲ್ಲಿ ಕುಳಿತಿದ್ದರು. ಅಲ್ಲದೇ, ಮಗುವನ್ನು ಎತ್ತಿಕೊಂಡೇ ಮತದಾನವನ್ನೂ ಅವರು ಮಾಡಿದರು. ಇಟಲಿಯ ರೈಲುಗಳು, ವಿಮಾನ ನಿಲ್ದಾಣದ ಕೊಠಡಿಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬಹಿರಂಗವಾಗಿ ತಮ್ಮ ಶಿಶುಗಳಿಗೆ ಹಾಲುಣಿಸುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತದೆ.
ಇದನ್ನೂ ಓದಿ: ಇಂಗ್ಲಿಷ್ ಭಾಷೆಗೆ ಇಟಲಿ ಸರ್ಕಾರದ ಗುದ್ದು; ಸಂವಹನಕ್ಕೆ ಬಳಸಿದರೆ ಭಾರಿ ದಂಡ, ಹೊಸ ಕಾನೂನಿಗೆ ಸಿದ್ಧತೆ