ಡಮಾಸ್ಕಸ್ (ಸಿರಿಯಾ) : ಪಶ್ಚಿಮ ಸಿರಿಯಾದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಇಲ್ಲಿನ ಯುದ್ಧ ಪೀಡಿತ ಕರಾವಳಿ ಪ್ರದೇಶಗಳಲ್ಲಿ ಸ್ಫೋಟಗಳು ಕೇಳಿ ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗಿದೆ.
ಇಸ್ರೇಲ್‌ನ ಸೇನೆಯು ಯಾವುದೇ ವಿವರಗಳನ್ನು ನೀಡದೇ ಟಾರ್ಟಸ್ ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ಇಸ್ರೇಲ್ ನೆರೆಯ ಲೆಬನಾನ್ ಮೂಲಕ ಯುದ್ಧ ವಿಮಾನಗಳಿಂದ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇಸ್ರೇಲಿ ದಾಳಿಯು ಅಬು ಅಫ್ಸಾ ಪ್ರದೇಶದಲ್ಲಿರುವ ಸಿರಿಯನ್ ಸೇನೆಯ ವಾಯು ರಕ್ಷಣಾ ನೆಲೆಯನ್ನು ಗುರಿಯಾಗಿಸಿಕೊಂಡು ಮಾಡಿರುವುದಾಗಿ ಬ್ರಿಟನ್ ಮೂಲದ ಮಾನವ ಹಕ್ಕುಗಳ ಸಿರಿಯನ್ ಅಬ್ಸರ್ವೇಟರಿ ತಿಳಿಸಿದೆ. ಕಳೆದ ವರ್ಷಗಳಲ್ಲಿ ಇಸ್ರೇಲ್ ಸಿರಿಯಾದ ಸರ್ಕಾರಿ ನಿಯಂತ್ರಿತ ಭಾಗಗಳನ್ನು ಗುರಿಯಾಗಿಸಿ ನೂರಾರು ದಾಳಿಗಳನ್ನು ನಡೆಸಿದೆ.
ಇದನ್ನೂ ಓದಿ : ಚರ್ಚ್‌ನಲ್ಲಿ ಬೆಂಕಿ ಅವಘಡ : 41 ಮಂದಿ ಸಜೀವ ದಹನ, ಹಲವರಿಗೆ ಗಾಯ