ಜೆರುಸಲೇಂ: ಹಮಾಸ್, ಐಸಿಸ್ ಮಾದರಿಯಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದೆ. ಮಕ್ಕಳನ್ನೂ ಬಿಡದೇ ಬರ್ಬರವಾಗಿ ಹತ್ಯೆ ಮಾಡುತ್ತಿದೆ. ಮುಂದಿನ ದಿನಗಳು ಶೋಚನೀಯವಾಗಿರಲಿವೆ. ಐಸಿಸ್ನಂತೆಯೇ ಹಮಾಸ್ ಅನ್ನು ದಮನ ಮಾಡಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಜೊತೆಗೆ ಹಮಾಸ್ ನಡೆಸಿದೆ ಎನ್ನಲಾದ ಭಯಾನಕ ಹತ್ಯಾಕಾಂಡದ ಕೆಲ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರ ಇಸ್ರೇಲ್‌ಗೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಜೊತೆಗಿನ ಮಾತುಕತೆಯ ವೇಳೆ ಹಮಾಸ್ ಉಗ್ರರ ರಕ್ಕಸತನದ ಬಗ್ಗೆ ವಿವರಿಸಿದ ನೆತನ್ಯಾಹು, ಹಮಾಸ್ ಉಗ್ರರನ್ನು ಐಸಿಸ್ ರೀತಿಯಲ್ಲಿಯೇ ಹತ್ತಿಕ್ಕಲಾಗುವುದು. ಐಸಿಸ್ ಅನ್ನು ನಡೆಸಿಕೊಂಡ ರೀತಿಯಲ್ಲಿಯೇ ಅದನ್ನು ಸರ್ವನಾಶ ಮಾಡಲಾಗುವುದು ಎಂದು ಗುಡುಗಿದರು.
ಎಕ್ಸ್ನಲ್ಲಿ ಭಯಾನಕ ವಿಡಿಯೋ ಪೋಸ್ಟ್: ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು, ಇಸ್ರೇಲಿಗರನ್ನು ಸುಟ್ಟು ಹಾಕಿದ, ಶಿಶುಗಳ ಹತ್ಯೆಯಂತಹ ರಕ್ತಸಿಕ್ತ, ಭಯಾನಕ ಚಿತ್ರಗಳನ್ನು ಪ್ರಧಾನಿ ನೆತನ್ಯಾಹು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಮಾಸ್ ರಾಕ್ಷಸೀ ಕೃತ್ಯ ನಡೆಸುತ್ತಿದೆ. ಶಿಶುಗಳನ್ನೂ ಸುಟ್ಟು ಹಾಕಿದೆ. ಐಸಿಸ್‌ನಂತೆ ವರ್ತಿಸುತ್ತಿರುವ ಉಗ್ರರನ್ನು ನಾಮಾವಶೇಷ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.
ಆ್ಯಪ್ಗಳನ್ನು ಡಿಲಿಟ್ ಮಾಡಿ: ಇಸ್ರೇಲ್ ಸರ್ಕಾರ ಇಂತಹ ವಿಡಿಯೋಗಳು ನಿಮ್ಮ ಮಕ್ಕಳ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶೀಘ್ರವೇ ಇನ್ಸ್ಟಾಗ್ರಾಮ್, ಟಿಕ್ಟಾಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳ ಆ್ಯಪ್ ಅಳಿಸಿ ಹಾಕಿ ಎಂದು ಕರೆ ನೀಡಿದೆ.
ಇಸ್ರೇಲ್- ಪ್ಯಾಲೆಸ್ಟೀನ್ ಸಂಘರ್ಷ ಮುಂದುವರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭೀಕರ ವಿಡಿಯೋಗಳು ಹರಿದಾಡುತ್ತಿವೆ. ಹೀಗಾಗಿ ಉಗ್ರಗಾಮಿ ಗುಂಪು ಹಮಾಸ್, ಪೋಸ್ಟ್ ಮಾಡುತ್ತಿರುವ ಇಂತಹ ವಿಡಿಯೋಗಳು ಮಕ್ಕಳ ಮೊಬೈಲ್ ಫೋನ್‌ಗಳಿಗೆ ಬರಲಿದೆ. ತಕ್ಷಣವೇ ಎಲ್ಲ ಸಾಮಾಜಿಕ ಜಾಲತಾಣಗಳನ್ನು ಡಿಲಿಟ್ ಮಾಡಿ ಎಂದು ಶಾಲೆಗಳಿಂದ ಪೋಷಕರಿಗೆ ಎಚ್ಚರಿಕೆ ರವಾನಿಸಲಾಗಿದೆ.
-
Visuals from Al-Shati refugee camp in Gaza that was bombarded by Israel on Monday amid the #IsraelPalestineConflict.
— Press Trust of India (@PTI_News) October 12, 2023 " class="align-text-top noRightClick twitterSection" data="
(Source: EFE/PTI)
(Full video available on PTI Videos) pic.twitter.com/mYaW8OylxJ
">Visuals from Al-Shati refugee camp in Gaza that was bombarded by Israel on Monday amid the #IsraelPalestineConflict.
— Press Trust of India (@PTI_News) October 12, 2023
(Source: EFE/PTI)
(Full video available on PTI Videos) pic.twitter.com/mYaW8OylxJVisuals from Al-Shati refugee camp in Gaza that was bombarded by Israel on Monday amid the #IsraelPalestineConflict.
— Press Trust of India (@PTI_News) October 12, 2023
(Source: EFE/PTI)
(Full video available on PTI Videos) pic.twitter.com/mYaW8OylxJ
ಒತ್ತೆಯಾಳುಗಳ ಮೇಲೆ ಕ್ರೂರ ಹಲ್ಲೆ: ಹಮಾಸ್ ಉಗ್ರರು ಕೆಲ ಇಸ್ರೇಲಿಗರನ್ನು ಎಳೆದೊಯ್ದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದು, ಅವರ ಮೇಲೆ ಕ್ರೂರವಾಗಿ ಹಲ್ಲೆ ಮಾಡುತ್ತಿದ್ದು, ಅದರ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದನ್ನು ನೋಡಿದ ಬಳಿಕ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಅರಿತಿರುವ ಯಹೂದಿ ಶಾಲೆಗಳು ತಮ್ಮ ಶಾಲೆಗಳ ಮಕ್ಕಳ ಪೋಷಕರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದೆ.
ನಿಮ್ಮ ಮಕ್ಕಳ ಮೊಬೈಲ್ನಲ್ಲಿರುವ ಟಿಕ್ಟಾಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಎಲ್ಲ ಆ್ಯಪ್ಗಳನ್ನು ಡಿಲಿಟ್ ಮಾಡಿ. ಇಸ್ರೇಲಿ ಒತ್ತೆಯಾಳುಗಳ ವಿಡಿಯೋಗಳು ಹರಿದಾಡುತ್ತಿವೆ. ಇದು ಮಕ್ಕಳ ತಲೆ ಕೆಡಿಸಲಿದೆ ಎಂದು ಅದರಲ್ಲಿ ಎಚ್ಚರ ನೀಡಲಾಗಿದೆ.
ಹಮಾಸ್ ಉಗ್ರರ ಒತ್ತೆಯಾಳಾಗಿರುವ ಇಸ್ರೇಲಿಗರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೇಡಿಕೊಳ್ಳುತ್ತಿರುವ ವಿಡಿಯೋಗಳು ಪೋಸ್ಟ್ ಮಾಡಲಾಗುತ್ತಿದೆ. ಒತ್ತೆಯಾಳುಗಳಲ್ಲಿ ಮಕ್ಕಳನ್ನು ನಿಂದಿಸುವ ಕೆಲವು ವೀಡಿಯೊಗಳು ಈಗಾಗಲೇ ಹರಿದಾಡುತ್ತಿವೆ ಎಂದು ಬಳಕೆದಾರನೊಬ್ಬ ತಿಳಿಸಿದ್ದಾನೆ.
ಅಧ್ಯಕ್ಷರ ಹೇಳಿಕೆ ಹಿಂಪಡೆದ ಅಮೆರಿಕ ಸರ್ಕಾರ: ಹಮಾಸ್ ಉಗ್ರರು ಇಸ್ರೇಲಿ ಮಕ್ಕಳ ಶಿರಚ್ಚೇದ ಮಾಡಿದ ವಿಡಿಯೋಗಳನ್ನು ನಾನು ನೋಡಿದ್ದೇನೆ ಎಂದಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಹೇಳಿಕೆಯನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. ಅಧಿಕಾರಿಗಳು ಮತ್ತು ಅಧ್ಯಕ್ಷರು ಚಿತ್ರ, ವಿಡಿಯೋಗಳನ್ನು ಅಧಿಕೃತವಾಗಿ ನೋಡಿದ್ದಾರೆ ಎಂದು ದೃಢಪಟ್ಟಿಲ್ಲ ಎಂದು ಶ್ವೇತಭವನದ ವಕ್ತಾರರು ಹೇಳಿದ್ದಾರೆ.
ಶ್ವೇತಭವನದಲ್ಲಿ ಯಹೂದಿ ನಾಯಕರೊಂದಿಗಿನ ಸಭೆಯ ಸಮಯದಲ್ಲಿ ಹಮಾಸ್ ಉಗ್ರರ ವಿಕೃತಿಯನ್ನು ವಿವರಿಸುವ ವೇಳೆ ಮಕ್ಕಳ ತಲೆ ಕಡಿಯುವ ದೃಶ್ಯ ನೋಡಿದ್ದೇನೆ. ಇಂತಹದ್ದನ್ನು ನಾನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಇದೊಂದು ಯಹೂದಿಗಳ ಹತ್ಯಾಕಾಂಡವಾಗಿದೆ ಎಂದು ಬೈಡನ್ ಹೇಳಿದ್ದರು.
ಇದನ್ನೂ ಓದಿ: ಆಪರೇಷನ್ ಅಜಯ್: ಇಂದು ರಾತ್ರಿ 230 ಜನರಿರುವ ಮೊದಲ ವಿಮಾನ ಇಸ್ರೇಲ್ನಿಂದ ಭಾರತಕ್ಕೆ