ETV Bharat / international

ಇಸ್ರೇಲ್ - ಹಮಾಸ್ ಯುದ್ಧದಲ್ಲಿ ಭಾಗಿಯಾಗಲಿದೆಯೇ ಹಿಜ್ಬುಲ್ಲಾ ಸೇನೆ..? - ಸಂಭಾವ್ಯ ಭೂದಾಳಿಗೆ ಸಿದ್ಧತೆ ನಡೆಸಿದ ಇಸ್ರೇಲ್

Israel Hamas war: ಹಮಾಸ್‌ನೊಂದಿಗೆ ಯುದ್ಧಕ್ಕಿಳಿದಿರುವ ಇಸ್ರೇಲ್​ಗೆ ಮತ್ತೊಂದು ಸವಾಲು ಎದುರಾಗುವ ಸಾಧ್ಯತೆ ಹೆಚ್ಚಿದೆ. ಇಸ್ರೇಲ್​ನಿಂದ ಉತ್ತರದಲ್ಲಿರುವ ಹಿಜ್ಬುಲ್ಲಾದ ಮಿಲಿಟರಿಯು ಹಮಾಸ್‌ ಪರ ನಿಲ್ಲಲಿದೆಯೇ ಎನ್ನುವ ಆತಂಕ ಮೂಡಿದೆ. ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ರಾಕೆಟ್ ಮತ್ತು ಶೆಲ್ಲಿಂಗ್ ದಾಳಿಗಳು ನಡೆದಿದ್ದು, ಈವರೆಗೆ ಮೂವರು ಹಿಜ್ಬುಲ್ಲಾ ಹೋರಾಟಗಾರರು ಮತ್ತು ಒಬ್ಬ ಇಸ್ರೇಲಿ ಸೈನಿಕ ಮೃತಪಟ್ಟಿದ್ದಾರೆ.

Israel Hamas war
ಇಸ್ರೇಲ್- ಹಮಾಸ್ ಯುದ್ಧದಲ್ಲಿ ಭಾಗಿಯಾಗಲಿದೆಯೇ ಹಿಜ್ಬುಲ್ಲಾ ಸೇನೆ..?
author img

By ETV Bharat Karnataka Team

Published : Oct 13, 2023, 11:30 AM IST

ಬೈರುತ್: ಲೆಬನಾನ್‌ನ ಭಾರಿ ಶಸ್ತ್ರಸಜ್ಜಿತ ಹಿಜ್ಬುಲ್ಲಾ ಸೇನೆಯು ಇಸ್ರೇಲ್ - ಹಮಾಸ್ ಯುದ್ಧದಲ್ಲಿ ಭಾಗಿಯಾಗಲಿದೆಯೇ ಎಂದು ಆತಂಕ ಎದುರುರಾಗಿದೆ. ಹಮಾಸ್‌, ಇರಾನ್‌, ಗಾಜಾ ಪಟ್ಟಿಯ ಇಸ್ಲಾಮಿಕ್ ಉಗ್ರಗಾಮಿ ಆಡಳಿತಗಾರರ ಹಾಗೂ ಇಸ್ರೇಲ್​ ನಡುವಿನ ಹೋರಾಟದಲ್ಲಿ ಹಿಜ್ಬುಲ್ಲಾ ಸೇರುವ ಸಾಧ್ಯತೆ ಹೆಚ್ಚಿದೆ. ಕಳೆದ ಆರು ದಿನಗಳಿಂದ, ಇಸ್ರೇಲ್ ಗಾಜಾವನ್ನು ಮುತ್ತಿಗೆ ಹಾಕಿದೆ. ದಕ್ಷಿಣ ಇಸ್ರೇಲ್‌ನ ಮೇಲೆ ಮಾರಣಾಂತಿಕ ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಪ್ಯಾಲೆಸ್ಟೀನಿಯಾದ ಪ್ರದೇಶಗಳ ಮೇಲೆ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ.

ಸಂಭಾವ್ಯ ಭೂದಾಳಿಗೆ ಸಿದ್ಧತೆ ನಡೆಸಿದ ಇಸ್ರೇಲ್: ಹಮಾಸ್​ ಹತ್ತಿಕ್ಕುವ ಪಣ ತೊಟ್ಟಿರುವ ಇಸ್ರೇಲ್ ಇದೀಗ ಸಂಭಾವ್ಯ ಭೂದಾಳಿಗೆ ಸಿದ್ಧತೆ ನಡೆಸಿದೆ. ದೇಶದ ರಾಜಕೀಯ ಮತ್ತು ಮಿಲಿಟರಿ ನಾಯಕರು ಮುಂದಿನ ನಡೆಯ ಬಗ್ಗೆ ಯೋಚಿಸುತ್ತಿದ್ದು, ಜೊತೆಗೆ ಇಸ್ರೇಲ್‌ನ ಉತ್ತರದ ಗಡಿಯಲ್ಲಿ ಹಿಜ್ಬುಲ್ಲಾವನ್ನು ಆತಂಕದಿಂದ ವೀಕ್ಷಿಸುತ್ತಿದ್ದಾರೆ. ಇಸ್ರೇಲ್ ಈ ಪ್ರದೇಶದಲ್ಲಿ ಸೈನ್ಯದ ತುಕಡಿಗಳನ್ನು ಕಳುಹಿಸಿಕೊಟ್ಟಿದೆ. ಇನ್ನು ಇಸ್ರೇಲ್‌ನಲ್ಲಿ ವಾಸ್ತವಿಕವಾಗಿ ಎಲ್ಲಿ ಬೇಕಾದರೂ ಹೊಡೆಯುವ ಸಾಮರ್ಥ್ಯ ಇರುವ ಹತ್ತಾರು ಸಾವಿರ ರಾಕೆಟ್‌ಗಳು ಮತ್ತು ಕ್ಷಿಪಣಿಗಳ ಶಸ್ತ್ರಾಗಾರವನ್ನು ಹೊಂದಿರುವ ಹಿಜ್ಬುಲ್ಲಾವು ಹಮಾಸ್‌ಗಿಂತ ಹೆಚ್ಚು ಅಸಾಧಾರಣ ವೈರಿ ಎಂದು ಪರಿಗಣಿಸಲಾಗಿದೆ.

ದೇಶದ ಉತ್ತರದಲ್ಲಿ ಹೊಸ ಮುಂಭಾಗವನ್ನು ತೆರೆಯುವುದರಿಂದ ಯುದ್ಧದ ಅಲೆಯನ್ನು ಬದಲಾಯಿಸಬಹುದು ಎಂದು ಇಸ್ರೇಲ್ ಚಿಂತಿಸುತ್ತಿದೆ, ಹಿಜ್ಬುಲ್ಲಾದ ಮಿಲಿಟರಿ ಕ್ಯಾಲಿಬರ್ ಹಮಾಸ್‌ಗಿಂತ ಉತ್ತಮವಾಗಿದೆ. ಆದರೆ, ಹೋರಾಟವು ಹಿಜ್ಬುಲ್ಲಾ ಮತ್ತು ಲೆಬನಾನ್‌ಗೆ ಸಮಾನವಾಗಿ ವಿನಾಶಕಾರಿಯಾಗಬಹುದು.

ಲೆಬನಾನಿನ ವಿಶ್ಲೇಷಕ ಖಾಸಿಮ್ ಖಾಸಿರ್ ಹೇಳಿದ್ದೇನು?: ಹಮಾಸ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಬೈರುತ್‌ಗೆ ಸ್ಥಳಾಂತರಗೊಂಡಿದ್ದರಿಂದ ಹಮಾಸ್ ಮತ್ತು ಹಿಜ್ಬುಲ್ಲಾ ಹತ್ತಿರವಾಗಿವೆ. ಹಿಜ್ಬುಲ್ಲಾ ಗುಂಪಿಗೆ ಹತ್ತಿರವಿರುವ ಲೆಬನಾನಿನ ವಿಶ್ಲೇಷಕ ಖಾಸಿಮ್ ಖಾಸಿರ್, ''ಹೆಜ್ಬುಲ್ಲಾ ಹಮಾಸ್​ ಅನ್ನು ನಾಶವನ್ನು ಅನುಮತಿಸುವುದಿಲ್ಲ. ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಳ್ಳುವ ಸಮಯದಲ್ಲಿ, ಹಿಜ್ಬುಲ್ಲಾ ಹಮಾಸ್ ಪರ ನಿಲ್ಲಲಿದೆ'' ಎಂದು ಅವರು ತಿಳಿಸಿದ್ದಾರೆ.

ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಹಿಬ್ಜುಲ್ಲಾ ಮತ್ತು ಇಸ್ರೇಲ್ ಗಡಿಯಲ್ಲಿ ಪರಸ್ಪರ ದಾಳಿಗಳು ನಡೆದಿವೆ. ಈ ವೇಳೆ, ಮೂರು ಹಿಜ್ಬುಲ್ಲಾ ಹೋರಾಟಗಾರರು ಸೋಮವಾರ ಮೃತಪಟ್ಟಿದ್ದಾರೆ. ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್​ನ ಒಬ್ಬ ಸೈನಿಕ ಸಾವನ್ನಪ್ಪಿದ್ದಾರೆ. ದಕ್ಷಿಣ ಲೆಬನಾನಿನ ಗಡಿಯಲ್ಲಿ ಇಸ್ರೇಲ್‌- ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿಗಳ ನಡುವೆ ನಡೆದ ಚಕಮಕಿಯಲ್ಲಿ ಮೂವರು ಇಸ್ರೇಲಿ ಸೈನಿಕರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು, ಮಧ್ಯಪ್ರಾಚ್ಯದಲ್ಲಿ ಸಂಘರ್ಷಕ್ಕೆ ಕಾರಣರಾದ ಇತರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಪ್ರದೇಶಕ್ಕೆ ಅಮೆರಿಕನ್ ಯುದ್ಧನೌಕೆಗಳನ್ನು ಕಳುಹಿಸಿದ್ದಾರೆ. ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ಅತಿ ದೊಡ್ಡ ವಾಹಕ ಜೆರಾಲ್ಡ್ ಆರ್. ಫೋರ್ಡ್ ನಿಯೋಜನೆ ಮಾಡುವ ಮೂಲಕ ಬೆಂಬಲಿಸಿದ್ದಾರೆ. ''ಜೊತೆಗೆ ಇಸ್ರೇಲ್‌ಗೆ ಬೇಕಾದುದನ್ನು ನಾವು ನೀಡುತ್ತೇವೆ. ನಮ್ಮಲ್ಲಿ ಸೂಕ್ತವಾದ ಸ್ವತ್ತುಗಳಿವೆ'' ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದರು.

ಇದನ್ನೂ ಓದಿ: 'ಇಸ್ರೇಲ್ ಕೇವಲ ಆರಂಭಿಕ ಟಾರ್ಗೆಟ್': ಹಮಾಸ್ ಕಮಾಂಡರ್ ಮಹಮೂದ್​ ಅಲ್​ ಜಹರ್ ಹೇಳಿಕೆ... ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.