ETV Bharat / international

ಜೆನಿನ್ ಅಲ್ ಅನ್ಸರ್ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಅಪಾರ ಪ್ರಮಾಣದ ಮದ್ದುಗುಂಡುಗಳು ಪತ್ತೆ - ಇಸ್ರೇಲ್ ಮೇಲೆ ದಾಳಿ

ಅಲ್ ಅನ್ಸಾರ್ ಮಸೀದಿಯಲ್ಲಿರುವ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಕಾಂಪೌಂಡ್ ಮೇಲೆ ಐಡಿಎಫ್ ಮತ್ತು ಇಸ್ರೇಲ್ ಸೆಕ್ಯೂರಿಟಿ ಅಧಿಕಾರಿಗಳು ವೈಮಾನಿಕ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹೇಳಿವೆ.

air strikes
ವೈಮಾನಿಕ ದಾಳಿ
author img

By ANI

Published : Oct 22, 2023, 1:23 PM IST

ಟೆಲ್ ಅವಿವ್ (ಇಸ್ರೇಲ್) : ಇಸ್ರೇಲ್​ ಭದ್ರತಾ ಪಡೆಗಳು ವೈಮಾನಿಕ ದಾಳಿ ನಡೆಸಿ ಪ್ಯಾಲೆಸ್ಟೈನ್​ನ ಪಶ್ಚಿಮ ದಂಡೆ ಪ್ರದೇಶದಲ್ಲಿ ನೆಲೆಗೊಂಡಿರುವ ಅಲ್ ಅನ್ಸಾರ್ ಮಸೀದಿಯನ್ನು ಸ್ಫೋಟಿಸಿವೆ. ಈ ಮಸೀದಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್ ಮತ್ತು ಪ್ಯಾಲೆಸ್ಟೈನ್​ ಇಸ್ಲಾಮಿಕ್ ಜಿಹಾದ್​ನ ಭಯೋತ್ಪಾದಕರು ಇಸ್ರೇಲ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು ಎಂದು ಐಡಿಎಫ್ ತಿಳಿಸಿದೆ.

ಈ ಕುರಿತು ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡಿರುವ ಇಸ್ರೇಲಿ ಭದ್ರತಾ ಪಡೆಗಳು, ಅಲ್ ಅನ್ಸಾರ್ ಮಸೀದಿಯು ಹಮಾಸ್‌ನ ಕಮಾಂಡ್ ಸೆಂಟರ್ ಎಂದು ವಿವರಿಸಿದೆ. ಮಾಹಿತಿ ಪ್ರಕಾರ, ಜುಲೈ 2023 ರಿಂದ ಇಸ್ರೇಲ್ ಮೇಲೆ ದಾಳಿ ನಡೆಸಲು ಈ ಮಸೀದಿಯಲ್ಲಿ ಯೋಜನೆ ರೂಪಿಸಲಾಗುತ್ತಿತ್ತು ಎಂದು ತಿಳಿಸಿದೆ. ಈ ಸಂಬಂಧ ಇಸ್ರೇಲಿ ಭದ್ರತಾ ಪಡೆಗಳು ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿವೆ. ಈ ಕೆಲವು ಚಿತ್ರಗಳು ಮಸೀದಿಯೊಳಗೆ ಇರಿಸಲಾಗಿರುವ ಮದ್ದುಗುಂಡುಗಳನ್ನು ತೋರಿಸುತ್ತಿದ್ದರೆ, ಮತ್ತೊಂದು ಫೋಟೋದಲ್ಲಿ ನೆಲಮಾಳಿಗೆಯ ದಾರಿಯನ್ನು ನೋಡಬಹುದು. ಜೊತೆಗೆ, ನೆಲಮಾಳಿಗೆಯಿಂದ ಮದ್ದುಗುಂಡುಗಳನ್ನು ತರಲು ಮಸೀದಿಯೊಳಗೆ ಸಣ್ಣ ಕ್ರೇನ್ ಅನ್ನು ಸಹ ಅಳವಡಿಸಲಾಗಿದೆ.

  • Israel Defense Forces (IDF) tweets, "The IDF & ISA just conducted an aerial strike on a Hamas and Islamic Jihad terrorist compound in the Al-Ansar Mosque in Jenin. Recent IDF intel revealed that the Mosque was used as a command center to plan and execute terrorist attacks… pic.twitter.com/QL69jI9jvM

    — ANI (@ANI) October 22, 2023 " class="align-text-top noRightClick twitterSection" data=" ">

ಮಸೀದಿಯ ಬಹುಭಾಗ ಕುಸಿತ : ಮಸೀದಿಯಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ಬಂಕರ್‌ಗಳನ್ನು ನಿರ್ಮಿಸಲಾಗಿದೆ. ದಾಳಿಗೆ ಮಸೀದಿಯ ಬಹುಭಾಗ ಕುಸಿದಿದ್ದು, ಆಂಬ್ಯುಲೆನ್ಸ್‌ಗಳು ಹತ್ತಿರದಲ್ಲಿರುವುದನ್ನು ಗಮನಿಸಬಹುದು. ಜನರು ಅವಶೇಷಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : ಇಸ್ರೇಲ್, ಪ್ಯಾಲೆಸ್ತೈನ್​ನಲ್ಲಿ ಶಾಂತಿ ನೆಲೆಸಬೇಕೆಂದು ಆಗ್ರಹ : ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ

ಓರ್ವ ವ್ಯಕ್ತಿ ಸಾವು : ಪ್ಯಾಲೆಸ್ಟೈನ್​ ಏಜೆನ್ಸಿಗಳು ನೀಡಿದ ಮಾಹಿತಿ ಪ್ರಕಾರ, ಅಲ್ ಅನ್ಸಾರ್ ಮಸೀದಿಯ ಮೇಲಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದೆ. ಆದರೆ, ಈ ದಾಳಿಯಲ್ಲಿ ಹಲವು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಇದನ್ನೂ ಓದಿ : ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್​ ದಾಳಿ ಮಾಡಿಲ್ಲ, ಬೇರೆ ಉಗ್ರರ ಗುಂಪಿನಿಂದ ಕೃತ್ಯ : ಅಮೆರಿಕದ ಅಧ್ಯಕ್ಷ ಜೋ ಬೈಡನ್​

ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 1,400 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರತೀಕಾರವಾಗಿ ಇಸ್ರೇಲ್ ಕೂಡ ದಾಳಿ ಮುಂದುವರೆಸಿದ್ದು, ಇದುವರೆಗೆ 4,300 ಪ್ಯಾಲೆಸ್ಟೈನ್​ ಭಯೋತ್ಪಾದಕರು ಹತರಾಗಿದ್ದಾರೆ. ಎರಡೂ ಕಡೆ ಗಾಯಗೊಂಡವರ ಸಂಖ್ಯೆಯೂ ಸಾವಿರದಷ್ಟಿದೆ. ಮುಂದಿನ ದಿನಗಳಲ್ಲಿ ಯುದ್ಧ ತೀವ್ರಗೊಳಿಸುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದ್ದು, ಇದಕ್ಕಾಗಿ ದಕ್ಷಿಣದ ಕಡೆಗೆ ತೆರಳುವಂತೆ ಗಾಜಾದ ನಾಗರಿಕರನ್ನು ಕೋರಿದೆ. ಇಸ್ರೇಲ್ ಶೀಘ್ರದಲ್ಲೇ ಗಾಜಾಕ್ಕೆ ಸೈನ್ಯವನ್ನು ಕಳುಹಿಸುವ ಬಗ್ಗೆಯೂ ಚರ್ಚೆ ನಡೆಸಿದೆ.

ಇದನ್ನೂ ಓದಿ : 'ನಮ್ಮನ್ನಿಲ್ಲಿ ಚೆನ್ನಾಗಿ ನೋಡಿಕೊಳ್ತಿದಾರೆ' : ಹಮಾಸ್​ ಉಗ್ರರು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಒತ್ತೆಯಾಳು ಯುವತಿ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.