ಜೆಬಾಲಿಯಾ (ಗಾಜಾಪಟ್ಟಿ): ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದರಿಂದ ಐದು ಮಕ್ಕಳು ಮೃತಪಟ್ಟಿವೆ ಎಂದು ಅಲ್ಲಿನ ಮಾನವ ಹಕ್ಕುಗಳ ಗುಂಪು ಹಾಗೂ ಇಸ್ರೇಲಿ ಪತ್ರಿಕೆಯೊಂದು ವರದಿ ಮಾಡಿದೆ.
ಆದರೆ ಇಸ್ರೇಲ್ ಮಿಲಿಟರಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪು ಹಾರಿಸಿದ ರಾಕೆಟ್ನಿಂದ ಆದ ಅನಾಹುತ ಎಂದು ಹೇಳಿದೆ. ರಾಕೆಟ್ ದಾಳಿಯಿಂದಾಗಿ ಪ್ಯಾಲಿಸ್ತೀನ್ನ ಐದು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಪ್ಯಾಲಿಸ್ತೀನ್ನ ಮಾನವ ಹಕ್ಕುಗಳ ಆಯೋಗ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ದಾಳಿ ಇಸ್ರೇಲ್‌ನ ರಾಕೆಟ್ಗಳಿಂದಲೇ ಆಗಿದೆ ಎಂದು ಪುರಾವೆಗಳನ್ನು ಸಂಗ್ರಹಿಸಿದ ಬಳಿಕ ತೀರ್ಮಾನಕ್ಕೆ ಬಂದಿದೆ. ಇದು ಇಸ್ರೇಲಿ ವಿಮಾನದಿಂದ ಉಡಾಯಿಸಲಾದ ಕ್ಷಿಪಣಿ ಎಂದು ನಿರ್ದೇಶಕ ರಾಜ ಸೌರಾನಿ ಹೇಳಿದ್ದಾರೆ. ಇದೇ ವೇಳೆ ಅವರು ಕ್ಷಿಪಣಿಯಿಂದ ದಾಳಿ ನಡೆಸಿದ ಚಿತ್ರಗಳನ್ನು ಸಹ ಪ್ರದರ್ಶಿಸಿದರು.
ಏತನ್ಮಧ್ಯೆ, ಇಸ್ರೇಲ್‌ನ ಮಾಧ್ಯಮವೊಂದು ಇಸ್ರೇಲಿ ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ,ಇಸ್ರೇಲಿ ದಾಳಿಯಿಂದಲೇ ಐವರು ಕೊಲ್ಲಲ್ಪಟ್ಟರು ಎಂದು ಸೇನಾ ತನಿಖೆ ವೇಳೆ ಬಯಲಾಗಿದೆ ಎಂದು ಮಿಲಿಟರಿ ಹಿರಿಯ ಅಧಿಕಾರಿಗಳ ಹೇಳಿಕೆ ಆಧರಿಸಿ ವರದಿ ಮಾಡಿದೆ. ಈ ನಡುವೆ ಇಸ್ರೇಲ್ ದಾಳಿ ಖಂಡಿಸಿ ಪ್ಯಾಲಿಸ್ತೀನ್ ನಾಗರಿಕರು ಪ್ರತಿಭಟನೆ ನಡೆಸಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರು ಧರಣಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ: ಲಂಕಾ ಬಂದರಿಗೆ ಬಂದ ಚೀನಾ ಬೇಹುಗಾರಿಕಾ ಹಡಗು: ಭಾರತದ ಆಕ್ಷೇಪ