ETV Bharat / international

ಏಳು ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ? - ಗಾಜಾ

ಒಂದು ವಾರದ ಅವಧಿಯ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Israel agrees to week-long ceasefire for hostage release: Sources

author img

By ETV Bharat Karnataka Team

Published : Dec 20, 2023, 1:07 PM IST

ಟೆಲ್ ಅವಿವ್( ಇಸ್ರೇಲ್​​): ಹಮಾಸ್​ ಬಳಿ ಒತ್ತೆಯಾಳಾಗಿರುವವರ ಕುಟುಂಬಗಳ ತೀವ್ರ ಒತ್ತಡಕ್ಕೆ ಮಣಿದಿರುವ ಇಸ್ರೇಲ್, ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಒಂದು ವಾರದ ಅವಧಿಯ ಕದನವಿರಾಮಕ್ಕೆ ಒಪ್ಪಿಗೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಸೋಮವಾರ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಮತ್ತು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಅವರನ್ನು ವಾರ್ಸಾದಲ್ಲಿ ಭೇಟಿಯಾದ ಎರಡು ದಿನಗಳ ನಂತರ ಈ ಹೊಸ ಬೆಳವಣಿಗೆ ನಡೆದಿದೆ.

ಒಂದು ವಾರ ಅವಧಿಯ ಕದನ ವಿರಾಮಕ್ಕೆ ಒಪ್ಪುವುದಾಗಿ ಮತ್ತು ಅದಕ್ಕೆ ಬದಲಾಗಿ ಹಮಾಸ್​ 40 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಇಸ್ರೇಲ್ ಪ್ರಮುಖ ಮಧ್ಯಸ್ಥಗಾರ ಕತಾರ್​ಗೆ ತಿಳಿಸಿದೆ ಎಂದು ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ. ಇಸ್ರೇಲ್ ಬೇಡಿಕೆಯಿಟ್ಟ ಈ 40 ಒತ್ತೆಯಾಳುಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಸೇರಿದ್ದಾರೆ.

ಏತನ್ಮಧ್ಯೆ, ನವೆಂಬರ್ 24 ಮತ್ತು ಡಿಸೆಂಬರ್ 1 ರ ನಡುವೆ ಹಿಂದಿನ ಮಾನವೀಯ ವಿರಾಮದ ಸಮಯದಲ್ಲಿ ಬಿಡುಗಡೆಯಾದವರಿಗಿಂತ ಹೆಚ್ಚು ಗಂಭೀರ ಅಪರಾಧ ಮಾಡಿದವರು ಸೇರಿದಂತೆ ಇನ್ನೂ ಹಲವಾರು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ಒಪ್ಪಿಕೊಂಡಿದೆ. ಈ ಹಿಂದಿನ ಕದನವಿರಾಮದ ವೇಳೆ 100ಕ್ಕೂ ಹೆಚ್ಚು ಇಸ್ರೇಲಿ ಹಾಗೂ ಇತರ ದೇಶಗಳ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು.

ಇಸ್ರೇಲ್​ ಯುದ್ಧದಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕೆಂದು ಹಮಾಸ್ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇಸ್ರೇಲ್ ಈ ಬೇಡಿಕೆಯನ್ನು ಒಪ್ಪಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 7 ರ ಹತ್ಯಾಕಾಂಡಕ್ಕೆ ಕಾರಣರಾದ ಎಲ್ಲರನ್ನೂ ಹಮಾಸ್ ಹಸ್ತಾಂತರಿಸಿದ ನಂತರವೇ ಯುದ್ಧವನ್ನು ಶಾಶ್ವತವಾಗಿ ನಿಲ್ಲಿಸಲು ಒಪ್ಪುವುದಾಗಿ ಇಸ್ರೇಲ್ ಹೇಳಿದೆ.

ಆದರೆ , ಯುದ್ಧಪೀಡಿತ ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಟೋಬರ್ 7 ರಿಂದ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಕ್ರಮದಿಂದ ಸುಮಾರು 20,000 ಜನರು ಸಾವನ್ನಪ್ಪಿದ್ದಾರೆ ಮತ್ತು 52,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ. ಏತನ್ಮಧ್ಯೆ, ಉತ್ತರ ಗಾಜಾದ ಹೆಚ್ಚಿನ ಭಾಗವು ವೈಮಾನಿಕ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಗಾಜಾದ ಶೇಕಡಾ 80ರಷ್ಟು ಅಂದರೆ 1.9 ಮಿಲಿಯನ್ ಜನ ಸ್ಥಳಾಂತರಗೊಂಡಿದ್ದಾರೆ.( ಐಎಎನ್​​ಎಸ್​)

ಇದನ್ನೂ ಓದಿ : ಇಸ್ರೇಲ್-ಹಮಾಸ್ ಕದನವಿರಾಮಕ್ಕೆ ಹೊಸ ಪ್ರಸ್ತಾವನೆ ಮುಂದಿಟ್ಟ ಕತಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.