ETV Bharat / international

ಲಷ್ಕರ್-ಎ-ತೈಬಾ ಸಂಘಟನೆಯನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿದ ಇಸ್ರೇಲ್; ಹಮಾಸ್ ನಿಷೇಧಿಸುತ್ತಾ ಭಾರತ? - ಮುಂಬೈ ಭಯೋತ್ಪಾದಕ ದಾಳಿ

Israel designates LeT as terror organisation: ಲಷ್ಕರ್-ಎ-ತೈಬಾವನ್ನು ಇಸ್ರೇಲ್ ತನ್ನ ದೇಶದ ಉಗ್ರವಾದಿ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.

Israel designates LeT as terror organisation

author img

By ETV Bharat Karnataka Team

Published : Nov 21, 2023, 2:32 PM IST

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ 15ನೇ ವರ್ಷದ ನೆನಪಿನ ಸಂಕೇತವಾಗಿ ಇಸ್ರೇಲ್ ಲಷ್ಕರ್-ಎ-ತೈಬಾ (ಎಲ್ಇಟಿ) ಅನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿದೆ. ಎಲ್​ಇಟಿಯನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವಂತೆ ಭಾರತ ಸರ್ಕಾರ ಯಾವುದೇ ವಿನಂತಿ ಮಾಡದಿದ್ದರೂ ಇಸ್ರೇಲ್ ಈ ಕ್ರಮ ಕೈಗೊಂಡಿದೆ.

ಈ ನಿಟ್ಟಿನಲ್ಲಿ ಇಸ್ರೇಲ್ ಔಪಚಾರಿಕವಾಗಿ ಎಲ್ಲಾ ಅಗತ್ಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದೆ ಮತ್ತು ಎಲ್ಇಟಿಯನ್ನು ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಅಗತ್ಯವಿರುವ ಎಲ್ಲಾ ತಪಾಸಣೆ ಮತ್ತು ನಿಬಂಧನೆಗಳನ್ನು ಪೂರೈಸಿದೆ ಎಂದು ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಸುತ್ತಮುತ್ತಲಿನಿಂದ ಕೆಲಸ ಮಾಡುವ ಅಥವಾ ಯುಎನ್ ಭದ್ರತಾ ಮಂಡಳಿ (ಯುಎನ್ಎಸ್​ಸಿ) ಅಥವಾ ಯುಎಸ್ ಸ್ಟೇಟ್ ಡಿಪಾರ್ಟ್​ಮೆಂಟ್​ನಿಂದ ಭಯೋತ್ಪಾದಕ ಸಂಘಟನೆಗಳು ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಘಟನೆಗಳನ್ನು ಮಾತ್ರ ತನ್ನ ಭಯೋತ್ಪಾದಕರ ಪಟ್ಟಿಗೆ ಸೇರಿಸುತ್ತದೆ.

ಭಯೋತ್ಪಾದನೆಯನ್ನು ಎದುರಿಸುವಲ್ಲಿ ಏಕೀಕೃತ ಜಾಗತಿಕ ರಂಗದ ಮಹತ್ವವನ್ನು ಎತ್ತಿ ತೋರಿಸಲು, ಈ ದಿನಾಂಕದಂದು ಎಲ್ಇಟಿ ಸಂಘಟನೆಯನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಇಸ್ರೇಲ್ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ಕಳೆದ ಕೆಲವು ತಿಂಗಳುಗಳಲ್ಲಿ ಜಂಟಿಯಾಗಿ ಕೆಲಸ ಮಾಡಿವೆ ಎಂದು ಪ್ರಕಟಣೆ ತಿಳಿಸಿದೆ. ಎಲ್ಇಟಿ ಮಾರಣಾಂತಿಕ ಮತ್ತು ಖಂಡನೀಯ ಭಯೋತ್ಪಾದಕ ಸಂಘಟನೆಯಾಗಿದ್ದು, ನೂರಾರು ಭಾರತೀಯ ನಾಗರಿಕರು ಮತ್ತು ಇತರರ ಹತ್ಯೆಗೆ ಕಾರಣವಾಗಿದೆ ಎಂದು ಅದು ಹೇಳಿದೆ.

ನವೆಂಬರ್ 26, 2008ರಂದು ಎಲ್​ಇಟಿ ಎಸಗಿದ ಘೋರ ಕೃತ್ಯಗಳ ನೆನಪು ಶಾಂತಿ ಬಯಸುವ ಎಲ್ಲ ರಾಷ್ಟ್ರಗಳು ಮತ್ತು ಸಮಾಜಗಳಲ್ಲಿ ಇನ್ನೂ ಮಾಸಿಲ್ಲ. ಭಯೋತ್ಪಾದನೆಗೆ ಬಲಿಯಾದವರ ಕುಟುಂಬಗಳಿಗೆ ಇಸ್ರೇಲ್ ರಾಷ್ಟ್ರ ತನ್ನ ಪ್ರಾಮಾಣಿಕ ಸಂತಾಪ ವ್ಯಕ್ತಪಡಿಸುತ್ತದೆ. ಉತ್ತಮ ಶಾಂತಿಯುತ ಭವಿಷ್ಯದ ಭರವಸೆಯಲ್ಲಿ ನಾವು ನಿಮ್ಮೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ರಾಯಭಾರ ಕಚೇರಿ ಹೇಳಿದೆ.

ಹಮಾಸ್​ ಬಗ್ಗೆ ಭಾರತದ ನಿಲುವೇನು?: "ಭಾರತದಲ್ಲಿ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಅಧಿಕೃತವಾಗಿ ಘೋಷಿಸುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ" ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೂರ್ ಗಿಲಾನ್ ಈ ಹಿಂದೆ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಹೇಳಿದ್ದರು. ಯುನೈಟೆಡ್ ಸ್ಟೇಟ್ಸ್, ಇಯು, ಕೆನಡಾ ಮತ್ತು ಆಸ್ಟ್ರೇಲಿಯಾ ಈಗಾಗಲೇ ಹಮಾಸ್ ಅನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿವೆ ಎಂದು ಅವರು ಗಮನ ಸೆಳೆದರು.

ಭಾರತದ ವಿದೇಶಾಂಗ ಸಚಿವಾಲಯವು ಈ ಹಿಂದೆ ಹಮಾಸ್ ಅನ್ನು ಭಯೋತ್ಪಾದಕ ಗುಂಪು ಎಂದು ಕರೆಯುವುದರಿಂದ ಹಿಂದೆ ಸರಿದಿತ್ತು. ಇದು ಸಂಬಂಧಿತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾದ ಕಾನೂನು ವಿಷಯ ಎಂದು ಭಾರತ ಹೇಳಿತ್ತು. ಆದಾಗ್ಯೂ ಇಸ್ರೇಲ್ ಮೇಲಿನ ಅಕ್ಟೋಬರ್ 7ರ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಭಾರತ ಉಲ್ಲೇಖಿಸಿದೆ.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಜಾತಿ ಗಣತಿ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.