ETV Bharat / international

ಮೋದಿ ಪ್ರಪಂಚದ ಎಲ್ಲ ನಾಯಕರಿಗಿಂತ ಅತ್ಯಂತ ಪ್ರೀತಿ ಪಾತ್ರರು: ಇಟಲಿ ಪ್ರಧಾನಿ ಅಭಿಮತ - is the most loved one of all around the world

ಪ್ರಧಾನಿ ಮೋದಿ ಪ್ರಪಂಚದಾದ್ಯಂತ ಎಲ್ಲ ನಾಯಕರಿಗಿಂತ ಅತ್ಯಂತ ಪ್ರೀತಿಪಾತ್ರರು. ಅವರು ಪ್ರಮುಖ ನಾಯಕರಾಗಿದ್ದಾರೆ ಎಂಬುದು ನಿಜವಾಗಿಯೂ ಸಾಬೀತಾಗಿದೆ. ಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಭಿಮತ ವ್ಯಕ್ತಪಡಿಸಿದರು. ರಾಜಕೀಯ, ವ್ಯಾಪಾರ ಮತ್ತು ಆರ್ಥಿಕ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರಗಳ ಬಗ್ಗೆ ಇಟಲಿ ಪ್ರಧಾನಿ ಹಾಗೂ ಭಾರತದ ಪ್ರಧಾನಿ ಮೋದಿ ಮಾತುಕತೆ ನಡೆಸಿದರು.

India and Italy
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
author img

By

Published : Mar 2, 2023, 4:33 PM IST

Updated : Mar 2, 2023, 6:35 PM IST

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಭಾರತದ ಪ್ರಧಾನಿ ಮೋದಿ ನಡುವೆ ಮಹತ್ವದ ಮಾತುಕತೆ ನಡೆಯಿತು.

ನವದೆಹಲಿ: ಜಿ-20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ಯುದ್ಧ ಪ್ರದೇಶದಲ್ಲಿ (ಉಕ್ರೇನ್‌ನಲ್ಲಿ) ಸಮಾಲೋಚನಾ ಪ್ರಕ್ರಿಯೆ ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಬಹುಪಕ್ಷೀಯ ಸಮುದಾಯವನ್ನು ಒಟ್ಟುಗೂಡಲು ಮುಖ್ಯವಾಗಿದೆ. ಭಾರತೀಯ ಅಧ್ಯಕ್ಷ ಸ್ಥಾನವು ಇದಕ್ಕೆ ಪೂರಕವಾಗಿ ಇನ್ನಷ್ಟು ಕಾರ್ಯ ಮಾಡಲಿದೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಶಯ ವ್ಯಕ್ತಪಡಿಸಿದರು.

ಭಾರತ ಪ್ರವಾಸದ ನಿಮಿತ್ತ ಗುರುವಾರ ನವದೆಹಲಿಗೆ ಆಗಮಿಸಿರುವ ಇಟಲಿ ಪ್ರಧಾನಿ, ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಬಾಂಧವ್ಯ ಬೆಳೆಸಲು ಪರಸ್ಪರ ಬದ್ಧತೆಯೊಂದಿಗೆ ಮುಂದಕ್ಕೆ ಕೊಂಡೊಯ್ಯುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

India and Italy
ಇಟಲಿ ಪ್ರಧಾನಿಗೆ ಪ್ರಧಾನಿ ಮೋದಿಯವರು ಆತ್ಮೀಯ ಸ್ವಾಗತ ಕೋರಿದರು

ಉಭಯ ನಾಯಕರು ಚರ್ಚಿಸಿದ ವಿಷಯಗಳು ಯಾವವು?: ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ಸಹಯೋಗವನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಒಗ್ಗಟ್ಟು ಗಾಢವಾಗಿಸುವ ಬಗ್ಗೆ ಚರ್ಚಿಸಲಾಗಿದೆ. ರಾಜಕೀಯ, ವ್ಯಾಪಾರ ಮತ್ತು ಆರ್ಥಿಕ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರಗಳ ಮಾತುಕತೆ ನಡೆದಿದೆ.

ಇಟಲಿ ಪ್ರಧಾನಿ ಹೇಳಿದ್ದೇನು?: ನಾವು ಈ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಬಯಸಿದ್ದೇವೆ ಮತ್ತು ನಮ್ಮ ಪಾಲುದಾರಿಕೆ ಕಾರ್ಯತಂತ್ರವಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ಏಕೆಂದರೆ ನಾವು ಬಹಳ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇವೆ. ಜಿ-20 ಶೃಂಗಸಭೆಯು ನಮ್ಮ ಸಹಕಾರದ ಮೇಲೆ ಭಾರತದ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಲು, ನಾವು ಒಟ್ಟಾಗಿ ಬಹಳಷ್ಟು ಕಾರ್ಯಗಳ ರೂಪಿಸಲು ಸಾಧ್ಯವಿದೆ ಎಂದು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಪಾದಿಸಿದರು.

India and Italy
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಭಯೋತ್ಪಾದನೆ, ಪ್ರತ್ಯೇಕತೆಯ ವಿರುದ್ಧದ ಹೋರಾಟ: ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಟಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ. ಈ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ವಿವರವಾದ ಚರ್ಚೆ ನಡೆಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು, ನಾವು ಭಾರತ ಮತ್ತು ಇಟಲಿ ನಡುವೆ 'ಸ್ಟಾರ್ಟ್ ಅಪ್ ಸೇತುವೆ' ಸ್ಥಾಪನೆ ಘೋಷಿಸುತ್ತಿದ್ದೇವೆ. ಇದನ್ನು ನಾವು ಸ್ವಾಗತಿಸುತ್ತೇವೆ. ಉಭಯ ದೇಶಗಳು ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಮತ್ತೊಂದು ಕ್ಷೇತ್ರ ಇದಾಗಿದೆ ಎಂದರು.

ರಕ್ಷಣಾ ಕ್ಷೇತ್ರದಲ್ಲಿ ಸಹಕಾರ: ಭಾರತದಲ್ಲಿ ರಕ್ಷಣಾ ತಯಾರಿಕಾ ವಲಯದಲ್ಲಿ ಸಹ - ಉತ್ಪಾದನೆ ಮತ್ತು ಸಹ - ಅಭಿವೃದ್ಧಿಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ನಿಯಮಿತ ಜಂಟಿ ವ್ಯಾಯಾಮ ಮತ್ತು ತರಬೇತಿ ಕೋರ್ಸ್‌ಗಳನ್ನು ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಭಾರತ - ಇಟಲಿ ದ್ವಿಪಕ್ಷೀಯ ಸಂಬಂಧಕ್ಕೆ 75ರ ವಸಂತ: ಈ ವರ್ಷ ಭಾರತ ಮತ್ತು ಇಟಲಿ ತಮ್ಮ ದ್ವಿಪಕ್ಷೀಯ ಸಂಬಂಧದ 75ನೇ ವಾರ್ಷಿಕೋತ್ಸವ ಆಚರಿಸುತ್ತಿವೆ. ನವೀಕರಿಸಬಹುದಾದ ಇಂಧನ, ಜಲಜನಕ, ಐಟಿ, ಟೆಲಿಕಾಂ, ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತವು ಇಟಲಿಯೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಅಭಿಮತ ವ್ಯಕ್ತಪಡಿಸಿದರು.

ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ: ಉಕ್ರೇನ್ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪರಿಹರಿಸಬಹುದು ಎಂದು ಭಾರತ ಮೊದಲಿನಿಂದಲೂ ಸ್ಪಷ್ಟಪಡಿಸಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇಟಲಿಯ ಸಕ್ರಿಯ ಭಾಗವಹಿಸುವಿಕೆಯನ್ನು ನಾವು ಸ್ವಾಗತಿಸುತ್ತೇವೆ. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಇಟಲಿ ಸೇರಲು ನಿರ್ಧರಿಸಿರುವುದು ಸಂತಸದ ವಿಷಯ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.

ಇಟಲಿ ಪ್ರಧಾನಿಗೆ ಆತ್ಮೀಯವಾಗಿ ಸ್ವಾಗತಿಸಿದ ಮೋದಿ: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಮೊದಲ ಭಾರತ ಭೇಟಿಯನ್ನು ನಾನು ಸ್ವಾಗತಿಸುತ್ತೇನೆ. ಕಳೆದ ವರ್ಷದ ಚುನಾವಣೆಯಲ್ಲಿ, ಇಟಲಿಯ ಜನರು ಅವರಿಗೆ ಮತ ಹಾಕಿದರು. ಅವರು ಇಟಲಿಯ ಮೊದಲ ಮಹಿಳೆ ಮತ್ತು ಕಿರಿಯ ಪ್ರಧಾನಿಯಾಗಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಭಾರತೀಯರ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಸಂತಸಪಟ್ಟರು. ಇದನ್ನೂ ಮುನ್ನ ಇಟಲಿ ಪ್ರಧಾನಿಗೆ ಪ್ರಧಾನಿ ಮೋದಿಯವರು ಆತ್ಮೀಯ ಸ್ವಾಗತ ಕೋರಿದರು. ಅವರು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಔಪಚಾರಿಕ ಸ್ವಾಗತದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧಕ್ಕೆ ರಾಜತಾಂತ್ರಿಕತೆಯ ಮೂಲಕ ಪರಿಹಾರ: ಭಾರತದ ನಿಲುವಿನ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ

Last Updated : Mar 2, 2023, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.