ETV Bharat / international

International Yoga Day: ವಿಡಿಯೋ ಸಂದೇಶದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಇಂದು International Yoga Day ಆಚರಣೆ. ದೇಶದಲ್ಲಿ ಬೆಳಗ್ಗೆಯಿಂದಲೇ ಯೋಗ ಆಚರಣೆ ಶುರುಗೊಂಡಿದ್ದು, ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರು ತಮ್ಮ ದೇಶವಾಸಿಗಳಿಗೆ ಯೋಗ ದಿನದ ಶುಭಾಶಯಗಳನ್ನು ಕೋರಿದ್ದಾರೆ.

International Yoga Day  Prime Minister Modi conveyed his greetings  Modi conveyed his greetings through video  ವಿಡಿಯೋ ಸಂದೇಶದ ಮೂಲಕ ಶುಭಾಶಯ  ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ  ಯೋಗ ಆಚರಣೆ ಶುರು  ಅಮೆರಿಕಾ ಪ್ರವಾಸದಲ್ಲಿರುವ ಮೋದಿ  ಮೋದಿ ಅವರು ತಮ್ಮ ದೇಶವಾಸಿಗಳಿಗೆ ಯೋಗಾ ದಿನದ ಶುಭಾಶಯ  ಯೋಗವು ಜನರ ಮಧ್ಯೆ ಸಂಪರ್ಕ ಹೊಂದಿಸುವ ಕೆಲಸ  ಹೊಸ ಆಲೋಚನೆಗಳನ್ನು ಸ್ವಾಗತಿಸಿದ್ದೇವೆ  ನಾವು ವೈವಿಧ್ಯಗಳನ್ನು ಶ್ರೀಮಂತ  ವಿರೋಧ ಮತ್ತು ಪ್ರತಿರೋಧವನ್ನು ಹೋಗಲಾಡಿಸಬೇಕು
ವಿಡಿಯೋ ಸಂದೇಶದ ಮೂಲಕ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ
author img

By

Published : Jun 21, 2023, 7:45 AM IST

ನ್ಯೂಯಾರ್ಕ್‌, ಅಮೆರಿಕ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ದೇಶವಾಸಿಗಳಿಗೆ ಮತ್ತು ಇಡೀ ಜಗತ್ತಿಗೆ International Yoga Day ಮಹತ್ವವನ್ನು ತಿಳಿಸಿ ಶುಭಾಶಯ ಕೋರಿದರು. ಯೋಗವು ಜನರ ಮಧ್ಯೆ ಸಂಪರ್ಕ ಹೊಂದಿಸುವ ಕೆಲಸ ಮಾಡುತ್ತದೆ. ಇಂದು ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೋಗ ದಿನಾಚಾರಣೆಯಲ್ಲಿ 180ಕ್ಕೂ ಹೆಚ್ಚು ದೇಶಗಳು ಭಾಗಿಯಾಗಲಿವೆ ಎಂದು ಸಂತಸ ವ್ಯಕ್ತಪಡಿಸಿದರು.

  • #WATCH | At around 5:30 pm IST, I will participate in the Yoga program which is being organised at the headquarters of the United Nations. The coming together of more than 180 countries on India's call is historic. When the proposal for Yoga Day came to the United Nations General… pic.twitter.com/oHeehPkuZe

    — ANI (@ANI) June 21, 2023 " class="align-text-top noRightClick twitterSection" data=" ">

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನ್ಯೂಯಾರ್ಕ್‌ನಲ್ಲಿಂದು ದೇಶವಾಸಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಯೋಗವನ್ನು ಇಂದು ಇಡೀ ಜಗತ್ತು ಅಳವಡಿಸಿಕೊಂಡಿದೆ. ಇಂದು ಯೋಗ ಜಾಗತಿಕ ಚೇತನವಾಗಿದೆ. ಯೋಗವು ನಮ್ಮ ಒಳನೋಟವನ್ನು ವಿಸ್ತರಿಸುತ್ತದೆ. ಯೋಗದ ಮೂಲಕ ನಮ್ಮ ಆಂತರಿಕ ವಿರೋಧಾಭಾಸಗಳನ್ನು ಕೊನೆಗೊಳಿಸಬೇಕು ಎಂದು ಮೋದಿ ಕರೆ ನೀಡಿದರು.

ನಾವು ಹೊಸ ಆಲೋಚನೆಗಳನ್ನು ಸ್ವಾಗತಿಸಿದ್ದೇವೆ. ನಾವು ವೈವಿಧ್ಯಗಳನ್ನು ಶ್ರೀಮಂತಗೊಳಿಸಿದ್ದೇವೆ. ಯೋಗದ ಮೂಲಕ ವಿರೋಧ ಮತ್ತು ಪ್ರತಿರೋಧವನ್ನು ಹೋಗಲಾಡಿಸಬೇಕು. ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಸ್ಪೂರ್ತಿಯನ್ನು ನಾವು ಜಗತ್ತಿನ ಮುಂದೆ ಉದಾಹರಣೆಯಾಗಿ ಪ್ರಸ್ತುತಪಡಿಸಬೇಕು ಎಂದರು.

ಯೋಗಕ್ಕೆ ಕ್ರಿಯಾಶೀಲತೆ ಯೋಗ ಎಂದು ಹೇಳಲಾಗಿದೆ. ನಾವು ಯೋಗದ ಸಾಧನೆಯನ್ನು ತಲುಪಿದಾಗ ಈ ಮಂತ್ರವು ಸ್ವಾತಂತ್ರ್ಯದ ಅಮೃತದಲ್ಲಿ ಬಹಳ ಮುಖ್ಯವಾಗಿತ್ತು. ಯೋಗದ ಮೂಲಕ ನಾವು ಕರ್ಮಯೋಗದವರೆಗೆ ಪ್ರಯಾಣಿಸಿದ್ದೇವೆ. ಯೋಗದಿಂದ ನಮ್ಮ ಆರೋಗ್ಯವೂ ಸುಧಾರಿಸುತ್ತದೆ ಎಂದು ನಾನು ನಂಬುತ್ತೇನೆ. ನಿಮ್ಮೆಲ್ಲರಿಗೂ ಯೋಗ ದಿನದ ಶುಭಾಶಯಗಳು ಎಂದು ಮೋದಿ ಹೇಳಿದರು.

'ಓಷನ್ ರಿಂಗ್ ಆಫ್ ಯೋಗ'ದಿಂದಾಗಿ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಹೆಚ್ಚು ವಿಶೇಷವಾಗಿದೆ ಎಂದು ಪ್ರಧಾನಿ ಮೋದಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಈ ವಿಚಾರವು ಯೋಗದ ಕಲ್ಪನೆ ಮತ್ತು ಸಾಗರದ ವಿಸ್ತಾರವನ್ನು ಆಧರಿಸಿದೆ. ನಮ್ಮ ಋಷಿಮುನಿಗಳು ಯೋಗವನ್ನು ವ್ಯಾಖ್ಯಾನಿಸಿದ್ದಾರೆ. ಈ ಯೋಗದ ವಿಸ್ತಾರದಿಂದ ಇಂದು ಇಡೀ ಜಗತ್ತನ್ನು ಒಂದು ಕುಟುಂಬವಾಗಿ ಒಳಗೊಂಡಿದೆ ಎಂದು ಹೇಳಿದರು.

ನಾನು ಇಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಇಲ್ಲಿ ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಂದಾಗಲಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಲಿದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮುಂದೆ ಯೋಗ ದಿನವನ್ನು ಪ್ರಸ್ತಾಪಿಸಿದಾಗ, ದಾಖಲೆ ಸಂಖ್ಯೆಯ ದೇಶಗಳು ಅದನ್ನು ಬೆಂಬಲಿಸಿದವು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ನಿಂದ ಭಾರತೀಯರಿಗೆ ಯೋಗದ ಮಹತ್ವದ ಸಂದೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದರು. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:30ರ ಸುಮಾರಿಗೆ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು ಜಾಗತಿಕ ಚಳುವಳಿಯಾಗಿದೆ.

ಓದಿ: PM Modi US Visit: 'ನಾನು ಮೋದಿ ಅವರ ಅಭಿಮಾನಿ': ಟ್ವಿಟರ್​​ ಸಿಇಒ ಎಲಾನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.