ನ್ಯೂಯಾರ್ಕ್: ತನ್ನ ಮನೆಯ ಬಳಿ ಜೀಪಿನಲ್ಲಿ ಕುಳಿತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಮರಣದಂಡನೆ ಮಾದರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯ ನಂತರ 31 ವರ್ಷದ ಸತ್ನಾಮ್ ಸಿಂಗ್ರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಸತ್ನಾಮ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಓದಿ: ನಮಗೆ ಇಷ್ಟ ಇರದಿದ್ರೂ ಅಮೆರಿಕಕ್ಕೆ ಓದಲು ಹೋದ.. ಮಗನ ಸಾವಿನ ಸುದ್ದಿ ತಿಳಿದು ಆಘಾತಕೊಳ್ಳಗಾದ ತಂದೆ!
ಈ ಘಟನೆಯು ದಕ್ಷಿಣ ಓಝೋನ್ ಪಾರ್ಕ್ ನೆರೆಹೊರೆಯಲ್ಲಿ ಸಂಭವಿಸಿದೆ. ಇದು ರಿಚ್ಮಂಡ್ ಹಿಲ್‌ನ ಪಕ್ಕದಲ್ಲಿದ್ದು, ಏಪ್ರಿಲ್‌ನಲ್ಲಿ ಇಬ್ಬರು ಸಿಖ್ ಪುರುಷರ ಮೇಲೆ ಹಲ್ಲೆ ನಡೆಸಲಾಗಿತ್ತು. ರಿಚ್ಮಂಡ್ ಹಿಲ್ ಮತ್ತು ದಕ್ಷಿಣ ಓಝೋನ್ ಪಾರ್ಕ್ ಸೇರಿ ಎರಡೂ ಪ್ರದೇಶಗಳಲ್ಲಿ ಭಾರತೀಯ ಮೂಲದ ಹೆಚ್ಚಿನ ಸಂಖ್ಯೆಯ ಜನರು ಹೆಚ್ಚಾಗಿ ಜೀವನ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ಸತ್ನಾಮ್ ಸಿಂಗ್ ಗುಂಡಿನ ದಾಳಿಯ ಪ್ರತ್ಯಕ್ಷದರ್ಶಿ ಹೇಳಿಕೆಗಳ ನಡುವೆ ವ್ಯತ್ಯಾಸವಿದೆ ಎಂದು ಸುದ್ದಿ ಮಾಧ್ಯಮವೊದು ಹೇಳಿದೆ.
ಶೂಟರ್ ಕಾಲ್ನಡಿಗೆಯಲ್ಲಿ ಬಂದು ಜೀಪಿನಲ್ಲಿ ಕುಳಿತಿದ್ದ ಸತ್ನಾಮ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದುಷ್ಕರ್ಮಿ ಕಾರಿನಿಂದ ಗುಂಡು ಹಾರಿಸಿದ್ದು, ಆತನ ಮನೆಯ ಭದ್ರತಾ ಕ್ಯಾಮೆರಾವು ಈ ಘಟನೆಯನ್ನು ಸೆರೆಹಿಡಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆ ಬಳಿಕವೇ ಸತ್ಯಾಸತ್ಯತೆ ಬಗ್ಗೆ ತಿಳಿದು ಬರಬೇಕಿದೆ.
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಭಾನುವಾರ ಬೆಳಗ್ಗೆ 25 ವರ್ಷದ ಭಾರತೀಯ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೃತರು ತೆಲಂಗಾಣ ಮೂಲದ ಸಾಯಿ ಚರಣ್ ನಕ್ಕಾ ಎಂದು ಗುರುತಿಸಲಾಗಿದ್ದು, 2022 ರ ಜನವರಿಯಲ್ಲಿ ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.