ETV Bharat / international

ಭಾರತ ಒಂದು 'ದೇಶವಲ್ಲ' ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಕೌಂಟರ್‌ ಕೊಟ್ಟ ಭಾರತೀಯ ಅಧಿಕಾರಿ

author img

By

Published : May 25, 2022, 9:48 AM IST

'ರಾಷ್ಟ್ರ' ಎಂಬ ಪದವನ್ನು ಆಚಾರ್ಯ ಚಾಣಕ್ಯ ಕೂಡಾ ಬಳಸಿದ್ದಾರೆ. ಅಷ್ಟೇ ಏಕೆ?, 'ರಾಷ್ಟ್ರ' ಎಂದರೆ ಸಂಸ್ಕೃತದಲ್ಲಿ ದೇಶ ಎಂದೇ ಅರ್ಥ. ಹೀಗೆ ಹೇಳುತ್ತಾ, ಭಾರತೀಯ ನಾಗರಿಕ ಸೇವೆಗಳ ಅಧಿಕಾರಿ ಸಿದ್ದಾರ್ಥ್‌ ವರ್ಮಾ, ರಾಹುಲ್ ಗಾಂಧಿ ರಾಷ್ಟ್ರ ಎಂಬುದನ್ನು 'ರಾಜನ ಅಧಿಪತ್ಯ' ಎಂದು ಬಣ್ಣಿಸಿರುವುದನ್ನು ಖಂಡಿಸಿದರು. 'ಗಾಂಧೀಜಿಯ ಪರಿಕಲ್ಪನೆಯ ಭಾರತ' ಎಂಬ ವಿಚಾರದ ಬಗ್ಗೆ ಲಂಡನ್‌ನ ಕೇಂಬ್ರಿಡ್ಜ್‌ ವಿವಿ ವ್ಯಾಪ್ತಿಯ ಕಾಲೇಜಿನಲ್ಲಿ ಸಂವಾದ ನಡೆಯುತ್ತಿದ್ದಾಗ ಈ ಸನ್ನಿವೇಶ ಜರುಗಿತು.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ಲಂಡನ್‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭಾಷಣದ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆ, ಭಾರತೀಯ ನಾಗರಿಕ ಸೇವೆಗಳ ಅಧಿಕಾರಿಯೊಬ್ಬರು ಭಾರತದ ಬಗೆಗಿನ ರಾಹುಲ್ ವಿಚಾರಧಾರೆಯನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಅಧಿಕಾರಿ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೇ ಟ್ರಾಫಿಕ್ ಸೇವೆಗಳ ಅಧಿಕಾರಿಯಾಗಿರುವ ಇವರು, ಪಬ್ಲಿಕ್‌ ಪೋಲಿಸ್‌ ಬಗ್ಗೆ ಕೇಂಬ್ರಿಡ್ಜ್‌ ವಿವಿಯಲ್ಲಿ ಕಾಮನ್‌ವೆಲ್ತ್‌ ಸ್ಕಾಲರ್‌ ಕೂಡಾ ಆಗಿದ್ದಾರೆ.

'ನೀವು ಭಾರತದ ಸಂವಿಧಾನದ 1ನೇ ಪರಿಚ್ಛೇದವನ್ನು ಉಲ್ಲೇಖಿಸಿ, ಭಾರತವು ದೇಶವಲ್ಲ, ರಾಜ್ಯಗಳ ಒಕ್ಕೂಟ ಎಂದಿದ್ದೀರಿ. ಆದ್ರೆ ಅದೇ ನೀವು ಸಂವಿಧಾನದ ಹಿಂದಿನ ಪುಟಗಳನ್ನು ತಿರುವಿದರೆ, ಮಹತ್ವದ ಭಾಗವಾಗಿರುವ ಪೀಠಿಕೆಯಲ್ಲಿ ಭಾರತವು ಒಂದು ದೇಶವೆಂದೇ ಸ್ಪಷ್ಟವಾದ ಉಲ್ಲೇಖವಿರುವುದನ್ನು ಗಮನಿಸುವಿರಿ. ಭಾರತವು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದು. ಇಷ್ಟಕ್ಕೂ 'ರಾಷ್ಟ್ರ' ಎಂಬ ಪರಿಕಲ್ಪನೆ ಅತ್ಯಂತ ಪುರಾತನವಾದ ವೇದಗಳಲ್ಲೂ ಇದೆ. ಹಾಗಾಗಿ ನಾವು ಅತ್ಯಂತ ಹಳೆಯ ನಾಗರಿಕತೆಯನ್ನು ಹೊಂದಿದ್ದೇವೆ. ಅಷ್ಟು ಮಾತ್ರವಲ್ಲ, ಇತಿಹಾಸಪ್ರಸಿದ್ಧ ತಕ್ಷಶಿಲಾ ವಿವಿಯಲ್ಲಿ ಆಚಾರ್ಯ ಚಾಣಕ್ಯ ಒಮ್ಮೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, 'ನೀವು ಬೇರೆ ಬೇರೆ ಜನಪದಗಳಿಗೆ ಸೇರಿರಬಹುದು, ಆದ್ರೆ ಅಂತಿಮವಾಗಿ ಭಾರತವೆಂಬ ರಾಷ್ಟ್ರಕ್ಕೆ ಸೇರಿರುವಿರಿ' ಎಂದು ಹೇಳಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯ' ಎಂದು ರಾಹುಲ್ ಸಮ್ಮುಖದಲ್ಲಿ ಈ ಅಧಿಕಾರಿ ವಿವರಿಸಿದರು.

  • Yesterday, in Cambridge, I questioned Mr. Rahul Gandhi on his statement that "India is not a nation but a Union of States". He asserted that India is not a nation but the result of negotiation between states. (His complete response will be shared once uploaded by organisers) pic.twitter.com/q5KluwenMf

    — Siddhartha Verma (@Sid_IRTS) May 24, 2022 " class="align-text-top noRightClick twitterSection" data=" ">

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಪ್ರಶ್ನಿಸಿದ ರಾಹುಲ್ ಗಾಂಧಿ, ಅವರು ಅಲ್ಲಿ ರಾಷ್ಟ್ರ ಎಂಬ ಪದ ಬಳಸಿದ್ದರೇ? ಎಂದರು. ಮುಂದುವರಿದು, ರಾಷ್ಟ್ರ ಅನ್ನೋದು 'ರಾಜನ ಆಡಳಿತ' ಎಂದು ಹೇಳಿದರು. ತಕ್ಷಣ ಪ್ರತಿಕ್ರಿಯಿಸಿದ ಅಧಿಕಾರಿ, ಅಲ್ಲ, ಸಂಸ್ಕೃತದಲ್ಲಿ 'ರಾಷ್ಟ್ರ' ಎಂದರೆ 'ದೇಶ' ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ರಾಹುಲ್, ರಾಷ್ಟ್ರ ಅನ್ನೋದು 'ಪಶ್ಚಿಮದ ಪರಿಕಲ್ಪನೆ' ಎಂದರು.

ಇದಕ್ಕೆ ವಿವರವಾದ ಉತ್ತರ ನೀಡಲು ಪ್ರಯತ್ನಿಸಿದ ಅಧಿಕಾರಿ, 'ನಾನು ರಾಷ್ಟ್ರದ ಬಗ್ಗೆ ಮಾತನಾಡುವಾಗ ಅದನ್ನು ರಾಜಕೀಯವಾಗಿ ತೆಗೆದುಕೊಂಡಿಲ್ಲ, ಏಕೆಂದರೆ, ಇದಕ್ಕೆ ಸಂಬಂಧಿಸಿದಂತೆ ನಾವು ಸಾಕಷ್ಟು ಪ್ರಯೋಗಗಳನ್ನು ಜಗತ್ತಿನಲ್ಲಿ ನೋಡಿದ್ದೇವೆ. ಒಂದು ರಾಷ್ಟ್ರವು ಅತ್ಯಂತ ಗಟ್ಟಿಯಾದ ಸಾಮಾಜಿಕ, ಸಾಂಸ್ಕೃತಿಕ ಬಂಧವನ್ನು ಹೊಂದಿರದ ಹೊರತು, ಒಂದು ಸಂವಿಧಾನವೇ ದೇಶವನ್ನು ರಚಿಸಲು ಸಾಧ್ಯವಿಲ್ಲ.

ಹೀಗಾಗಿ, ಭಾರತದ ಬಗೆಗಿನ ನಿಮ್ಮ ಆಲೋಚನೆಗಳು ತಪ್ಪಾಗಿವೆ. ಅಷ್ಟೇ ಅಲ್ಲ ವಿಧ್ವಂಸಕಾರಿಯೂ ಆಗಿದೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ನಿಮ್ಮ ಆಲೋಚನೆಗಳು ಸಾವಿರಾರು ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿರುವ ಭಾರತವನ್ನು ನಿಷ್ಪ್ರಯೋಜಕಗೊಳಿಸಲು ಪ್ರಯತ್ನಿಸುತ್ತವೆ' ಎಂದು ಅಧಿಕಾರಿ ಖಾರವಾಗಿ ಪ್ರತಿಕ್ರಿಯಿಸಿದರು. ಇದನ್ನು ಒಪ್ಪದ ರಾಹುಲ್ ಗಾಂಧಿ, 'ನನಗೆ ಹಾಗನ್ನಿಸುತ್ತಿಲ್ಲ' ಎಂದರು.

ಭಾರತ ಎನ್ನುವುದು ಕೇವಲ 75 ವರ್ಷಗಳ ರಾಜಕೀಯ ವ್ಯವಸ್ಥೆಯಲ್ಲ. ಭಾರತವರ್ಷ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿತ್ತು ಮತ್ತು ಭವಿಷ್ಯದಲ್ಲೂ ಶಾಶ್ವತವಾಗಿರಲಿದೆ ಎಂದು ಅಧಿಕಾರಿ ವೈರಲ್‌ ಆದ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಭಾರತ @75' ಎಂಬ ಕಾರ್ಯಕ್ರಮವನ್ನು ಸೋಮವಾರ ಲಂಡನ್ನಿನ ಪ್ರತಿಷ್ಟಿತ ಕೇಂಬ್ರಿಡ್ಜ್‌ ವಿವಿಯ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ, ಹಿಂದೂ ರಾಷ್ಟ್ರೀಯತೆ, ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಕುಟುಂಬದ ಪಾತ್ರದ ಬಗ್ಗೆ ಮಾತನಾಡಿದ್ದರು. 'ನೀವು ಈ ಕುರಿತಾಗಿ ಭಾರತದ ಮಾಧ್ಯಮಗಳಲ್ಲಿ 30 ಸೆಕೆಂಡುಗಳಿಗಿಂತ ಹೆಚ್ಚು ಮಾತು ಕೇಳಲಾರಿರಿ. ಏಕೆಂದರೆ ಭಾರತೀಯ ಮಾಧ್ಯಮಗಳನ್ನು ಖರೀದಿಸಲಾಗಿದೆ. ಸರ್ಕಾರವನ್ನು ಬೆಂಬಲಿಸುವ ದೊಡ್ಡ ಕೈಗಾರಿಕೋದ್ಯಮಿಗಳ ಹಿಡಿತದಲ್ಲಿ ಈ ಮಾಧ್ಯಮಗಳಿವೆ. ಹಾಗಾಗಿ, ನಾವು ರಾಜಕೀಯ ಪಕ್ಷವಾಗಿ ಹೋರಾಡುತ್ತಿಲ್ಲ, ಭಾರತವನ್ನು ಆಕ್ರಮಿಸಿಕೊಂಡಿರುವುದರ ಬಗ್ಗೆ ಹೋರಾಡುತ್ತಿದ್ದೇವೆ. ಈ ಹೋರಾಟ ಸುಲಭವಾಗಿಲ್ಲ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ನಾವು ಮಾಡುತ್ತಿದ್ದೇವೆ' ಎಂದು ರಾಹುಲ್ ಹೇಳಿದ್ದರು.

ಇದನ್ನೂ ಓದಿ: ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿ ಕೊಲೆ, ಹಂತಕನ ಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.