ETV Bharat / international

ಮೆಕ್ಸಿಕೊದಲ್ಲಿ ಭಾರತೀಯ ಪ್ರಜೆಗೆ ಗುಂಡು ಹಾರಿಸಿ ಹತ್ಯೆ; ಮತ್ತೋರ್ವನಿಗೆ ಗಾಯ

ಮೆಕ್ಸಿಕೊದಲ್ಲಿ ಭಾರತೀಯ ಪ್ರಜೆಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಬೈಕ್ ಸವಾರರ ಗುಂಪು ಭಾರತೀಯ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ಹೇಳಿವೆ.

Indian national ambushed, shot dead by robbers

author img

By ETV Bharat Karnataka Team

Published : Aug 22, 2023, 2:45 PM IST

ನ್ಯೂಯಾರ್ಕ್ (ಅಮೆರಿಕ): ಮೆಕ್ಸಿಕೋ ನಗರದಲ್ಲಿ ಬೈಕ್ ಸವಾರರ ಗುಂಪೊಂದು ಭಾರತೀಯ ಪ್ರಜೆಯೊಬ್ಬನನ್ನು ಗುಂಡಿಕ್ಕಿ ಕೊಂದು ಹಾಕಿದ್ದು, ಮತ್ತೋರ್ವನನ್ನು ಗಾಯಗೊಳಿಸಿದೆ. ರಾಜಧಾನಿ ಅಲ್ಗರಿನ್ ಹೊರಭಾಗದಲ್ಲಿ ಆಗಸ್ಟ್ 19 ರಂದು ನಡೆದ ಈ ಘಟನೆಯನ್ನು ದೃಢಪಡಿಸಿದ ಮೆಕ್ಸಿಕೊದಲ್ಲಿನ ಭಾರತೀಯ ರಾಯಭಾರ ಕಚೇರಿ, ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಅಧಿಕಾರಿಗಳಿಗೆ ತಿಳಿಸಿದೆ.

ಎರಡು ಮೋಟರ್​​ ಸೈಕಲ್ ಗಳಲ್ಲಿ ಬಂದ ನಾಲ್ವರು ಬೈಕ್ ಸವಾರರು ಭಾರತೀಯರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೀಡಾದ ಇಬ್ಬರ ಪೈಕಿ ಓರ್ವ ಗುಂಡೇಟಿನಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಮತ್ತು ಸ್ವಲ್ಪ ಗಾಯಗೊಂಡಿದ್ದ ಇನ್ನೊಬ್ಬರಿಗೆ ಘಟನಾ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು ಎಂದು ವರದಿ ತಿಳಿಸಿದೆ.

ಮೆಕ್ಸಿಕೊ ಸಿಟಿ ಇಂಟರ್​​ನ್ಯಾಷನಲ್​ ಏರ್​ಫೋರ್ಟ್​ ಬಳಿಯ ಸ್ಥಳದಲ್ಲಿ ಹಣವನ್ನು ವಿನಿಮಯ ಮಾಡಿಕೊಂಡಿದ್ದ ಭಾರತೀಯ ಪ್ರಜೆಗಳಿಂದ ಅಪರಿಚಿತ ದಾಳಿಕೋರರು 10,000 ಡಾಲರ್ ದರೋಡೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

"ಅತ್ಯಂತ ವಿಷಾದನೀಯ ಮತ್ತು ಹೃದಯ ವಿದ್ರಾವಕ ಘಟನೆಯಲ್ಲಿ ಮೆಕ್ಸಿಕೊದಲ್ಲಿ ವಾಸಿಸುತ್ತಿದ್ದ ಭಾರತೀಯ ಪ್ರಜೆಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ" ಎಂದು ರಾಯಭಾರ ಕಚೇರಿ ಭಾನುವಾರ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದೆ. "ರಾಯಭಾರ ಕಚೇರಿ ಮತ್ತು @IndianAssoMex ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅಗತ್ಯ ಬೆಂಬಲ ನೀಡುತ್ತಿದ್ದೇವೆ. ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸುವಂತೆ ನಾವು ಮೆಕ್ಸಿಕನ್ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದೇವೆ" ಎಂದು ರಾಯಭಾರ ಕಚೇರಿ ಹೇಳಿದೆ.

ಮೆಕ್ಸಿಕೊದಲ್ಲಿನ ಭಾರತೀಯ ಸಮುದಾಯವು ತೀರಾ ಚಿಕ್ಕದಾಗಿದೆ. ಕೇವಲ 8,000 ದಷ್ಟು ಭಾರತೀಯರು ಇಲ್ಲಿದ್ದಾರೆ. ಇದರಲ್ಲಿನ ಐದನೇ ಒಂದು ಭಾಗದಷ್ಟು ಭಾರತೀಯರು ಮೆಕ್ಸಿಕೊ ನಗರದಲ್ಲಿಯೇ ಇದ್ದಾರೆ. ಉಳಿದವರು ಹೆಚ್ಚಾಹಿ ಗ್ವಾಡಲಜರ, ಮಾಂಟೆರಿ, ಕುಯೆರ್ನಾವಾಕಾ, ಕ್ವೆರೆಟಾರೊ, ಕ್ಯಾನ್ಕುನ್ನಲ್ಲಿ ಹರಡಿದ್ದಾರೆ.

ಇಲ್ಲಿರುವ ಭಾರತೀಯರು ಹೆಚ್ಚಾಗಿ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋದಂತಹ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಐಟಿ ವೃತ್ತಿಪರರಾಗಿದ್ದಾರೆ. ಇತರರು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಕೆಲವರು ಉದ್ಯಮಿಗಳಾಗಿದ್ದಾರೆ.

ಕಳೆದ ಕೆಲ ದಶಕಗಳಲ್ಲಿ ಮೆಕ್ಸಿಕೊದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಸರ್ಕಾರಿ ಭ್ರಷ್ಟಾಚಾರ, ಮಾದಕವಸ್ತು ಕಳ್ಳಸಾಗಣೆ ಮತ್ತು ಕುಸಿಯುತ್ತಿರುವ ಆರ್ಥಿಕತೆ ದೇಶದ ಮುಂದಿರುವ ಪ್ರಮುಖ ಸಮಸ್ಯೆಗಳಾಗಿವೆ. 2006 ರಿಂದ ಸಂಘಟಿತ ಅಪರಾಧ ಹತ್ಯೆಗಳು ಮತ್ತು ಮಾದಕವಸ್ತು ಸಂಬಂಧಿತ ಗ್ಯಾಂಗ್ ವಾರ್​ಗಳಲ್ಲಿ ಲಕ್ಷಾಂತರ ಜನರು ಕೊಲ್ಲಲ್ಪಟ್ಟಿದ್ದಾರೆ. ಮಾದಕವಸ್ತು ಕಾರ್ಟೆಲ್​ಗಳನ್ನು ನಿಗ್ರಹಿಸಲು ಇಲ್ಲಿನ ಸರ್ಕಾರ ಸೈನ್ಯವನ್ನೇ ನಿಯೋಜಿಸಿದೆ.

ಮೆಕ್ಸಿಕೊ ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ಹಿರಿಯ ಪತ್ರಕರ್ತರು ಹೇಳುತ್ತಾರೆ. ಪತ್ರಕರ್ತರ ವಿರುದ್ಧ ನಡೆಯುವ ಬಹುತೇಕ ಹಿಂಸಾಚಾರ ಪ್ರಕರಣಗಳಲ್ಲಿ ಡ್ರಗ್ ಕಾರ್ಟೆಲ್​ಗಳ ಲೀಡರ್​ಗಳು ಮತ್ತು ಭ್ರಷ್ಟ ಅಧಿಕಾರಿಗಳು ಭಾಗಿಯಾಗಿರುತ್ತಾರೆ ಎಂದು ವರದಿಗಳು ಹೇಳಿವೆ. ಆದರೆ ಪತ್ರಕರ್ತರ ಮೇಲಿನ ದೌರ್ಜನ್ಯಗಳು ಎಲ್ಲಿಯೂ ಸುದ್ದಿಯಾಗುವುದಿಲ್ಲ. ಮೆಕ್ಸಿಕೊ ಲ್ಯಾಟಿನ್ ಅಮೆರಿಕಾದ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ : ಫುಕುಶಿಮಾ ಅಣು ತ್ಯಾಜ್ಯ ನೀರು ಗುರುವಾರದಿಂದ ಸಮುದ್ರಕ್ಕೆ ಬಿಡುಗಡೆ: ದೇಶ - ವಿದೇಶಗಳಲ್ಲಿ ಆತಂಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.