ETV Bharat / international

MIMO ವೈರ್‌ಲೆಸ್‌ನ ಆವಿಷ್ಕಾರ.. ಭಾರತೀಯ ಅಮೆರಿಕನ್​ ವಿಜ್ಞಾನಿ ಆರೋಗ್ಯಸ್ವಾಮಿ ಪೌಲ್‌ರಾಜ್​ಗೆ ಫ್ಯಾರಡೆ ಜಾಗತಿಕ ಪ್ರಶಸ್ತಿ

ಪೌಲ್‌ರಾಜ್ ಅವರಿಗೆ "MIMO ವೈರ್‌ಲೆಸ್‌ನ ಆವಿಷ್ಕಾರ, ಪ್ರಗತಿ ಮತ್ತು ವಾಣಿಜ್ಯೀಕರಣಕ್ಕಾಗಿ" ಎಂಬ ಉಲ್ಲೇಖವಿರುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Indian American scientist Arogyaswamy Paulraj awarded Faraday Global Prize
ಭಾರತೀಯ ಅಮೆರಿಕನ್​ ವಿಜ್ಞಾನಿ ಆರೋಗ್ಯಸ್ವಾಮಿ ಪೌಲ್‌ರಾಜ್​ಗೆ ಫ್ಯಾರಡೆ ಜಾಗತಿಕ ಪ್ರಶಸ್ತಿ ಪ್ರದಾನ
author img

By ETV Bharat Karnataka Team

Published : Oct 26, 2023, 2:44 PM IST

ವಾಷಿಂಗ್ಟನ್​: 4G ಹಾಗೂ 5G ಮೊಬೈಲ್‌ಗಳು ಮತ್ತು ವೈ-ಫೈ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಶಕ್ತಿಯುತಗೊಳಿಸುವ ಪ್ರಮುಖ ತಂತ್ರಜ್ಞಾನವಾದ MIMO ವೈರ್‌ಲೆಸ್‌ ಆವಿಷ್ಕಾರ ಮಾಡಿರುವ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಉನ್ನತ ಭಾರತೀಯ-ಅಮೆರಿಕನ್ ವಿಜ್ಞಾನಿ ಆರೋಗ್ಯಸ್ವಾಮಿ ಪೌಲ್‌ರಾಜ್ ಅವರಿಗೆ ಸಾಧನೆಯನ್ನು ಗುರುತಿಸಿ ಫ್ಯಾರಡೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಳೆದ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಪೌಲ್‌ರಾಜ್ ಅವರಿಗೆ "MIMO ವೈರ್‌ಲೆಸ್‌ನ ಆವಿಷ್ಕಾರ, ಪ್ರಗತಿ ಮತ್ತು ವಾಣಿಜ್ಯೀಕರಣಕ್ಕಾಗಿ" ಎಂಬ ಉಲ್ಲೇಖವಿರುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೌಲ್​ರಾಜ್​ ಅವರು ಫ್ಯಾರಡೆ ಪದಕ ಪಡೆದ 100ನೇ ವ್ಯಕ್ತಿಯಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಇಂಜಿನಿಯರ್​ಗಳು ಹಾಗೂ ವಿಜ್ಞಾನಿಗಳಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಈ ಫ್ಯಾರಡೆ. ಮೊದಲ ಫ್ಯಾರಡೆ ಪ್ರಶಸ್ತಿಯನ್ನು 1922ರಲ್ಲಿ ಆಲಿವರ್​ ಹೆವಿಸೈಡ್​ ಅವರಿಗೆ ನೀಡಲಾಯಿತು. ಫ್ಯಾರಡೆ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಜಾಗತಿಕ ಮನ್ನಣೆಯಾಗಿದೆ ಎಂದು ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಸ್ವೀಕರಿಸಿದ ಪೌಲ್​ರಾಜ್​ ತಮ್ಮ ಸಂತಸ ಹಂಚಿಕೊಂಡಿದ್ದು, "IET ಫ್ಯಾರಡೆ ಪದಕವನ್ನು ಪಡೆದಿರುವುದಕ್ಕೆ ನನಗೆ ಅತ್ಯಂತ ಗೌರವವಿದೆ. ಡಿಜಿಟಲ್ ಪ್ರವೇಶವು ಅವಕಾಶ ಸೃಷ್ಟಿಯ ವಿಷಯದಲ್ಲಿ ನಿಜವಾಗಿಯೂ ಸಮೀಕರಣವಾಗಿದೆ ಎಂದು ನಾನು ನಂಬುತ್ತೇನೆ. 5G ಜೊತೆಗೆ ಭಾರತ ತಂತ್ರಜ್ಞಾನದ ಉದ್ಯಮಗಳಲ್ಲಿ ಪ್ರವೇಶಿಸಲು ಮತ್ತು ಯಶಸ್ವಿಯಾಗಲು ಸ್ಪಷ್ಟ ಸಾಮರ್ಥ್ಯ ಹೊಂದಿದೆ" ಎಂದು ಹೇಳಿದರು.

"ಈ ಕೈಗಾರಿಕೆಗಳಲ್ಲಿನ ಎಲ್ಲಾ ಮೌಲ್ಯವರ್ಧನೆಯು ನಾವೀನ್ಯತೆ ಮತ್ತು IP ಮಾಲೀಕತ್ವದಿಂದ ಬಂದಿರುವುದರಿಂದ, ಉದ್ಯಮ ಪ್ರವೇಶಕ್ಕೆ ಅನೇಕ ಅಡೆತಡೆಗಳನ್ನು ಹೊಂದಿದೆ. ಯಶಸ್ವಿ ಹಾದಿಯನ್ನು ರೂಪಿಸಲು ಭಾರತವು ಎಲ್ಲಾ ಉದ್ಯಮದ ಡೈನಾಮಿಕ್ಸ್ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು" ಎಂದರು.

ಪೌಲ್​ರಾಜ್ ಅವರು MIMO ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಅನೇಕ ಜಾಗತಿಕ ಗೌರವಗಳನ್ನು ಪಡೆದಿದ್ದಾರೆ. ಅವರು ಭಾರತೀಯ ಮತ್ತು ಯುಎಸ್ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯಾದ್ಯಂತ ಹಲವಾರು ಸಲಹಾ ಸಮಿತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೆಮಿಕಂಡಕ್ಟರ್ ಮಿಷನ್‌ನೊಂದಿಗೆ ಫ್ಯಾಬ್ಲೆಸ್​ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1944 ರಲ್ಲಿ ತಮಿಳುನಾಡಿನ ಪೊಲ್ಲಾಚಿಯಲ್ಲಿ ಜನಿಸಿದ ಪೌಲ್​ರಾಜ್​ ಅವರು 1965ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಭಾರತೀಯ ನೌಕಾಪಡೆಗೆ ನೇಮಕಗೊಂಡರು. 25 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದರು.

ಪೌಲರಾಜ್ ಅವರು ಜಲಾಂತರ್ಗಾಮಿ ವಿರೋಧಿ ಸೋನಾರ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿ ಎರಡು ಯಶಸ್ವಿ ಯೋಜನೆಗಳ ನೇತೃತ್ವ ವಹಿಸಿದ್ದರು. 1977 ಮತ್ತು 1983 ರ ನಡುವೆ ಅಭಿವೃದ್ಧಿಪಡಿಸಲಾದ APSOH ಸೋನಾರ್ ಬಹುಶಃ ವಿಶ್ವದ ಅತ್ಯಂತ ಸುಧಾರಿತ ಸೋನಾರ್ ಸಿಸ್ಟಮ್ ಮತ್ತು ಆ ಅವಧಿಯ ಭಾರತದ ಅತ್ಯಂತ ಯಶಸ್ವಿ ಮಿಲಿಟರಿ ತಂತ್ರಜ್ಞಾನ ಸಾಧನೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ AI ಮತ್ತು ರೊಬೊಟಿಕ್ಸ್, ಮಿಲಿಟರಿ ಎಲೆಕ್ಟ್ರಾನಿಕ್ಸ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಎನ್ನುವ ಮೂರು ರಾಷ್ಟ್ರೀಯ ಪ್ರಯೋಗಾಲಯಗಳ ಸ್ಥಾಪಕರು ಹಾಗೂ ಸಹ ಸ್ಥಾಪಕರಾಗಿದ್ದರು. ಆದರೆ ಸಂದರ್ಭಗಳು ಅವರನ್ನು 1991ರಲ್ಲಿ ಭಾರತವನ್ನು ತೊರೆದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನು ಸೇರುವಂತೆ ಮಾಡಿತ್ತು. 1992ರಲ್ಲಿ US ರಕ್ಷಣಾ ಇಲಾಖೆಯ DARPA ಯೋಜನೆಯಲ್ಲಿ ಕೆಲಸ ಮಾಡುವಾಗ MIMO ತಂತ್ರವನ್ನು ಕಂಡುಹಿಡಿದರು ಎಂದು ಪ್ರಕಟಣೆ ವಿವರಿಸಿದೆ.

ಇದನ್ನೂ ಓದಿ : ಭಾರತೀಯ ಅಮೆರಿಕನ್​ ವಿಜ್ಞಾನಿಗಳಿಗೆ ಅಮೆರಿಕದ ರಾಷ್ಟ್ರೀಯ ಗೌರವ: ಸುರೇಶ್​, ಅಶೋಕ್​ ಗಾಡ್ಗಿಲ್​ಗೆ ಬೈಡನ್​ ರಿಂದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.